ವಿಶ್ವಮಾನವ ವಿದ್ಯಾನಿಕೇತನದಲ್ಲಿ ಕುವೆಂಪು ಜನ್ಮದಿನಾಚರಣೆ

| Published : Dec 30 2023, 01:15 AM IST / Updated: Dec 30 2023, 01:16 AM IST

ವಿಶ್ವಮಾನವ ವಿದ್ಯಾನಿಕೇತನದಲ್ಲಿ ಕುವೆಂಪು ಜನ್ಮದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಯುಗದ ಕವಿ ಜಗದ ಕವಿ ವಿಶ್ವಮಾನವ ಸಂದೇಶ ಸಾರಿದ ಮಹಾ ಮಾನವತಾವಾದಿ ಕುವೆಂಪು ಅವರ ಜನ್ಮ ದಿನ

ಕನ್ನಡಪ್ರಭ ವಾರ್ತೆ ಮೈಸೂರು

ಯುಗದ ಕವಿ ಜಗದ ಕವಿ ವಿಶ್ವಮಾನವ ಸಂದೇಶ ಸಾರಿದ ಮಹಾ ಮಾನವತಾವಾದಿ ಕುವೆಂಪು ಅವರ ಜನ್ಮ ದಿನವಾದ ಶುಕ್ರವಾರ ವಿಶ್ವಮಾನವ ದಿನಾಚರಣೆಯನ್ನು ಅತ್ಯಂತ ಸಂಭ್ರ್ರಮದಿಂದ ರಾಮಕೃಷ್ಣ ನಗರದ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಆಚರಿಸಲಾಯಿತು.

ಸಂಸ್ಕೃತ ವಿದ್ವಾನ್ ಶ್ರೀನಿವಾಸಮೂರ್ತಿ ಮಾತನಾಡಿ, ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯ ಪೂರ್ಣದೃಷ್ಟಿಯನ್ನೊಳಗೊಂಡ ಪಂಚಮಂತ್ರವೆಂದು, ಹುಟ್ಟುತ್ತಾ ಮಗು ವಿಶ್ವಮಾನವನಾಗಿಯೇ ಹುಟ್ಟುತ್ತಾನೆ. ಪ್ರಪಂಚದಲ್ಲಿರುವ ಎಲ್ಲಾ ಮಕ್ಕಳು ಅನಿಕೇತನರಾಗಬೇಕು ಎಂದರು.

ನೂರು ಸಾರಿ ಸೋತಿದ್ದರೇನಂತೆ, ನೂರೊಂದು ಸಾರಿ ಬಿದ್ದಿದ್ದರೇನಂತೆ, ಸೋಲು ಗೆಲುವಿನ ಮೆಟ್ಟಿಲು ಮರಳಿ ಏಳುವುದು. ಬೀಳದಿದ್ದವನು ಎಂದು ಮೇಲೆದ್ದವನಲ್ಲ ಎಂಬ ಕುವೆಂಪು ಅವರ ಸ್ವರಚಿತ ಗೀತೆಗಳನ್ನು ಹಾಗೂ ವಿಶ್ವಮಾನವ ಗೀತೆಯಾದ ಓ ನನ್ನ ಚೇತನ ಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು. ಶಾಲೆಯ ಸಂಸ್ಥಾಪಕ ಪ್ರೊ.ಬಿ.ಕೆ. ಚಂದ್ರಶೇಖರೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿ ಪ್ರೊ. ದಿವಾಕರ್‌, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.