ಸಾರಾಂಶ
ರೈತರಿಗೆ ಸಂಕ್ರಾಂತಿ ಸುಗ್ಗಿ ಹಬ್ಬ. ಬೆಳೆದ ಬೆಳೆಯನ್ನು ಪೂಜೆ ಮಾಡುವ ಮೂಲಕ ಭೂತಾಯಿಗೆ ನಮನ ಸಲ್ಲಿಸುವುದು, ಹೆಣ್ಣು ಮಕ್ಕಳು ಎಳ್ಳು ಬೀರಿ ಒಳ್ಳೆ ಮಾತನಾಡಿ ಎಂಬ ಸಂದೇಶ ಸಾರುವ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಪ್ರಾರ್ಥನಾ ಸುಗ್ಗಿ ಹಬ್ಬ ಸಂಭ್ರಮದಿಂದ ಜರುಗಿತು.ಭಾರತೀಕಾಲೇಜಿನ ಹಿರಿಯ ಗ್ರಂಥಪಾಲಕ ಎ.ಎಸ್.ಸಂಜೀವ್ ಅವರು, ರಾಶಿ ಮತ್ತು ಗೋಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನಪದ ಶೈಲಿಯ ಹಬ್ಬಗಳು ನಮ್ಮ ಸಂಸ್ಕೃತಿ ಬಿಂಬಿಸುತ್ತವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಮರೆಯಾಗುತ್ತಿರುವ ಮೂಲ ಸಂಸ್ಕೃತಿ ಉಳಿವಿಗೆ ಇಂತಹ ಹಬ್ಬಗಳು ಸಹಕಾರಿಯಾಗಿವೆ ಎಂದರು.
ರೈತರಿಗೆ ಸಂಕ್ರಾಂತಿ ಸುಗ್ಗಿ ಹಬ್ಬ. ಬೆಳೆದ ಬೆಳೆಯನ್ನು ಪೂಜೆ ಮಾಡುವ ಮೂಲಕ ಭೂತಾಯಿಗೆ ನಮನ ಸಲ್ಲಿಸುವುದು, ಹೆಣ್ಣು ಮಕ್ಕಳು ಎಳ್ಳು ಬೀರಿ ಒಳ್ಳೆ ಮಾತನಾಡಿ ಎಂಬ ಸಂದೇಶ ಸಾರುವ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.ಹಳ್ಳಿ ಶೈಲಿಯಲ್ಲೇ ಗುಡಿಸಲು ನಿರ್ಮಿಸಿ ಭತ್ತ, ರಾಗಿ ರಾಶಿ ಹಾಕಿ ಸೇರು, ಮೊರ, ಇಬ್ಬಳಿಗೆ, ಕೂಡುಗೋಲು ಸೇರಿದಂತೆ ರೈತರು ಬಳಸುವ ಸಾಮಾಗ್ರಿಗಳನ್ನು ಪೂಜಿಸಲಾಯಿತು. ವಿದ್ಯಾರ್ಥಿಗಳು ಸಂಪ್ರದಾಯಕ ಉಡುಗೆ ತೋಟ್ಟು ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ರವಿಸಾವಂದಿಪುರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ಸೌಮ್ಯ ಕೃಷ್ಣ, ನಿರ್ದೇಕರಾದ, ವೈ.ಬಿ.ಶ್ರೀಕಂಠಸ್ವಾಮಿ, ರಘುವೆಂಕಟೇಗೌಡ, ಶಿಕ್ಷಕರಾದ ಎಸ್.ಬಿ. ಅಶ್ವಿನಿ, ಪಿ.ಸವಿತಾ, ಡಿ.ಎಂ.ಸ್ಮಿತಾ, ಆರ್.ರಮ್ಯ, ನವ್ಯಶ್ರೀ, ಕೆ.ಎನ್.ಪ್ರಿಯಾಂಕ, ಸುಷ್ಮಿತಾ, ರಚನಾ, ಕೆ.ಎನ್.ಅನುಪಮ, ಶ್ವೇತಾ, ಆಶಾ ಸೇರಿದಂತೆ ಹಲವರಿದ್ದರು.ಇಂದು ಮಹಾಕವಿ ಕುಮಾರವ್ಯಾಸ ಜಯಂತಿ
ಕನ್ನಡಪ್ರಭ ವಾರ್ತೆ ಮಂಡ್ಯಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು, ಮಂಡ್ಯ ಜಿಲ್ಲಾ ಗಮಕ ಕಲಾ ಪರಿಷತ್ತು, ಸೇವಾ ಕಿರಣ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಹಾಕವಿ ಕುಮಾರವ್ಯಾಸ ಜಯಂತಿ-ಗಮಕ ವಾಚನ ಕಾರ್ಯಕ್ರಮ ಗುರುವಾರ (ಜ.೧೬) ಬೆಳಗ್ಗೆ ೧೧ ಗಂಟೆಗೆ ಸುಭಾಷ್ ನಗರದ ಸೇವಾಕಿರಣ ಆಶ್ರಮದಲ್ಲಿ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎ.ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಸೇವಾ ಕಿರಣ ಟ್ರಸ್ಟ್‌ನ ಕಾರ್ಯದರ್ಶಿ ಜಿ.ವಿ.ನಾಗರಾಜು ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಕುಮಾರವ್ಯಾಸ ಕವಿ ಪರಿಚಯ ಮಾಡಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್, ಅಲೈಯನ್ಸ್ ಜಿಲ್ಲಾ ರಾಜ್ಯಪಾಲ ಅಲೈ ಕೆ.ಟಿ.ಹನುಮಂತು ಭಾಗವಹಿಸುವರು. ಕುಮಾರವ್ಯಾಸ ಜಯಂತಿ ಅಂಗವಾಗಿ ಗಮಕಿ ಶೈಲಜಾ ಚಂದ್ರಶೇಖರ್ ಅವರಿಂದ ಗಮಕ ವಾಚನ ಹಾಗೂ ಸಿ.ಪಿ.ವಿದ್ಯಾಶಂಕರ್ ಅವರ ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ.