ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ನಿಸ್ವಾರ್ಥ ಸೇವಾ ಮನೋಭಾವ, ನಮ್ಮೂರು ಎಂಬ ಅಭಿಮಾನ ಹಾಗೂ ಮಕ್ಕಳ ಶೈಕ್ಷಣಿಕ ಏಳಿಗೆಗೆ ಅನಂತ್ ಕುಮಾರ್ ಅವರ ದೂರದೃಷ್ಠಿಯ ಕಾರಣದಿಂದ ಹಂಗರಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಶಾಲೆ ಎಂಬ ಹೆಗ್ಗಳಿಕೆಯ ಜತೆಗೆ ಪ್ರಖ್ಯಾತಿ ಗಳಿಸಿದೆ. ಇಂತಹ ಯಶಸ್ಸಿಗೆ ಕಾರಣಕರ್ತರಾದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಆರ್.ಅನಂತ್ ಕುಮಾರ್ ಅವರಿಗೆ ಅಭಿನಂದನೆಗಳು ಹಾಗೂ ಅವರ ಸ್ನೇಹಿತರ ಕಾರ್ಯ ಶ್ಲಾಘನೀಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಪ್ರಶಂಸಿದರು.ತಾಲೂಕಿನ ಹಳೇಕೋಟೆ ಹೋಬಳಿಯ ಹಂಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅತ್ಯುತ್ತಮ ಶಾಲೆ ಎನಿಸಿಕೊಂಡಿರುವ ಶಾಲೆಗೆ ಇಂತಹ ಉನ್ನತ ಸ್ಥಾನ ದೊರಕಲು ಈ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಈ ಶಾಲೆಯ ಶಿಕ್ಷಕರು ಕಾರಣರಾಗಿದ್ದಾರೆ ಎಂದರು. ಶಾಲೆಯಲ್ಲಿ ಎಲ್‌ಕೆಜಿಯಿಂದ ೭ನೇ ತರಗತಿವರೆಗೆ ಇದ್ದು, ಶಾಲೆಯಲ್ಲಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಜತೆಗೆ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಈ ಶಾಲೆಯಲ್ಲಿ ಸುತ್ತಲ ಹತ್ತಾರು ಹಳ್ಳಿಗಳ ಗ್ರಾಮೀಣ ಪ್ರದೇಶದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರೆಲ್ಲರಿಗೂ ಉತ್ತಮ ಸೌಲಭ್ಯವನ್ನು ಒದಗಿಸಿಕೊಟಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಠಿಯಿಂದ ಕೆಲವು ಶಿಕ್ಷಕರನ್ನು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ನೇಮಿಸಿರುವ ಜತೆಗೆ ವೇತನ ನೀಡುತ್ತಿದ್ದಾರೆ. ಉತ್ತಮ ಆಟಿಕೆಗಳು, ಇಲ್ಲಿನ ವ್ಯವಸ್ಥೆ, ಶಿಕ್ಷಕರು ಕಾರ್ಯದಕ್ಷತೆ ಜತೆಗೆ ಪಾಠಪ್ರವಚನ ಮಾಡುವ ರೀತಿಯನ್ನು ಸುತ್ತಲ ಜನರು ಮೆಚ್ಚಿದ್ದಾರೆ ಹಾಗೂ ಈ ಶಾಲೆಯಲ್ಲೂ ಇಂಗ್ಲಿಷ್ ಮೀಡಿಯಂ ಪ್ರಾರಂಭವಾಗಿದೆ ಮತ್ತು ಹಿಂದಿ ಭಾಷೆಯನ್ನೂ ಚೆನ್ನಾಗಿ ಕಲಿಸುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಆರ್.ಅನಂತ್ ಕುಮಾರ್, ಗೌ. ಕಾರ್ಯದರ್ಶಿ ಲಕ್ಷ್ಮಣ್ ಎಚ್.ವಿ. ಹಾಗೂ ಸದಸ್ಯರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಶಿಕ್ಷಣ ಇಲಾಖೆಯ ಇಸಿಒ ಕೇಶವ, ಮುಖ್ಯಶಿಕ್ಷಕ ಮೋಹನ್ ಕುಮಾರ್ ಸನ್ಮಾನಿಸಿದರು. ಶಿಕ್ಷಕಿ ಆರ್.ಎಸ್.ಶೈಲಜಾ ಪ್ರಾರ್ಥನೆ ಮಾಡಿದರು ಹಾಗೂ ಸುಜಾತ ನಿರೂಪಿಸಿದರು.ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹೊಯ್ಸಳ ರಾಮು, ಹನುಮಂತೇಗೌಡ, ಮುಖ್ಯ ಶಿಕ್ಷಕರಾಗಿದ್ದ ಗೋಪಾಲ್, ಪ್ರೌಢಶಾಲೆ ಶಿಕ್ಷಕರಾದ ಸೈಯದ್ ಅಹಮದ್ ಹಾಗೂ ರವಿಕೃಷ್ಣ, ಹಂಗರಹಳ್ಳಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಜಯಲಕ್ಷ್ಮಿ, ಶಿಕ್ಷಕರಾದ ವೇಣುಗೋಪಾಲ್, ಸುಂದರರಾಜು, ರಿನಾಜ್, ಹರ್ಷಿತಾ, ಮುಬಿನಾ, ಶ್ವೇತಾ, ಶ್ರೀನಿವಾಸ, ಮುಬಿನಾತಾಜ್, ಇತರರು ಭಾಗವಹಿಸಿದ್ದರು.
9ಎಚ್ಎಸ್ಎನ್5 :