ರಾಜ್ಯಮಟ್ಟಕ್ಕೆ ಹಾನಗಲ್ಲು ಸರ್ಕಾರಿ ಪ್ರೌಢಶಾಲೆ ಕ್ರೀಡಾಪಟುಗಳು
KannadaprabhaNewsNetwork | Published : Oct 30 2023, 12:30 AM IST / Updated: Oct 30 2023, 12:31 AM IST
ರಾಜ್ಯಮಟ್ಟಕ್ಕೆ ಹಾನಗಲ್ಲು ಸರ್ಕಾರಿ ಪ್ರೌಢಶಾಲೆ ಕ್ರೀಡಾಪಟುಗಳು
ಸಾರಾಂಶ
೨೦೨೨-೨೩ನೇ ಸಾಲಿನ ಪ್ರೌಢಶಾಲೆಗಳ ವಿಭಾಗಮಟ್ಟದ ಕ್ರೀಡಾಕೂಟದಲ್ಲಿ ಹಾಸನ ಜಿಲ್ಲಾ ಅರಕಲಗೂಡು ತಾಲೂಕು ಹಾನಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ ೨೦೨೨-೨೩ನೇ ಸಾಲಿನ ಪ್ರೌಢಶಾಲೆಗಳ ವಿಭಾಗಮಟ್ಟದ ಕ್ರೀಡಾಕೂಟದಲ್ಲಿ ಹಾಸನ ಜಿಲ್ಲಾ ಅರಕಲಗೂಡು ತಾಲೂಕು ಹಾನಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಚಾಮರಾಜನಗರದಲ್ಲಿ ನಡೆದ ಪ್ರೌಢಶಾಲೆಗಳ ವಿಭಾಗದ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು, ಕ್ರೀಡಾಪಟುಗಳು ೭ನೇ ಬಾರಿಗೆ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಬಾಲಕಿಯರ ತಂಡದವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಲಿದ್ದಾರೆ. ಸಣ್ಣ ಗ್ರಾಮವಾದ ಹಾನಗಲ್ಲು ಸರ್ಕಾರಿ ಪ್ರೌಢಶಾಲೆ ಕ್ರೀಡಾಪಟುಗಳಾದ ಬಾಲಕಿಯರ ಬ್ಯಾಡ್ಮಿಂಟನ್ ತಂಡದ ಸುಕನ್ಯ, ಸಿಂಚನ, ದಿವ್ಯ, ದೀಪಿಕ, ಸಂಜನ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಜಯಗಳಿಸಿ ಶಾಲೆಗೆ ಹಾಸನ ಜಿಲ್ಲೆಗೆ ಮೈಸೂರು ವಿಭಾಗಕ್ಕೆ ಕೀರ್ತಿತಂದಿದ್ದು, ಇದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ೨೦೧೭ರಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಾನಗಲ್ಲು ಗ್ರಾಮದ ಶಾಲೆಯ ಕ್ರೀಡಾಪಟುಗಳ ಈ ಸಾಧನೆಯನ್ನು ಹಾನಗಲ್ಲು ಗ್ರಾಮದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕಿರಣ್, ಮಂಜುನಾಥ್ ವಾಣಿಜ್ಯೋದಮಿ ರವಿಕುಮಾರ್, ನಾಗೇಂದ್ರಮೂರ್ತಿ, ಖ್ಯಾತ ಜ್ಯೋತಿಷಿ ಹರೀಶ್, ಗ್ರಾಮಪಂಚಾಯ್ತಿ ಸದಸ್ಯರಾದ ರಂಗಪ್ಪ, ರೇವಣ್ಣ, ಅರಕಲಗೂಡು ತಾಲೂಕು ದೈಹಿಕ ಶಿಕ್ಷಕ ಅಧೀಕ್ಷಕ ನಿಂಗಯ್ಯ, ಹಾನಗಲ್ಲು ಶಾಲೆಯ ಮುಖ್ಯ ಶಿಕ್ಷಕರಾದ ಮೋಹನ್ ಕುಮಾರ್ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಿಕ್ಷಕರಾದ ರಘುರವರ ಪರಿಶ್ರಮವನ್ನು ಬೆಳವಾಡಿ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನಿಂಗೇಗೌಡ ಅಲ್ಲದೆ ತಾಲೂಕಿನ ಅನೇಕ ಜನಪ್ರತಿನಿಧಿಗಳು ಈ ಶಾಲೆಯ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲೂ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಲಿ ಎಂದು ಶುಭಹಾರೈಸಿದರು. ಚಾಮರಾಜನಗರದಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಹಾನಗಲ್ಲು ಪ್ರೌಢಶಾಲೆಯ ಸಿಂಚನ, ದಿವ್ಯ, ದೀಪಿಕ, ಸುಕನ್ಯ, ಸಂಜನ ಅಲ್ಲದೆ ಶಾಲೆಯ ಮುಖ್ಯಶಿಕ್ಷರಾದ ಮೋಹನ್ ಕುಮಾರ್ ಕ್ರೀಡಾತರಬೇತಿದಾರರಾದ ರಘುರವರು ಚಾಮರಾಜನಗರದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಗಣೇಶ ಪ್ರಸಾದ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಮತ್ತು ಶಿಕ್ಷಣ ಇಲಾಖೆಯ ವಿಭಾಗಮಟ್ಟದ ಹಿರಿಯ ಅಧಿಕಾರಿಗಳ ಸಮೀಕ್ಷೆಯ ಪ್ರಶಸ್ತಿಯನ್ನು ಸ್ವೀಕರಿಸಿದರು.