ಸಾರಾಂಶ
ಪಾದಾಚಾರಿ ಮಹಿಳೆಗೆ ಟಿಪ್ಪರ್ ಲಾರಿವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ನೆಹರೂ ನಗರದಲ್ಲಿ ಬುಧವಾರ ನಡೆದಿದೆ.ಪಟ್ಟಣದ ಮುಖ್ಯ ರಸ್ತೆಯಲ್ಲಿ ತಾಲೂಕಿನ ಹನಿಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆಗಿರುವ ಮಲ್ಲಿಗಮ್ಮ (58) ಎಂಬ ಮಹಿಳೆ ಬ್ಯಾಂಕಿನ ವ್ಯವಹಾರ ಮುಗಿಸಿಕೊಂಡು ತನ್ನ ಪತಿ ಮತ್ತು ಮೊಮ್ಮಗನೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೆಹರು ನಗರದ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಟಿಪ್ಪರ್ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು
ಪಾದಾಚಾರಿ ಮಹಿಳೆಗೆ ಟಿಪ್ಪರ್ ಲಾರಿವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ನೆಹರೂ ನಗರದಲ್ಲಿ ಬುಧವಾರ ನಡೆದಿದೆ.ಪಟ್ಟಣದ ಮುಖ್ಯ ರಸ್ತೆಯಲ್ಲಿ ತಾಲೂಕಿನ ಹನಿಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆಗಿರುವ ಮಲ್ಲಿಗಮ್ಮ (58) ಎಂಬ ಮಹಿಳೆ ಬ್ಯಾಂಕಿನ ವ್ಯವಹಾರ ಮುಗಿಸಿಕೊಂಡು ತನ್ನ ಪತಿ ಮತ್ತು ಮೊಮ್ಮಗನೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೆಹರು ನಗರದ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಟಿಪ್ಪರ್ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಬೇಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲಿದ್ದ ವಾಹನ ದಟ್ಟಣೆ ತಿಳಿಗೊಳಿಸಿದರು.
ಘಟನೆ ಕಂಡ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಖ್ಯ ರಸ್ತೆಯು ಕಿರಿದಾದ ಪರಿಣಾಮ ಪದೇ ಪದೆ ಇಂತಹ ಘಟನೆಗಳು ಸಂಭವಿಸುತ್ತಿವೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.