ಸಾರಾಂಶ
ವೀರಶೈವ ಸಮಾಜಕ್ಕೆ ಅವಕಾಶ ನೀಡಿದ್ದಕ್ಕೆ ಹರ್ಷ
ಕನ್ನಡಪ್ರಭವಾರ್ತೆ ತುರುವೇಕೆರೆ
ವೀರಶೈವ ಲಿಂಗಾಯತ ಸಮುದಾಯಕ್ಕೆ ಪಟ್ಟಣದ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಲಭಿಸಿರುವುದಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪ್ರತ್ರಕರ್ತರೊಂದಿಗೆ ಮಾತನಾಡಿದ ಅವರು ಪಟ್ಟಣ ಪಂಚಾಯಿತಿಯ ಮೊದನೆಯ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರು ಸಹ ಮಾಜಿ ಶಾಸಕ ಮಸಾಲ ಜಯರಾಮ್ ರವರು ನಮ್ಮ ಸಮಾಜದ ಮೇಲೆ ಅಭಿಮಾನ ಇಟ್ಟು ನಮ್ಮ ಸಮಾಜದ ಸದಸ್ಯೆ ಆಶಾರಾಣಿ ರಾಜಶೇಖರ್‌ರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಈಗ ಎರಡನೇ ಅವಧಿಯಲ್ಲಿ ಸಾಮಾನ್ಯ ಮಹಿಳೆ ಮೀಸಲಾಗಿದೆ. ಮತ್ತೊಮ್ಮೆ ನಮ್ಮ ಸಮುದಾಯದ ಆಶಾರಾಣಿ ರಾಜಶೇಖರ್‌ರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಅವರು ನಮ್ಮ ಸಮುದಾಯದ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರುತ್ತದೆ ಎಂದರು. ಆಶಾರಾಣಿ ರಾಜಶೇಖರ್ ರವರು ಅವಿರೋಧ ಆಯ್ಕೆಯಾಗಲು ಸಹಕರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲ ಜಯರಾಮ್, ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದ ಕುಮಾರಸ್ವಾಮಿಯವರು ನೂತನ ಅಧ್ಯಕ್ಷರು ಪಟ್ಟಣದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಸಮಾಜದ ಹಿರಿಯ ಮುಖಂಡ ದುಂಡ ರೇಣುಕಪ್ಪ ಮಾತನಾಡಿದರು. ನೂತನ ಅಧ್ಯಕ್ಷೆ ಆಶಾರಾಣಿ, ಪಟ್ಟಣ ಪಂಚಾಯಿತಿ ಸದಸ್ಯ ಯಜಮಾನ್‌ಮಹೇಶ್ ಮುಖಂಡರಾದ ಹರಿಕಾರನಹಳ್ಳಿ ಪ್ರಸಾದ್, ಸಿದ್ದಪ್ಪಾಜಿ, ಶಿವಾನಂದ್, ಕೈಲಾಶ್, ಜಯಣ್ಣ, ಸುನಿಲ್‌ಬಾಬು, ಸೋಮಣ್ಣ, ದುಂಡಾ ಸುರೇಶ್, ಮಂಜು, ಮೂರ್ತಿ, ರಾಜಶೇಖರ್, ನಿಜಗುಣ, ಸವಿತಾ ಸೇರಿದಂತೆ ಸಮಾಜದ ಮುಖಂಡರು ಇದ್ದರು.