ಸಾರಾಂಶ
ದೊಡ್ಡಬಳ್ಳಾಪುರ: ಸುಲಭವಾಗಿ ಪಡೆದ ಯಾವುದೂ ಹೆಚ್ಚು ದಿನ ಉಪಯೋಗಕ್ಕೆ ಬರುವುದಿಲ್ಲ. ಆದರೆ ಶ್ರಮವಹಿಸಿ ಕಲಿತ ವಿದ್ಯೆ ಉನ್ನತ ಬದುಕನ್ನು ಕಟ್ಟಿಕೊಡುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಟಿ.ರಂಗಸ್ವಾಮಿ ಹೇಳಿದರು.
ದೊಡ್ಡಬಳ್ಳಾಪುರ: ಸುಲಭವಾಗಿ ಪಡೆದ ಯಾವುದೂ ಹೆಚ್ಚು ದಿನ ಉಪಯೋಗಕ್ಕೆ ಬರುವುದಿಲ್ಲ. ಆದರೆ ಶ್ರಮವಹಿಸಿ ಕಲಿತ ವಿದ್ಯೆ ಉನ್ನತ ಬದುಕನ್ನು ಕಟ್ಟಿಕೊಡುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಟಿ.ರಂಗಸ್ವಾಮಿ ಹೇಳಿದರು.
ಇಲ್ಲಿನ ಕೆ.ಗೋಪಾಲಕೃಷ್ಣ ಎಜುಕೇಶನ್ ಟ್ರಸ್ಟಿನ ಜಿ.ಕೆ. ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಜತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಬೇಕು. ಶಿಸ್ತುಬದ್ದ ಜೀವನ ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಅಗತ್ಯ ಎಂದು ತಿಳಿಸಿದರು.ಬೆಂ.ಗ್ರಾ. ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಆರ್.ರವಿಕಿರಣ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮನುಷ್ಯ ಸಂಬಂಧಗಳ ಮೌಲ್ಯವನ್ನು ಬಿತ್ತುವುದು ಅತ್ಯಗತ್ಯ. ವಿದ್ಯಾವಂತ ಸಮುದಾಯ ಪ್ರಜ್ಞಾವಂತಿಕೆಯನ್ನೂ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಲಿ ನಿರ್ದೇಶಕರಾದ ಡಿ.ಎಸ್.ಪ್ರಶಾಂತ್, ಗೋಕುಲ್ ರಾಮ್, ಮುಖ್ಯಶಿಕ್ಷಕ ಕೆ.ಪ್ರಸನ್ನ ಮತ್ತಿತರರು ಹಾಜರಿದ್ದರು.1ಕೆಡಿಬಿಪಿ11- ದೊಡ್ಡಬಳ್ಳಾಪುರದ ಜಿ.ಕೆ.ಪ್ರೌಢಶಾಲೆಯಲ್ಲಿ ನಡೆದ ರಜತೋತ್ಸವ ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕ ಟಿ.ರಂಗಸ್ವಾಮಿ ಉದ್ಘಾಟಿಸಿದರು.