ಸಾರಾಂಶ
ಕಳೆದ ಮಂಗಳವಾರ ಹರಿಹರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಸೂಚನಾ ಪತ್ರದಲ್ಲಿ ಸಂಸದರ ಹೆಸರು ಹಾಕಿರುವ ಸರ್ಕಾರಿ ನೌಕರನನ್ನು ಶಾಸಕರು ಅವಹೇಳನ ಮಾಡಿ, ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿದ ವರ್ತನೆ ಖಂಡನೀಯ ಎಂದು ಮಲೇಬೆನ್ನೂರು ಪುರಸಭಾ ಸದಸ್ಯ ಮಹ್ಮದ್ ನಯಾಜ್ ಹೇಳಿದ್ದಾರೆ.
ಮಲೇಬೆನ್ನೂರು: ಕಳೆದ ಮಂಗಳವಾರ ಹರಿಹರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಸೂಚನಾ ಪತ್ರದಲ್ಲಿ ಸಂಸದರ ಹೆಸರು ಹಾಕಿರುವ ಸರ್ಕಾರಿ ನೌಕರನನ್ನು ಶಾಸಕರು ಅವಹೇಳನ ಮಾಡಿ, ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿದ ವರ್ತನೆ ಖಂಡನೀಯ ಎಂದು ಮಲೇಬೆನ್ನೂರು ಪುರಸಭಾ ಸದಸ್ಯ ಮಹ್ಮದ್ ನಯಾಜ್ ಹೇಳಿದರು.
ಪಟ್ಟಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾ ಸೂಚನಾ ಪತ್ರದಲ್ಲಿ ಸಂಸದರ ಹೆಸರನ್ನು ಹಾಕಿಸಿದ್ದ ನೌಕರರ ಹೆಸರನ್ನು ಪ್ರಶ್ನಿಸಿ, ಈ ದೇಶ ಪಾಕಿಸ್ತಾನ ಅಲ್ಲ ಎಂದು ಅವಹೇಳನ ಮಾಡಿದ್ದಾರೆ. ಅವರ ಮಾತಿನಿಂದ ನೋವುಂಟಾಗಿದೆ. ಅಧಿಕಾರಿಗಳ ವಿರುದ್ಧ ಬಳಸುವ ತಮ್ಮ ಮಾತಿನ ಶೈಲಿ ಬದಲಾಯಿಸಿಕೊಳ್ಳಲಿ ಎಂದರು.ಪುರಸಭೆ ಸದಸ್ಯ ಸಾಬೀರ್ ಅಲಿ ಮಾತನಾಡಿ, ತಾಪಂ ಕಾರ್ಯಕ್ರಮಗಳಲ್ಲಿ ಈ ಹಿಂದೆಯೂ ಶಿಷ್ಟಾಚಾರ ಪಾಲಿಸಿ, ಸಂಸದರ ಹೆಸರನ್ನು ಹಾಕಲಾಗಿದೆ. ಶಾಸಕರು ಪ್ರಸ್ತುತ ವಿರೋಧ ಮಾಡುತ್ತಿರುವುದು ಏಕೆ? ಶಾಸಕರಾಗಿ ೨ ವರ್ಷದ ನಂತರ ಫಲಕದ ವಿಚಾರ ಪ್ರಸ್ಥಾಪಿಸುವುದು ಯಾವ ಕಾರಣಕ್ಕೆ? ಅಧಿಕಾರಿಗಳಿಗೆ ಕೆಲಸ ಮಾಡಲಿಕ್ಕೂ ಬಿಡದೇ ದಬ್ಬಾಳಿಕೆ ಮಾಡುವುದನ್ನು ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಬೇಕು. ಇಲ್ಲಿದಿದ್ದರೆ ಶಾಸಕರ ವಿರುದ್ಧ ಬೃಹತ್ ಪ್ರತಿಭಟನೆ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯ ಮಹಮ್ಮದ್ ಖಲೀಲ್ ಮತ್ತು ದಾದಾಪೀರ್ ಮಾತನಾಡಿದರು. ಪುರಸಭಾ ಸದಸ್ಯ ಭೋವಿ ಶಿವು, ಆರೀಫ್‌ಅಲಿ, ಮುಖಂಡರಾದ ಪಿ.ಆರ್. ನಾಗರಾಜ್, ಭೋವಿ ಕುಮಾರ್, ಗಂಗಾಧರ್, ಬುರ್‍ಹಾನ್, ಶರೀಫ್ ಸಾಬ್, ಚಮನ್‌ಷಾ, ಯೂಸೂಫ್ ಮತ್ತಿತರರು ಇದ್ದರು.- - - -೨೬-ಎಂಬಿಆರ್೨: ಸುದ್ಧಿಗೋಷ್ಠಿಯಲ್ಲಿ ಪುರಸಭಾ ಸದಸ್ಯರು ಮಾತನಾಡಿದರು.