ಸಾರಾಂಶ
Hard work concentration is the reason for success : Sompur
- ಕಠಿಣ ಪರಿಶ್ರಮ ಏಕಾಗ್ರತೆ ಯಶಸ್ವಿಗೆ ಕಾರಣ : ಸೋಮಪುರ
------ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಆದರ್ಶ ವಿದ್ಯಾಲಯದ 8ನೇ ತರಗತಿಯ ಅಭಿನವ ಮತ್ತು 9ನೇ ತರಗತಿಯ ಪ್ರಿಯಾಂಕಾ ಅವರು ಯಾದಗಿರಿಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಚೆಸ್ ಕ್ರೀಡಾ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 6ನೇ ತರಗತಿಯ ಅಭಿರುಚಿ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾಮಟ್ಟದ ಚೆಸ್ ಕ್ರೀಡಾ ಪಂದ್ಯಾವಳಿಯಲ್ಲಿ ಹಾಗೂ ಸನ್ನಿಧಿ ತಂದೆ ದೇವರಡ್ಡಿ ಯೋಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕ್ರೀಡೆಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದಿಸಿ ಮಾತನಾಡಿದ ಆದರ್ಶ ವಿದ್ಯಾಲಯದ ಮುಖ್ಯ ಗುರು ಹಣಮಂತ್ರಾಯ ಸೋಮಪುರ, ಕಠಿಣ ಪರಿಶ್ರಮ, ಏಕಾಗ್ರತೆಯಿಂದ ಕ್ರೀಡೆಯಲ್ಲಿ ಭಾಗವಹಿಸಲು ಯಶಸ್ಸು ಸಾಧ್ಯ ಎನ್ನುವುದಕ್ಕೆ ಶಾಲೆಯ ಮಕ್ಕಳೇ ಸಾಕ್ಷಿ ಎಂದು ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಡಾ. ಬಸವರಾಜ ಇಜೇರಿ ಮಾತನಾಡಿ, ಕ್ರೀಡೆಗಳು ಮಾನಸಿಕ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಕ್ರೀಡೆಗಳು ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೇಂದ್ರಗಳಾಗಿವೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳು ಮುಂದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.ವಿದ್ಯಾರ್ಥಿಗಳ ಚೆಸ್ ಕ್ರೀಡಾ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಕರಾದ ವೀರಭದ್ರ ಬಡಿಗೇರ, ಶರಣಬಸವ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.
-20ವೈಡಿಆರ್7: ಪ್ರಿಯಾಂಕ.
-20ವೈಡಿಆರ್8: ಅಭಿನವ.
-20ವೈಡಿಆರ್ 9: ಸಾನಿಧಿ.
-20ವೈಡಿಆರ್ 10: ಅಭಿರುಚಿ.