ಹಂಗಾರಕಟ್ಟೆ: 21ರಿಂದ ಯಕ್ಷೋತ್ಸವ ಯಕ್ಷಗಾನ ಸಪ್ತಾಹ

| Published : Oct 18 2024, 12:06 AM IST

ಸಾರಾಂಶ

21ರಂದು ಸಂಜೆ ಗಂಟೆ 5ಕ್ಕೆ ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದರು ಎಡನೀರು ಮಠ ಸಪ್ತಾಹ ಉದ್ಘಾಟಿಸಲಿದ್ದಾರೆ. ಪ್ರತಿನಿತ್ಯವು 5 ಗಂಟೆಯಿಂದ ಉಪನ್ಯಾಸ, ಸಭಾಕಾರ್ಯಕ್ರಮ ಮತ್ತು ಕಲಾಕೇಂದ್ರದ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ಬರುವ ತರತರಹದ ಯುದ್ಧ ಕುಣಿತಗಳು, ಸಾಂಪ್ರದಾಯಿಕ ಪೂರ್ವರಂಗ ಕುಣಿತಗಳು ನಂತರ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿಯಕ್ಷಗಾನ ಪ್ರಪಂಚದಲ್ಲಿ ಐವತ್ತು ವರ್ಷಗಳ ಇತಿಹಾಸವಿರುವ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ- ಐರೋಡಿಯ ಸದಾನಂದ ರಂಗ ಮಂಟಪದಲ್ಲಿ ಅ. 21 ರಿಂದ 27ರ ತನಕ ಯಕ್ಷಸಪ್ತೋತ್ಸವ ಯಕ್ಷಗಾನ ಸಪ್ತಾಹ ನಡೆಯಲಿದೆ. 21ರಂದು ಸಂಜೆ ಗಂಟೆ 5ಕ್ಕೆ ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದರು ಎಡನೀರು ಮಠ ಸಪ್ತಾಹ ಉದ್ಘಾಟಿಸಲಿದ್ದಾರೆ. ಪ್ರತಿನಿತ್ಯವು 5 ಗಂಟೆಯಿಂದ ಉಪನ್ಯಾಸ, ಸಭಾಕಾರ್ಯಕ್ರಮ ಮತ್ತು ಕಲಾಕೇಂದ್ರದ ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ಬರುವ ತರತರಹದ ಯುದ್ಧ ಕುಣಿತಗಳು, ಸಾಂಪ್ರದಾಯಿಕ ಪೂರ್ವರಂಗ ಕುಣಿತಗಳು ನಂತರ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಮಹಾಭಾರತ, ರಾಮಾಯಣಗಳಿಂದ ಆರಿಸಲ್ಪಟ್ಟ ಅಪರೂಪದ ಪ್ರಸಂಗ ಪ್ರದರ್ಶಿಸಲ್ಪಟ್ಟಿದ್ದು ಈ ವರ್ಷ ಶ್ರೀಕೃಷ್ಣ ಚರಿತದ ಅಪರೂಪದ ಪ್ರಸಂಗಗಳಾದ ಶ್ರೀ ಕೃಷ್ಣ ಜನ್ಮ, ಕಾಲಯವನ ಸಂಹಾರ, ಪ್ರದ್ಯುಮ್ನ ವಿಜಯ, ಶ್ಯಮಂತಕ ವಿಲಾಸ, ಉಷಾ ಪರಿಣಯ, ಗಾಂಧಾರಿ ಶಾಪ, ಕೃಷ್ಣ ಪರಂಧಾಮ ಕಥಾನಕಗಳು ಪ್ರದರ್ಶಿಸಲ್ಪಡುತ್ತವೆ. ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ, ಪರಮೇಶ್ವರ ನಾಯಕ್, ಚಂದ್ರಕಾಂತ ಮೂಡಬೆಳ್ವೆ, ಉದಯಕುಮಾರ್ ಹೊಸಾಳ, ರಾಘವೇಂದ್ರ ಹೆಗಡೆ, ರಾಮಕೃಷ್ಣ ಭಟ್ಟ ಹುಲಿಮನೆ, ಚಂದ್ರಯ್ಯ ಆಚಾರ್, ಶಶಿಕುಮಾರ್ ಆಚಾರ್ಯ, ಕೆ.ಜೆ.ಸುಧೀಂದ್ರ, ಮಂದಾರ್ತಿ ರಾಮಕೃಷ್ಣ, ಕೋಟ ಶಿವಾನಂದ, ಕೆ.ಜೆ.ಕೃಷ್ಣ ಅಂಬಲಪಾಡಿ, ಮಂಜುನಾಥ ನಾವಡ, ವಾಗ್ವಿಲಾಸ ಭಟ್ಟ, ಕೊಂಡದಕುಳಿ ರಾಮಚಂದ್ರಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಮುರೂರು, ಚಪ್ಪರಮನೆ ಶ್ರೀಧರ ಹೆಗಡೆ, ಹೆನ್ನಾಬೈಲು ಸಂಜೀವಶೆಟ್ಟಿ, ಮಾಧವ ನಾಗೂರು, ಪಂಜು ಪೂಜಾರಿ, ಆದಿತ್ಯ ಹೆಗಡೆ, ಹೆನ್ನಾಬೈಲು ವಿಶ್ವನಾಥ, ಸೀತಾರಾಮ ಸೋಮಯಾಜಿ, ವೈಕುಂಠ ಹೇರ್ಳೆ, ಅಂಬರೀಶ್ ಭಟ್‌, ಅಶೋಕ್ ಆಚಾರ್, ಕುಳಿಮನೆ ನಾಗೇಶ್, ಎಳಬೇರು ಶೇಖರ ಶೆಟ್ಟಿ, ಸುನೀಲ್ ಹೊಲಾಡ್, ಹಿಲ್ಲೂರು ಮಂಜು, ಮಾರುತಿ ನಾಯ್ಕ, ನಿತಿನ್‌ಶೆಟ್ಟಿ, ಬಸ್ರೂರು ಪ್ರಭಾಕರ ಐತಾಳ, ಸಾನ್ವಿ ಕಲಾವಿದರಾಗಿ ಭಾಗವಹಿಸಲಿದ್ದಾರೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿರುತ್ತಾರೆ.