ಕೈಕೊಟ್ಟ ವಿದ್ಯುತ್, ಕುತಂತ್ರ ರಾಜಕಾರಣ: ನಿಖಿಲ್ ಕುಮಾರಸ್ವಾಮಿ

| Published : Aug 09 2024, 12:31 AM IST

ಕೈಕೊಟ್ಟ ವಿದ್ಯುತ್, ಕುತಂತ್ರ ರಾಜಕಾರಣ: ನಿಖಿಲ್ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ತಾಲೂಕಿನ ಕಿರಂಗೂರು ವೃತ್ತದಿಂದ ಪಟ್ಟಣದಲ್ಲಿ ನಡೆಯುತ್ತಿದ್ದ ಬಹಿರಂಗ ಸಭೆ ವರೆವಿಗೂ ಪಂಚಿನ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಂಗಪಟ್ಟಣ

ಪಟ್ಟಣದ ಹೆದ್ದಾರಿಯಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡುತ್ತಿದ್ದ ವೇಳೆ ವಿದ್ಯುತ್ ಕೈಕೊಟ್ಟಿತು.

ಈ ವೇಳೆ ನಿಖಿಲ್ ಕುಮಾರಸ್ವಾಮಿ ಮೈಕ್ ಹಿಡಿದು ಮಾತನಾಡಿ, ಪಟ್ಟಣದ ಎಲ್ಲಾ ಕಡೆ ವಿದ್ಯುತ್ ಇದ್ದು, ಕೇವಲ ಈ ಸ್ಥಳದಲ್ಲಿ ಮಾತ್ರ ವಿದ್ಯುತ್ ಕಟ್ ಮಾಡುವಂತಹ ಕುತಂತ್ರ ರಾಜಕಾರಣ, ಪಾದಯಾತ್ರೆಗೆ ತೊಂದರೆ ಕೊಡುವ ಕೆಲಸಗಳಿಗೆ ನಾವು ಹೆದುರುವುದಿಲ್ಲ ಎಂದು ಹರಿಹಾಯ್ದರು.

ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಅವರ ಶೀಗ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೊತೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಧೈರ್ಯ ಹೇಳಿದ್ದೇನೆ ಎಂದರು.

ಪಂಜಿನ ಮೆರವಣಿಗೆ:

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ತಾಲೂಕಿನ ಕಿರಂಗೂರು ವೃತ್ತದಿಂದ ಪಟ್ಟಣದಲ್ಲಿ ನಡೆಯುತ್ತಿದ್ದ ಬಹಿರಂಗ ಸಭೆ ವರೆವಿಗೂ ಪಂಚಿನ ಮೆರವಣಿಗೆ ನಡೆಸಿದರು.

ಈ ವೇಳೆ ನಿಖಿಲ್ ಕುಮಾರಸ್ವಾಮಿ ಸಹ ಪಂಚಿನ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದರು. ನಂತರ ನಂಜುಂಡೇಗೌಡ ಮಾತನಾಡಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದಿಂದ ದುರಾಡಳಿತ ಹೆಚ್ಚಾಗಿ, ರಾಜ್ಯದ ಜನರು ಕತ್ತಲಲ್ಲಿ ಮುಳುವಂತಾಗಿತ್ತು. ಕತ್ತಲು ಕವಿದು ಬೆಳಕು ಬರುವಂತೆ ಪಂಜಿನ ಮೆರವಣಿಗೆ ನಡೆಸಿದ್ದೇವೆ ಎಂದರು.