ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಹಕಾರದೊಂದಿಗೆ ನಾನು ಈ ಸಂಘಕ್ಕೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ಎಲ್ಲಾ ಗ್ರಾಮಗಳ ಷೇರುದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಉತ್ತಮ ಆಡಳಿತ ನಡೆಸುತ್ತೇನೆ.

ಪಾಂಡವಪುರ:

ತಾಲೂಕಿನ ಕೆನ್ನಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹರಳಹಳ್ಳಿ ಕೆ.ಬೆಟ್ಟೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷ ಕೆ.ಎಚ್.ಲೋಕೇಶ್ ಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಂಘದ ಉಪಾಧ್ಯಕ್ಷೆ ಕಲಾವತಿ, ನಿರ್ದೇಶಕರಾದ ಕೆ.ಎನ್.ದೊಡ್ಡೇಗೌಡ, ಕೆ.ರಾಮೇಗೌಡ, ಕೆ.ಎಂ.ರಾಜೇಂದ್ರ, ಎಂ.ಸ್ವಾಮಿ, ಕೆ.ಟಿ.ಪದ್ಮ, ಕೆ.ಕೆ.ಕಾಳಯ್ಯ, ಕೆ.ಜೆ.ಗಿರೀಶ, ಬಸವರಾಜು, ಕೆ.ವಿ.ಅನಿಲ್ ಕುಮಾರ್ ಹಾಗೂ ಮೇಲ್ವಿಚಾರಕರು ಎಸ್.ಕೆ.ಸುರೇಶ್ ಒಳಗೊಂಡಂತೆ ಎಲ್ಲರ ಸರ್ವಾನುಮತದಿಂದ ಕೆ.ಬೆಟ್ಟೇಗೌಡರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಹರಳಹಳ್ಳಿ ಕೆ.ಬೆಟ್ಟೇಗೌಡ ಅವರಿಗೆ, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮದ ಮುಖಂಡರಾದ ಎನ್.ಈಶ್ವರಪ್ಪ, ನಿಂಗಪ್ಪ, ಎಪಿಎಂಸಿ ನಾಗಣ್ಣ, ಮಂಜು, ಟಿ.ಕುಮಾರ್, ಶ್ರೀಧರ್, ವೇಣುಗೋಪಾಲ್, ನಂದೀಶ್, ಜ್ಞಾನೇಶ, ಹಿರೋಡೆಬೀದಿ ತಮ್ಮಣ್ಣ, ಶ್ರೀನಿವಾಸ್ ಹಾಗೂ ಸಿಬ್ಬಂದಿ ಸಿಇಒ ಎಂ.ಆರ್.ಮೀನಾಕ್ಷಿ, ಜಯರಾಮ್, ಸೋಮಶೇಖರ್, ಲೀಲಾವತಿ, ನಾಗರಾಜು ಸೇರಿದಂತೆ ಬೆಂಬಲಿಗರು ಅಭಿನಂದಿಸಿ, ಶುಭಕೋರಿದರು.

ಅಧ್ಯಕ್ಷ ಹರಳಹಳ್ಳಿ ಕೆ.ಬೆಟ್ಟೇಗೌಡ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಹಕಾರದೊಂದಿಗೆ ನಾನು ಈ ಸಂಘಕ್ಕೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ಎಲ್ಲಾ ಗ್ರಾಮಗಳ ಷೇರುದಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಉತ್ತಮ ಆಡಳಿತ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ವಿಜಯ ಶಾಲೆಯಲ್ಲಿ ಅಕ್ಷರ ಅಭ್ಯಾಸ

ಪಾಂಡವಪುರ:

ಪಟ್ಟಣದ ವಿಜಯ ಸಿಬಿಎಸ್ಇ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಆಯೋಜಿಸಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮಕ್ಕೆ ಪೋಷಕರು ಪುಟ್ಟ ಮಕ್ಕಳು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಆಗಮಿಸಿದ್ದರು.

ಪೋಷಕರು ತಮ್ಮ ಮಕ್ಕಳಿಗೆ ಅಕ್ಕಿಯ ಮೇಲೆ ‘ಓಂ’ ಮತ್ತು ‘ಅ’ಅಕ್ಷರಗಳನ್ನು ಬರೆಸಿದರು. ಈ ವೇಳೆ ಸಂಸ್ಥೆ ಕಾರ್ಯದರ್ಶಿ ಕೆ.ವಿ.ಬಸವರಾಜು, ಸಹಕಾರ್ಯದರ್ಶಿ ಗೋಪಾಲಸ್ವಾಮಿ, ನಿರ್ದೇಶಕರಾದ ಸೋಮೇಗೌಡ, ಶಾಲೆ ಆಡಳಿತಾಧಿಕಾರಿ ಎನ್.ಕೆ. ವೆಂಕಟೇಗೌಡ, ಶಾಲೆ ಪ್ರಾಂಶುಪಾಲರಾದ ಸವಿತ ಎನ್ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.