1.5 ಕೋಟಿ ಉಳಿತಾಯ ಬಜೆಟ್‌ಗೆ ಹರಪನಹಳ್ಳಿ ಪುರಸಭೆ ಒಪ್ಪಿಗೆ

| Published : Mar 27 2025, 01:07 AM IST

ಸಾರಾಂಶ

2025-26ನೇ ಸಾಲಿಗೆ 1,05,68,651 ಕೋಟಿಗಳ ಉಳಿತಾಯ ಆಯವ್ಯಯಕ್ಕೆ ಇಲ್ಲಿಯ ಪುರಸಭೆ ಬುಧವಾರ ನಡೆದ ಸಭೆ ಒಪ್ಪಿಗೆ ಸೂಚಿಸಿತು.

2025-26ರ ಆಯವ್ಯಯ ಮಂಡಿಸಿದ ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಭಿಕನ್ನಡಪ್ರಭ ವಾರ್ತೆ ಹರಪನಹಳ್ಳಿ

2025-26ನೇ ಸಾಲಿಗೆ ₹1,05,68,651 ಕೋಟಿಗಳ ಉಳಿತಾಯ ಆಯವ್ಯಯಕ್ಕೆ ಇಲ್ಲಿಯ ಪುರಸಭೆ ಬುಧವಾರ ನಡೆದ ಸಭೆ ಒಪ್ಪಿಗೆ ಸೂಚಿಸಿತು.

ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಭಿ ಬಜೆಟ್‌ನ್ನು ಮಂಡಿಸಿದಾಗ ಸದಸ್ಯರು ಒಪ್ಪಿಗೆ ಸೂಚಿಸಿದರು.

ಆರಂಭಿಕ ನಗದು ಮತ್ತು ಬ್ಯಾಂಕ್ ಶಿಲ್ಕು ₹98,69,608, ನಿರೀಕ್ಷಿತ ಆದಾಯ ₹66,38,08,715 ಇದ್ದು ಒಟ್ಟು ಜಮಾ ₹67,36,78,323 ವಾಗುವ ನಿರೀಕ್ಷೆ ಇದೆ. ಅದರಲ್ಲಿ ₹66,31,09,672 ಒಟ್ಟು ನಿರೀಕ್ಷಿತ ಖರ್ಚು ಮಾಡಲಾಗಿದ್ದು, ₹ 1,05,68,651 ಉಳಿತಾಯ ಬಜೆಟ್‌ ನ್ನು ಮಂಡಿಸಲಾಯಿತು.

ನಿರೀಕ್ಷಿತ ಆಧಾಯದ ವಿವರ:

ವೇತನ ಅನುದಾನ- ₹7.30 ಕೋಟಿ, ಎಸ್‌ಎಫ್‌ಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬಿಡುಗಡೆಯಾಗಬಹುದಾದ ಅನುದಾನ ₹10 ಲಕ್ಷ, ರಾಜ್ಯ ಸರ್ಕಾರದಿಂದ ಬರಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕಾಗಿ ನಿರೀಕ್ಷಿಸಬಹುದಾದ ಅನುದಾನ ₹25 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ- ₹5 ಕೋಟಿ, ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನ- ₹5 ಕೋಟಿ, ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಅನುದಾನ -₹35 ಲಕ್ಷ , ಕಲ್ಯಾಣ ಕರ್ನಾಟಕದ ವಿಶೇಷ ಅನುದಾನ -₹3 ಕೋಟಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಚ್ಚ ಭಾರತ ಅಭಿಯಾನ ಯೋಜನೆ - ₹2,54,27000, ಜನಗಣಿತಿ ಅನುದಾನ -₹10 ಲಕ್ಷ.

ಮನೆ ಕಂದಾಯ ತೆರಿಗೆ ಶುಲ್ಕ- ₹1.54 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ ಶುಲ್ಕ -₹70,83 ಲಕ್ಷ, ಹೊಸ ನಳ ಸಂಪರ್ಕ ಶುಲ್ಕ -₹5 ಲಕ್ಷ, ಅನಧಿಕೃತ ನಳಗಳನ್ನು ಅಧಿಕೃತ ಗೊಳಿಸುವ ಶುಲ್ಕ -₹7 ಲಕ್ಷ, ಖಾತೆ ಬದಲಾವಣೆ ಶುಲ್ಕ ₹3 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ -₹25 ಲಕ್ಷ, ಕೆರೆ ಅಭಿವೃದ್ದಿ ಶುಲ್ಕ -₹15 ಲಕ್ಷ, ವಿವಿಧ ಮಾರುಕಟ್ಟೆಗಳ ಹರಾಜು ಶುಲ್ಕ -₹13.50 ಲಕ್ಷ, ಅಕ್ರಮ ಸಕ್ರಮ ಯೋಜನೆಯಡಿ ಅಭಿವೃದ್ದಿ ಶುಲ್ಕದಿಂದ ಬರುವ ಆದಾಯ -₹5 ಲಕ್ಷ, ಮಳಿಗೆಗಳಿಂದ ಠೇವಣಿ ಮೊತ್ತ -₹30 ಲಕ್ಷ, ಹೀಗೆ ₹66,38,08,715 ಆದಾಯ ನಿರೀಕ್ಷಿಸಲಾಗಿದೆ.

ನಿರೀಕ್ಷಿತ ಖರ್ಚು:

ವೇತನ ಅನುದಾನ -₹7.30 ಕೋಟಿ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ -₹41 ಲಕ್ಷ, ಬೀದಿ ದೀಪ ನಿರ್ವಹಣೆ -₹1.05 ಕೋಟಿ, ನೀರು ಸರಬರಾಜು ನಿರ್ವಹಣೆ -₹2.66 ಕೋಟಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ -₹10 ಲಕ್ಷ, ಬರಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕಾಗಿ ನಿರೀಕ್ಷಿಸಬಹುದಾದ ಅನುದಾನ -₹25 ಲಕ್ಷ, ಸ್ವಚ್ಛ ಭಾರತ ಅಭಿಯಾನಕ್ಕೆ -₹2.54 ಕೋಟಿ, ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮ ವೆಚ್ಚ -₹4.50 ಲಕ್ಷ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರಿಗೆ ಪುರಸಭೆಯಿಂದ ಸಹಾಯ ಧನ ಪಾವತಿಗಾಗಿ -₹3.50 ಲಕ್ಷ, ರಸ್ತೆ ಬದಿಯ ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ₹5 ಲಕ್ಷ, ಹೈಟೆಕ್‌ ಶೌಚಾಲಯ ನಿರ್ಮಾಣಕ್ಕಾಗಿ ₹35 ಲಕ್ಷ, ಪಟ್ಟಣ ವಾರ್ಡಗಳ ಪೈಕಿ ಈಗಾಗಲೇ ನಾಮಫಲಕ ಅಳವಡಿಸಿದ ವಾರ್ಡಗಳನ್ನು ಹೊರತು ಪಡಿಸಿ ಉಳಿದ ವಾರ್ಡಗಳಲ್ಲಿ ನಾಮಫಲಕ ಅಳವಡಿಸಲು ₹25 ಲಕ್ಷ, ಪಟ್ಟಣದ 27 ವಾರ್ಡಗಳಲ್ಲಿ ಅವಶ್ಯಕತೆ ಇರುವ ಕಡೆ ಎಲ್‌ ಇ ಡಿ ಲೈಟ್ ಅಳವಡಿಸುವುದಕ್ಕಾಗಿ ₹1.50 ಕೋಟಿ, ಪಾರ್ಕ್‌ ಅಭಿವೃದ್ಧಿಗಾಗಿ ₹ 15 ಲಕ್ಷ, ಪುರಸಭಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗಾಗಿ ₹ 1.50 ಕೋಟಿ ಹೀಗೆ ಒಟ್ಟು 66,31,09,672 ಖರ್ಚನ್ನು ನಿರೀಕ್ಷಿಸಲಾಗಿದೆ.

ಸದಸ್ಯ ಅಶೋಕ ಮಾತನಾಡಿ, ಬಜೆಟ್‌ನಲ್ಲಿನ ಕಾರ್ಯಗಳು ಸರಿಯಾಗಿ ಅನುಷ್ಠಾನಕ್ಕೆ ಬರಬೇಕು ಹಾಗೂ ಸದಸ್ಯರ ಗೌರವ ಧನ ಹೆಚ್ಚಳವಾಗಬೇಕು ಎಂದು ಮನವಿ ಮಾಡಿದರು.

ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಉತ್ತಮ ಬಜೆಟ್‌ ಮಂಡಿಸಿದ್ದಕ್ಕಾಗಿ ಅಧ್ಯಕ್ಷರಿಗೆ ಮುಖ್ಯಾಧಿಕಾರಿಗಳಿಗೆ, ಶಾಸಕರಿಗೆ ಅಭಿನಂದಿಸಿದರು.

ಶಾಸಕಿ ಎಂ.ಪಿ. ಲತಾ, ಪುರಸಭಾ ಉಪಾಧ್ಯಕ್ಷ ಎಚ್‌. ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಆರೋಗ್ಯ ನಿರೀಕ್ಷಕ ಮಂಜುನಾಥ, ಎಂಜಿನಿಯರ್‌ ಸಿದ್ದೇಶ ಉಪಸ್ಥಿತರಿದ್ದರು.