ಸಾರಾಂಶ
ನಗರದ ಸಾಹಿತಿ, ವಿದ್ಯಾನಗರದ ನಿವಾಸಿ ಜೆ.ಕಲೀಂ ಬಾಷಾ (74) ಸೋಮವಾರ ಮಧ್ಯಾಹ್ನ 1.30 ಗಂಟೆಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಸೋಮವಾರ ರಾತ್ರಿ 9.30ಕ್ಕೆ ನಗರದ ಖಬರಸ್ತಾನ್‍ನಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.
- ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಕೃತಿಗಳ ಕೊಡುಗೆ । ಶಿಕ್ಷಣ ಇಲಾಖೆಯಲ್ಲಿ ಕನ್ನಡ ವಿಷಯ ಪರಿವೀಕ್ಷರಾಗಿ ಸೇವೆ ಸಲ್ಲಿಸಿದ್ದ ಕಲೀಂ - - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಸಾಹಿತಿ, ವಿದ್ಯಾನಗರದ ನಿವಾಸಿ ಜೆ.ಕಲೀಂ ಬಾಷಾ (74) ಸೋಮವಾರ ಮಧ್ಯಾಹ್ನ 1.30 ಗಂಟೆಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಸೋಮವಾರ ರಾತ್ರಿ 9.30ಕ್ಕೆ ನಗರದ ಖಬರಸ್ತಾನ್‍ನಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.ದಾವಣಗೆರೆ ನಗರಕ್ಕೆ ಹೋಗಿದ್ದಾಗ ಹೃದಯಾಘಾತವಾಗಿದೆ. ಈ ಸಂದರ್ಭ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕಲೀಂ ಅವರು ಶಿಕ್ಷಣ ಇಲಾಖೆಯಲ್ಲಿ ಕನ್ನಡ ವಿಷಯ ಪರಿವೀಕ್ಷರಾಗಿ ಸೇವೆ ಸಲ್ಲಿಸಿದ್ದರು. ಶಾಹೀನಾ ಮತ್ತು ಇತರ ಕವಿತೆಗಳು, ಗುಜರಾತಿನಲ್ಲಿ ಗಾಂಧಿ ಆತ್ಮ, ಮನೆಯಲ್ಲಿ ಬೆಳದಿಂಗಳು, ಕಾಡ್ತಾವ ಮನದಾಗ, ಖುರಾನಿನ ಆಯ್ದ ಸೂಕ್ತಿಗಳು ಕೃತಿಗಳನ್ನು ರಚಿಸಿದ್ದರು. ಅವರು ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾ ಖಾನ್ ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕೃತಿಗಳನ್ನು ಹಿಂದಿ ಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡಿದ್ದರು.ಪ್ರಶಸ್ತಿಗಳು:
ಸಂಕ್ರಮಣ ಸಾಹಿತ್ಯ ಬಹುಮಾನ, ಗೊರೂರು, ರನ್ನ ಸಾಹಿತ್ಯ, ತಾಲೂಕು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕಲೀಂ ಬಾಷಾ ಪಡೆದಿದ್ದಾರೆ. ರಾಯಚೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇತ್ತೀಚೆಗೆ ಆಯೋಜಿಸಿದ್ದ ಗೋಕಾಕ ಚಳವಳಿ ಹಿನ್ನೋಟ- ಮುನ್ನೋಟ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದ್ದರು.ಅಂತಿಮ ದರ್ಶನ ಪಡೆದ ಗಣ್ಯರು:
ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿ ಜಯಪ್ಪ, ಸಂಘಟನಾ ಕಾರ್ಯದರ್ಶಿ ಜಗದೀಶ್ ಕೊಲಂಬಿ, ತಾಲ್ಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ತಾಲೂಕು ಗೌರವ ಕಾರ್ಯದರ್ಶಿ ಬಿ.ಬಿ.ರೇವಣ್ಣ ನಾಯ್ಕ್, ಚಿದಾನಂದ ಕಂಚಿಕೇರಿ, ಜಿಗಳಿ ಪ್ರಕಾಶ್, ಸುಮತಿ ಜಯಪ್ಪ, ಬಾಮಾ ಬಸವರಾಜ್, ಪ್ರೊ. ಎ.ಬಿ. ರಾಮಚಂದ್ರಪ್ಪ, ಎಚ್.ನಿಜಗುಣ, ಎ.ರಿಯಾಜ್ ಅಹ್ಮದ್, ಎನ್.ಇ.ಸುರೇಶ್ ಸ್ವಾಮಿ, ಎಚ್.ಕೆ. ಕೊಟ್ರಪ್ಪ, ಮಾಜಿ ಶಾಸಕ ಎಸ್.ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಬಿ.ರೇವಣ ಸಿದ್ದಪ್ಪ ಇತರೆ ಗಣ್ಯರು ಕಲೀಂ ಬಾಷಾ ಪಾರ್ಥಿವದ ಅಂತಿಮ ದರ್ಶನ ಪಡೆದರು.- - -
(ಬಾಕ್ಸ್) ಇಂದು ನುಡಿನಮನ ಹರಿಹರ: ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ತು ಹಾಗೂ ಪರಸ್ಪರ ಬಳಗದಿಂದ ಸಾಹಿತಿ ದಿ।। ಜೆ.ಕಲೀಂಬಾಷಾ ಸ್ಮರಣೆಯಲ್ಲಿ ಫೆ.4ರಂದು ಸಂಜೆ 5 ಗಂಟೆಗೆ ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ.- - -
-03ಎಚ್‍ಆರ್‍ಆರ್02:ಜೆ.ಕಲೀಂಬಾಷಾ, ಸಾಹಿತಿ, ಹರಿಹರ.