ಸಾರಾಂಶ
ಉನ್ನತಿ ಚಾರಿಟಿ ಟ್ರಸ್ಟ್ ಉದ್ಘಾಟನೆ
ಗುಂಡ್ಲುಪೇಟೆ: ಸಮಾನ ಮನಸ್ಕರೆಲ್ಲ ಜೊತೆಗೂಡಿ ಉನ್ನತಿ ಚಾರಿಟಬಲ್ ಟ್ರಸ್ಟ್ ಪ್ರಾರಂಭಿಸಿ, ಜನಪರ ಕೆಲಸ ಮಾಡಲು ನಿರ್ಧರಿಸಿರುವುದು ಸಂತಸ ತಂದಿದೆ ಎಂದು ಚಿಂತಕ ಪಿ.ಸಂಘಸೇನಾ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದಲ್ಲಿ ನಡೆದ ಉನ್ನತಿ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಟ್ರಸ್ಟ್ ಪ್ರಾರಂಭಿಸುವಾಗ ಇರುವ ಹುರುಪು ಮತ್ತು ಬದ್ಧತೆ ಸದಾ ಕಾಲ ಕಾಪಾಡಿಕೊಂಡರೆ ಸಂಸ್ಥೆಗಳು ಬಹಳ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು.
ಪ್ರಸ್ತುತ ಎಲ್ಲಾ ಸರ್ಕಾರಗಳು ನಿರ್ಗತಿಕರಿಗೆ ಹಲವು ಯೋಜನೆಗಳನ್ನು ಕಾಲ ಕಾಲಕ್ಕೆ ಜಾರಿಗೆ ತರುತ್ತಿವೆ. ಆದರೆ ಆ ಅನುಕೂಲಗಳು ಬಡವರಿಗೆ ದಕ್ಕುತ್ತಿಲ್ಲ. ಹಾಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಸೌಲಭ್ಯಗಳು ಸಮಾಜದ ಕಟ್ಟಕಡೆಯ ನಿರ್ಗತಿಕ ಬಡವರಿಗೆ ತಲುಪಿಸಿ ಎಂದರು.ಸಾವಿರಾರು ಸಂಖ್ಯೆಯಲ್ಲಿ ಟ್ರಸ್ಟ್ ನೋಂದಣಿಯಾಗುತ್ತವೆ. ಅದರಲ್ಲಿ ಕೆಲವಷ್ಟೇ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತವೆ. ಟ್ರಸ್ಟ್‌ಗಳು ಪ್ರಾಮಾಣಿಕ ಹಾಗೂ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.
ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ದೊಡ್ಡಬಸವಯ್ಯ, ಶಿಕ್ಷಕಿ ತೊಳಸಮ್ಮ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.ಟ್ರಸ್ಟ್ ಅಧ್ಯಕ್ಷ ಶಶಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಿದ್ಧರಾಜು, ಡಾ.ನವೀನ್ ಮೌರ್ಯ, ನಿರ್ದೇಶಕರಾದ ಲಕ್ಷ್ಮಣ ಪುತ್ತನಪುರ, ಡಾ.ಜೆ.ರಾಜೇಂದ್ರ ಕೆಬ್ಬೇಪುರ, ಲಿಂಗರಾಜು ಚೌಡಳ್ಳಿ, ಮಹದೇವ ಮಲ್ಲಯ್ಯನಪುರ, ರಾಜೇಂದ್ರಪ್ರಸಾದ್, ಚೆಲುರಾಜ್ ಕನ್ನೇಗಾಲ, ಶಿವನಾಗ್ ಮತ್ತು ನಾಗರಾಜು ಚೌಡಳ್ಳಿ, ಪ್ರಣೀತ್, ಪಿ. ಮರಿಸ್ವಾಮಿ, ಮಾನವ ಬಂಧುತ್ವ ವೇದಿಕೆಯ ಸುಭಾಷ್ ಮಾಡ್ರಹಳ್ಳಿ, ಆರ್.ಸೋಮಣ್ಣ, ಮಲ್ಲೇಶ್ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))