ದೇಶದಲ್ಲಿ ಹುಟ್ಟಿ ದೇಶಕ್ಕಾಗಿ ಸೇವೆ ಮಾಡಬೇಕು ಎನ್ನುವ ಹಂಬಲ ಚಿಕ್ಕ ವಯಸ್ಸಿನಲ್ಲಿ ಮೂಡಿತ್ತು ಅದೇ ಹುಮ್ಮಿಸ್ಸಿನಲ್ಲಿಯೇ ದೇಶ ಸೇವೆಗೆ ಸೇರಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿ ಸ್ವಗ್ರಾಮಕ್ಕೆ ಮರಳಿರುವ ಯೋಧ ಗವಿರಂಗನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ದೇಶದಲ್ಲಿ ಹುಟ್ಟಿ ದೇಶಕ್ಕಾಗಿ ಸೇವೆ ಮಾಡಬೇಕು ಎನ್ನುವ ಹಂಬಲ ಚಿಕ್ಕ ವಯಸ್ಸಿನಲ್ಲಿ ಮೂಡಿತ್ತು ಅದೇ ಹುಮ್ಮಿಸ್ಸಿನಲ್ಲಿಯೇ ದೇಶ ಸೇವೆಗೆ ಸೇರಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿ ಸ್ವಗ್ರಾಮಕ್ಕೆ ಮರಳಿರುವ ಯೋಧ ಗವಿರಂಗನಾಥ್ ಹೇಳಿದರು.೧೭ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನಾಯಕ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಸೈನಿಕ ಗವಿರಂಗನಾಥರವರಿಗೆ ನಗರದ ಹಳೆಪಾಳ್ಯದ ಸಾರ್ವಜನಿಕರು, ವಿದ್ಯಾರ್ಥಿಗಳು ಹಿತೈಷಿಗಳು ಸೇರಿ ಆಯೋಜಿಸಿದ್ದ ಯೋಧನಿಗೊಂದು ಸಲಾಂ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ ನಮಗೇನು ಕೊಟ್ಟಿದೆ ಎನ್ನುವ ಬದಲು ದೇಶಕ್ಕಾಗಿ ಏನು ಕೊಟ್ಟಿದ್ದೇನೆ ಎಂಬುದು ಪ್ರತಿಯೊಬ್ಬ ಭಾರತೀಯರಲ್ಲಿ ಮೂಡಬೇಕು. ಭಾರತೀಯನಿಗೂ ನನ್ನ ದೇಶ, ದೇಶಕ್ಕಾಗಿ ನಾನು ಎನ್ನುವ ಅಭಿಮಾನವಿರಬೇಕು. ಪ್ರತಿ ಕುಟುಂಬದಲ್ಲಿ ಒಬ್ಬರು ದೇಶ ಸೇವೆಗೆ ಸೇರ್ಪಡೆಯಾಗಬೇಕು. ನಾನು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಸಿಯಾಚಿನ್ ಸ್ಮರಣೀಯ ಸ್ಥಳವಾಗಿತ್ತು. ಒರಿಸ್ಸಾ, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ ಸೇವೆ ಸಲ್ಲಿಸಿದ ಪ್ರಮುಖ ರಾಜ್ಯಗಳು ಆಪರೇಷನ್ ಸಿಂದೂರ್ ಸೇವೆಯಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತೋಷದ ಕ್ಷಣವಾಗಿದ್ದು ದೇಶಕ್ಕೆ ಯಾವುದೇ ಸಮಯದಲ್ಲಿ ಯುದ್ಧದ ಪರಿಸ್ಥಿತಿ ಎದುರಾದರೆ ದೇಶ ಸೇವೆಗೆ ಸದಾ ಸಿದ್ದ ಎಂದು ಹೇಳಿದರು.ಗ್ರಾಮಕ್ಕೆ ಆಗಮಿಸಿದ ಅವರನ್ನು ಗ್ರಾಮಸ್ಥರು ಪ್ರಮುಖ ಬೀದಿಗಳಲ್ಲಿ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮಾಡಿ ಪುಷ್ಪವೃಷ್ಠಿ ಮೂಲಕ ಸ್ವಾಗತಿಸಿದರು. ಈ ವೇಳೆ ಹಳೆಪಾಳ್ಯದ ಪ್ರಮುಖರು, ಸಾರ್ವಜನಿಕರು, ವಿದ್ಯಾರ್ಥಿಗಳು ನಗರಸಭೆ ನಾಮಿನಿ ಸದಸ್ಯ ಧನಂಜಯ್, ಮಾಜಿ ನಗರಸಭಾ ಸದಸ್ಯ ಮೋಹನ್, ಹಳೆಪಾಳ್ಯ ಗಿರೀಶ್, ಮಾಜಿ ಉಪಾಧ್ಯಕ್ಷ ಮಂಜುನಾಥ್, ಬೆಸ್ಕಾಂ ಇಲಾಖೆಯ ಯೋಗಾನಂದ್, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ನಾಗರಿಕರು ಇದ್ದರು.