ಮುಸ್ಲಿಂ ಗೂಂಡಾನನ್ನು ನೇಣಿಗೆ ಹಾಕಿ, ಇಲ್ಲವೇ ಗುಂಡಿಟ್ಟು ಕೊಲ್ಲಿ: ಕೆ.ಎಸ್‌.ಈಶ್ವರಪ್ಪ ಆಕ್ರೋಶ

| Published : Apr 21 2024, 02:21 AM IST

ಮುಸ್ಲಿಂ ಗೂಂಡಾನನ್ನು ನೇಣಿಗೆ ಹಾಕಿ, ಇಲ್ಲವೇ ಗುಂಡಿಟ್ಟು ಕೊಲ್ಲಿ: ಕೆ.ಎಸ್‌.ಈಶ್ವರಪ್ಪ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಯಾರಿಗೆ ಚಾಕು ಹಾಕಿದರೂ ಕಾಂಗ್ರೆಸ್‌ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಎಂಬ ಧೈರ್ಯ ಮುಸ್ಲಿಂ ಗೂಂಡಾಗಳಿಗೆ ಬಂದಿದೆ. ಇದರಿಂದ ಅವರು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಕಾಂಗ್ರೆಸ್‌ ಸರ್ಕಾರ ಹಿಂದು ವಿರೋಧಿ ಸರ್ಕಾರವಾಗಿದೆ. ಸರ್ಕಾರ ಈಗಲೂ ಸುಮ್ಮನಿದ್ದರೆ ಹಿಂದೂ ಸಮಾಜದವರು ಹರಿಸುವ ಒಂದು ಹನಿ ರಕ್ತವೂ ನಿಮ್ಮ ಅಧಿಕಾರವನ್ನೇ ಕಿತ್ತುಕೊಳ್ಳಬಹುದು ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಖಡಕ್‌ ಕಿಡಿಕಾರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾವೇನೇ ಕೊಲೆ ಮಾಡಿದರೂ, ಯಾರಿಗೆ ಚಾಕು ಹಾಕಿದರೂ ಕಾಂಗ್ರೆಸ್‌ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಎಂಬ ಧೈರ್ಯ ಮುಸ್ಲಿಂ ಗೂಂಡಾಗಳಿಗೆ ಬಂದಿದೆ. ಇದರಿಂದ ಅವರು ಅಟ್ಟಹಾಸ ಮೆರೆಯುತ್ತಿದ್ದಾರೆ. ಆದರೆ, ಹಿಂದು ಸಮಾಜ ಜಾಗೃತಿ ಆದರೆ ಈ ಸರ್ಕಾರ ಉಳಿಯಲ್ಲ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಹಿಂದುಗಳ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಹಿಂದು ಯುವತಿ ಮೇಲೆ ಮುಸ್ಲಿಂ ಗೂಂಡಾ ಚಾಕುನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ್ಯದ ಉತ್ತರ ನೀಡುತ್ತಿದೆ. ಕಾಲೇಜು ಆವರಣಕ್ಕೆ ಹೋಗಿ ಹಿಂದು ಯುವತಿಯನ್ನು ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಸರ್ಕಾರ ಕೊಲೆಗಾರನಿಗೆ ಒಂದು ನೇಣಿಗೆ ಹಾಕಬೇಕು, ಇಲ್ಲ ಗುಂಡಿಟ್ಟು ಕೊಲ್ಲಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿಯಲ ನೇಹಾ ಹತ್ಯೆ ವಿಚಾರದಲ್ಲಿ ರಾಜಕಾರಣವನ್ನು ನಾನು ಮಾಡಲ್ಲ. ನಮ್ಮ ಹೆಣ್ಣು ಮಗಳ ಜೀವ ಹೋಗಿದೆ. ಕಾಂಗ್ರೆಸ್ ನವರು ಇದರ ಬಗ್ಗೆ ರಾಜಕೀಯ ಮಾಡುತ್ತಿದೆ‌. ಗೃಹ ಸಚಿವ ಜಿ.ಪರಮೇಶ್ವರ್‌ ಅವರು ತನಿಖೆಗೂ ಮುನ್ನವೇ ಲವ್‌ ಜಿಹಾದ್‌ ಅಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಎಂ.ಬಿ.ಪಾಟೀಲ್ ಹುಬ್ಬಳ್ಳಿ ಪ್ರಕರಣವನ್ನ ಧರ್ಮದ ಲೇಪನ ಮಾಡಬೇಡಿ ಎಂದು ಹೇಳಿದ್ದಾರೆ. ಅವರ ಮಗಳಿಗೆ ಈ ರೀತಿ ಚಾಕು ಹಾಕಿದ್ದರೆ ಅವರು ಸುಮ್ಮನೆ ಇರ್ತಿದ್ದರಾ? ಇಬ್ಬರೂ ಬೇಜವಾಬ್ದಾರಿ ಸಚಿವರು ಎಂದು ಹರಿಹಾಯ್ದರು.

ಇನ್ನು ಕಾಂಗ್ರೆಸ್‌ ನಾಯಕ ಸುರ್ಜೆವಾಲ ಅವರು ಕೊಲೆಗಾರನ್ನು ತಕ್ಷಣವೇ ಬಂಧಿಸಿದ್ದೇವೆ ಎಂದಿದ್ದಾರೆ. ಇದು ಸಮಜಾಯಿಸಿ ಕೊಡುವ ರೀತಿಯೇ? ಆಕಸ್ಮಾತ್‌ ಅವರ ಮಗಳಿಗೆ ಈ ರೀತಿ ಆಗಿ ಕೇಂದ್ರ ಗೃಹ ಅಮಿತ್‌ ಶಾ ಅವರು 5 ನಿಮಿಷದಲ್ಲಿ ಕೊಲೆಗಾರರನ್ನು ಬಂಧಿಸಿದ್ದೇವೆ ಎಂದರೆ ಏನ್‌ ಅರ್ಥ? ನಾವು ಕೊಲೆ ಆಗದಂತೆ ನೋಡಿಕೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ನಾಳೆ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ: ಹುಬ್ಬಳ್ಳಿಯಲ್ಲಿ ಹಿಂದು ಯುವತಿ ಕೊಲೆ ಸೇರಿದಂತೆ ಬೆಂಗಳೂರು, ಚನ್ನಗಿರಿ ಪ್ರಕರಣವನ್ನೂ ಖಂಡಿಸಿ ರಾಷ್ಟ್ರಭಕ್ತರ ಬಳಗದಿಂದ ಏ.22ರಂದು ಬೆಳಗ್ಗೆ 10 ಗಂಟೆಗೆ ನಗರದ ದೈವಜ್ಞ ಕಲ್ಯಾಣ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಂದು ದೈವಜ್ಞ ಕಲ್ಯಾಣ ಮಂದಿರದಿಂದ ಆರಂಭವಾಗುವ ಪ್ರತಿಭಟನೆ ಮೆರವಣಿಗೆ ದುರ್ಗಿಗುಡಿ, ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತ, ಬಾಲರಾಜ್‌ ಅರಸು ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ ಎಂದರು.

ನಮ್ಮ ಪ್ರತಿಭಟನೆಗೆ ಅನುಮತಿ ಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಕೋರಿದ್ದೇವೆ. ಅನುಮತಿ ಕೊಡುತ್ತೇವೆ ಎಂದಿದ್ದಾರೆ. ಒಂದುವೇಳೆ ಅನುಮತಿ ಕೊಡದಿದ್ದರೂ ಹಿಂದುಗಳಿಗಾಗಿ ಪ್ರತಿಭಟನೆ ಮಾಡೇ ಮಾಡುತ್ತಿದ್ದೇವೆ. ಅವರು ಬೇಕಾದರೆ ನಮ್ಮನ್ನು ಬಂಧಿಸಲಿ, ಹಿಂದುಗಳಿಗೆ ಅನ್ಯಾಯ ಆದಾಗ ನೋಡಿಕೊಂಡು ಸುಮ್ಮನೆ ಕೂರುವ ಮನುಷ್ಯ ನಾನಲ್ಲ. ನಾವು ಪ್ರತಿಭಟನೆ ಮಾಡೇ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.