ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆಸಹಕಾರಿ ಸಂಸ್ಥೆ ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ ಅದಕ್ಕೆ ಅಪಾರ ಪರಿಶ್ರಮದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ನಗರದ ಎಸ್.ಎನ್.ರೆಸಾರ್ಟ್‌ನಲ್ಲಿ ಬಂಗಾರಪೇಟೆ- ಕೆಜಿಎಫ್ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.ಬ್ಯಾಂಕ್ ವಹಿವಾಟು ಸುಧಾರಣೆ
ದಿವಾಳಿಯಾಗಿದ್ದ ಪಿಎಲ್ಡಿ ಬ್ಯಾಂಕ್ ಅಭಿವೃದ್ಧಿಗೆ ಎಚ್.ಕೆ.ನಾರಾಯಣಸ್ವಾಮಿ ಅಧ್ಯಕ್ಷರಾಗಿದ್ದಾಗ ಶ್ರಮಿಸಿದ್ದರು. ಅವರು ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕಿನಲ್ಲಿ ರೈತರ ಸಾಲ ಬಡ್ಡಿ ಮನ್ನಾ ಮಾಡಿದ್ದರಿಂದಾಗಿ ಸುಸ್ತಿದಾರರು ಚಾಲ್ತಿಗೆ ಬಂದರು, ಇದರಿಂದಾಗಿ ಅನೇಕ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ವಿತರಿಸಲು ಸಾಧ್ಯವಾಯಿತು, ಇತೀಚೆಗೆ ಬ್ಯಾಂಕಿನ ಮೇಲೆ ರೈತರಿಗೆ ವಿಶ್ವಾಸ ಹೆಚ್ಚಾಗಿದ್ದು, ಠೇವಣಿ ಇಡಲು ಮುಂದೆ ಬರುತ್ತಿದ್ದಾರೆ, ಇದರಿಂದಾಗಿ ಬ್ಯಾಂಕ್‌ನ ಆದಾಯವು ಹೆಚ್ಚಾಗುತ್ತದೆ ಎಂದರು.ಪಟ್ಟಣದಲ್ಲಿ ಪಿಗ್ಮಿ ಯೋಜನೆಯನ್ನು ಪ್ರಾರಂಭಿಸಿ ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಸಾಲ ನೀಡಿ ಪ್ರತಿದಿನವೂ ವಸೂಲಿ ಮಾಡಿ ಬ್ಯಾಂಕಿಗೆ ಲಾಭ ತಂದುಕೊಟ್ಟ ಕೀರ್ತಿ ಎಚ್.ಕೆ.ನಾರಾಯಣಸ್ವಾಮಿಗೆ ಸಲ್ಲುತ್ತದೆ. ಒಂದು ಕಡೆ ಬಡವರಿಗೆ ಸಹಾಯ ಮಾಡುವಾಗ ಮತ್ತೊಂದು ಕಡೆ ಬ್ಯಾಂಕಿಗೆ ಲಾಭವಾಗುತ್ತದೆ, ಡಿಸಿಸಿ ಬ್ಯಾಂಕ್‌ಗೆ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರಾಗಿದ್ದಾಗ ಹತ್ತು ವರ್ಷಗಳಲ್ಲೇ ಬ್ಯಾಂಕ್‌ಗೆ ಜೀವ ತುಂಬಿದರು ಎಂದು ನೆನಪಿಸಿದರು.ಬ್ಯಾಲಹಳ್ಳಿ ಮೇಲೆ ಸುಳ್ಳು ಆರೋಪ
ಡಿಸಿಸಿ ಬ್ಯಾಂಕಿನಲ್ಲಿ ಒಂದುವರೆ ವರ್ಷದಿಂದ ಒಂದು ರುಪಾಯಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ, ೧೫ ಲಕ್ಷ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡದ ಕೀರ್ತಿ ಬ್ಯಾಲಹಳ್ಳಿ ಗೋವಿಂದಗೌಡರ ಸಾಧನೆ. ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾಡಿ, ಮುಖ್ಯ ಮಂತ್ರಿಳಿಗೆ, ಸಚಿವರಿಗೆ ಡಿಸಿಸಿ ಬ್ಯಾಂಕಿನ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಹೇಳಿ ಹೇಳಿ ಹಾಳು ಮಾಡಿದರೂ, ಈಗ ಡಿಸಿಸಿ ಬ್ಯಾಂಕ್‌ನಿಂದ ಜಿಲ್ಲೆಯಲ್ಲಿ ಒಬ್ಬ ಹೆಣ್ಣು ಮಗಳಿಗೆ, ಒಬ್ಬ ರೈತನಿಗೂ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಯಾರೂ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ ಯಾರೂ ರೈತಪರ ಮಹಿಳೆಯರ ಪರ ಬಡವರ ಪರ ಇರುತ್ತಾರೋ ಅವರಿಗೆ ಬೆಂಬಲವಾಗಿ ನಿಲ್ಲುಬೇಕು ಎಂದು ಹೇಳಿದರು.ಕೋಮುಲ್ ಅವ್ಯವಹಾರ
ಕೋಮಲ್‌ನಲ್ಲಿ ನೂರಾರು ಕೋಟಿ ರೂ.ಗಳ ವ್ಯವಹಾರ ಆಗಿದೆ ಅದನ್ನು ಯಾರೂ ಕೇಳುವುದಿಲ್ಲ, ಯಾರು ಸತ್ಯಹರಿಶ್ಚಂದ್ರ ಅಲ್ಲ ಜೇನು ತೆಗೆದವರೂ ಕೈಯನ್ನು ನೆಕ್ಕದೆ ಇರುತ್ತಾರೇಯೇ ಎಂದು ಟೀಕಿಸಿದ ಶಾಸಕರು, ಪಿಎಲ್ಡಿ ಬ್ಯಾಂಕಿನ ರಾಜ್ಯಾಧ್ಯಕ್ಷ ಕೆ.ಷಡಕ್ಷರಿ ನನ್ನ ಸ್ನೇಹಿತರಾಗಿದ್ದು ಅವರ ಬಳಿ ಮನವಿ ಮಾಡಿದ್ದರಿಂದ ರೈತರಿಗೆ ಒಂದು ಕೋಟಿ ರೂ.ಗಳನ್ನು ನೀಡುವ ಭರವಸೆ ನೀಡಿದ್ದಾರೆ. ರೈತರ ಸಾಲ ಮಾಡಿ ಸದ್ಬಳಕೆ ಮಾಡಿ ಸಕಾಲಕ್ಕೆ ಮರುಪಾವತಿ ಮಾಡಬೇಕು. ಇದು ನಿರಂತರವಾಗಿ ವ್ಯವಹಾರ. ರೈತರು ಬ್ಯಾಂಕಿನ ವ್ಯವಹಾರ ತಿಳಿದುಕೊಂಡು ಸೌಲಭ್ಯ ಪಡೆದು ಬ್ಯಾಂಕಿನ್ನು ಉಳಿಸಿ ಬೆಳೆಸಿ ಎಂದು ಮನವಿ ಮಾಡಿದರು.ಸಭೆಯಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಪುರಸಭೆ ಅಧ್ಯಕ್ಷ ಬಿ.ಎಂ.ಗೋವಿಂದ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಎಸ್.ಹೆಚ್.ರಘುನಾಥ, ಉಪಾಧ್ಯಕ್ಷ ಅಮರನಾರಾಯಣ, ನಿರ್ದೇಶಕರಾದ ಎಚ್.ಕೆ.ನಾರಾಯಣಸ್ವಾಮಿ, ಎಸ್.ನಾರಾಯಣಗೌಡ, ಟಿ.ಮಹದೇವಪ್ಪ, ವಿ ಶಂಕರ್, ಕೆ.ಸೀನಪ್ಪ, ಕರ್ಣಕುಮಾರ್, ಶ್ರೀರಾಮರೆಡ್ಡಿ, ಭಾಸ್ಕರರೆಡ್ಡಿ, ಆನಂದ, ಪುಷ್ಪ.ಎನ್, ಅಮರಾವತಿ, ಚೌಡಪ್ಪ, ಬಿ.ವೆಂಕಟೇಶಪ್ಪ, ಬಾಲಕೃಷ್ಣ, ಎಚ್.ಎನ್.ಚಂಗಾರೆಡ್ಡಿ, ಸುರೇಶ್‌ಬಾಬು, ಬ್ಯಾಂಕಿನ ವ್ಯವಸ್ಥಾಪಕ ಜಿ.ಪುರುಷೋತ್ತಮ, ಕ್ಷೇತ್ರಾಧಿಕಾರಿ ಬಿ.ಸುರೇಶ್ ಬಾಬು, ಡಿ.ಸುರೇಶ್ ಬಾಬು, ಎ.ಎನ್.ಸುಕನ್ಯ, ಎಸ್.ಎನ್.ಶಾಂತ, ಎಚ್.ಎನ್.ಸಂತೋಷ್ ಕುಮಾರ್ ಇದ್ದರು.