ಹಾಸನದಲ್ಲಿ ಎರಡುವರೆ ವರ್ಷಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ಮಾಡಿದ ಬಾಲಕಿ ಹಂಸಿನಿ

| Published : Jun 29 2024, 12:30 AM IST

ಹಾಸನದಲ್ಲಿ ಎರಡುವರೆ ವರ್ಷಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ ಮಾಡಿದ ಬಾಲಕಿ ಹಂಸಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಮಂಚೇನಹಳ್ಳಿಯ ಎರಡುವರೆ ವರ್ಷದ ಹಂಸಿನಿಗೌಡ ಚಿಕ್ಕವಯಸ್ಸಿನಲ್ಲಿಯೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದಾರೆ.

ಚನ್ನರಾಯಪಟ್ಟಣದ ಮಂಚೇನಹಳ್ಳಿ ಗ್ರಾಮದ ಬಾಲಕಿ । ತಾಯಿ ನಂದಿನಿ ಹರ್ಷ

ಕನ್ನಡಪ್ರಭ ವಾರ್ತೆ ಹಾಸನ

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಮಂಚೇನಹಳ್ಳಿಯ ಎರಡುವರೆ ವರ್ಷದ ಹಂಸಿನಿಗೌಡ ಚಿಕ್ಕವಯಸ್ಸಿನಲ್ಲಿಯೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ತಾಯಿ ನಂದಿನಿ ಮೋಹನ್‌, ‘ನಮ್ಮ ಮಗಳು ಮುಂದೆ ವಿಶ್ವ ದಾಖಲೆಯತ್ತ ಹೆಜ್ಜೆ ಇಡುತ್ತಾಳೆ’ ಎಂದು ಹರ್ಷ ವ್ಯಕ್ತಪಡಿಸಿದರು. ‘

2021ರ ಅಕ್ಟೋಬರ್ 27 ರಂದು ಜನಿಸಿರುವ ನನ್ನ ಮಗಳು ಹಂಸಿನಿಗೌಡ ಎರಡುವರೆ ವರ್ಷಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದು, ಕನ್ನಡ ವರ್ಣಾಮಾಲೆಯಲ್ಲಿ 49 ಅಕ್ಷರವನ್ನು ಹೇಳಲಿದ್ದು, ಇಂಗ್ಲೀಷ್ ವರ್ಣ ಮಾಲೆಯಲ್ಲಿ 26 ಅಕ್ಷರವನ್ನು ಉದಾಹರಣೆ ಸಹಿತವಾಗಿ ಹೇಳುತ್ತಾಳೆ. 1 ರಿಂದ 20 ಅಂಕಿಯನ್ನು ಮೂರು ಭಾಷೆಯಲ್ಲಿ ಹೇಳಲಿದ್ದು, 20 ವಾಹನ, 269 ಚಿತ್ರಗಳನ್ನು ಗುರುತು ಮಾಡಲಿದ್ದು, 10 ನ್ಯಾಷನಲ್ ಸಿಂಬಲ್ಸ್, ಕರ್ನಾಟಕದ 8 ಕವಿಗಳು, 12 ಭಾರತೀಯ ಐತಿಹಾಸಿಕ ಸ್ಥಳಗಳು, ದೇಹದ 25 ಭಾಗಗಳು, 12 ರಾಷ್ಟ್ರೀಯ ಚಿಹ್ನೆಗಳು, ವಾರಗಳು, ತಿಂಗಳುಗಳನ್ನು ಹೇಳುತ್ತಾಳೆ’ ಎಂದು ಹೇಳಿದರು.

‘ಮಗಳು ಇಂಗ್ಲಿಷ್ ನರ್ಸರಿಯ ಏಳು ರೈಮ್ಸ್, 9 ಶ್ಲೋಕಗಳು, 10 ಪ್ರಾಣಿಗಳ ಶಬ್ಧ ಅನುಸರಣೆ ಮಾಡುವುದರ ಜತೆಗೆ ರಾಷ್ಟ್ರಗೀತೆ ಹೇಳುತ್ತಾಳೆ. ಮೇ 16 ರಂದು ರೆಕಾರ್ಡ್ ಬಂದಿರುವುದು ತಿಳಿಯಿತು. ಈ ದಾಖಲೆ ಮಾಡಲು ನಾನೇ ಮನೆಯಲ್ಲಿ ತರಬೇತಿಯನ್ನು ಮಗುವಿಗೆ ನೀಡಿದ್ದೇನೆ. ಈ ವಯಸ್ಸಿನಲ್ಲಿ ಜಿಲ್ಲೆ ಒಳಗೆ ನನ್ನ ಮಗಳೇ ಮೊದಲು ಈ ರೆಕಾರ್ಡ್ ಮಾಡಿದ್ದು, ಮುಂದೆ ವಿಶ್ವ ದಾಖಲೆ ಮಾಡುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ಹಂಸಿನಿಗೌಡ, ಬಾಲಕಿಯ ತಂದೆ ಮೋಹನ್, ಕುಟುಂಬ ಸದಸ್ಯರಾದ ಮೋಹನ್ ತಂದೆ ದೇವಸ್ವಾಮಿ, ಮಂಜುಳ, ಸೌಮ್ಯ ಇತರರು ಹಾಜರಿದ್ದರು.