ಹಣ್ಣಿಕೇರಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆರಂಭ

| Published : Apr 13 2025, 02:02 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಏ.7ರಿಂದ ಆರಂಭವಾಗಿದ್ದು, 16ರವರೆಗೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಹಣ್ಣಿಕೇರಿ ಗ್ರಾಮದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಏ.7ರಿಂದ ಆರಂಭವಾಗಿದ್ದು, 16ರವರೆಗೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.ಏ.7 ರ ರಾತ್ರಿ 11 ಗಂಟೆಯಿಂದ ಪಂಚಾಕ್ಷರಿ ಜಪ ಭಜನೆ ಆರಂಭವಾಗಿದ್ದು, 13ರ ರಾತ್ರಿ 12 ಗಂಟೆಗೆ ಮಂಗಲಗೊಳ್ಳುವುದು. 14ರಂದು ಬೆಳಗ್ಗೆ 1 ಗಂಟೆಯಿಂದ ಭಕ್ತರಿಂದ ಸಿದ್ದೇಶ್ವರ ದೇವರಿಗೆ ಅಭಿಷೇಕ, ಪೂಜಾ ಕಾರ್ಯಕ್ರಮ, ಬೆಳಗ್ಗೆ 10 ಗಂಟೆಗೆ ಮಹಾಪ್ರಸಾದ, ಸಂಜೆ 4 ಗಂಟೆಯಿಂದ ಅಂಬಲಿ ಬಂಡಿಗಳ ಓಡಾಟ, ರಾತ್ರಿ 12 ರಿಂದ ಬುಧವಾರ ಬೆಳಗಿನ 5 ಗಂಟೆಯವರೆಗೆ ಸೋಗಿನ ಬಂಡಿಗಳ ಅದ್ಧೂರಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11 ಗಂಟೆಯಿಂದ ಕಿಚ್ಚದ ಕಟ್ಟಿಗೆ ತರುವುದು. ಮಧ್ಯಾಹ್ನ 1 ರಿಂದ 6 ಗಂಟೆಯವರೆಗೆ ಕಿಚ್ಚದ ಕಟ್ಟಿಗೆಗಳ ಅದ್ಧೂರಿ ಮೆರವಣಿಗೆ, ಸಂಜೆ 4 ಗಂಟೆಗೆ ಕಿಚ್ಚದ ಕಟ್ಟಿಗೆಗೆ ಅಗ್ನಿಸ್ಪರ್ಶ ಕಾರ್ಯಕ್ರಮ, ರಾತ್ರಿ 10.30ಕ್ಕೆ ಸಾಮೂಹಿಕ ಕಿಚ್ಚ (ಅಗ್ನಿ) ಹಾಯುವ ಕಾರ್ಯಕ್ರಮ ನಡೆಯಲಿದೆ. 16ರಂದು ಬೆಳಗ್ಗೆ 10 ಗಂಟೆಗೆ ನಾಗೋಲಿ ಕಾರ್ಯಕ್ರಮ, ನಂತರ ಮಹಾಪ್ರಸಾದ, ಬಳಿಕ ಸಂಜೆ 7 ಗಂಟೆಯವರೆಗೆ ದೇವರಿಗೆ, ಹೂಮಾಲೆ, ಕಾಯಿ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ.