ಸಾರಾಂಶ
ಹಾಸನ ಜಿಲ್ಲೆಯಲ್ಲಿ ರಂಗಾಯಣ ರಚನೆಯಾದರೆ ಈ ಭಾಗದ ಕಲಾವಿದರಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ. ಮೂಡಲಪಾಯ ಯಕ್ಷಗಾನ ತರಬೇತಿ ಎರಡು ತಿಂಗಳ ಕಾಲ ನಡೆಯಲಿದ್ದು ೧೫ಕ್ಕೂ ಹೆಚ್ಚು ಪ್ರಕಾರಗಳು ಇಲ್ಲಿದೆ. ಅವುಗಳ ಪುನಶ್ವೇತನ ಆಗಬೇಕಾಗಿದೆ. ತಮ್ಮ ತಂಡ ೩೫ ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದು ಅನೇಕ ಯುವ ಕಲಾವಿದರನ್ನು ಬೆಳೆಸಲಾಗುತ್ತಿದೆ. ನಮ್ಮಲ್ಲಿ ಉತ್ಸಾಹವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಂಗಾಯಣ, ಕಾರ್ಯನಿರ್ವಹಿಸುತ್ತಿತ್ತು. ಹಾಸನ ಜಿಲ್ಲೆಗೆ ಮೂಡಲಪಾಯ ರಂಗಾಯಣ ಅಗತ್ಯವಿದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಂಗಾಯಣ, ಕಾರ್ಯನಿರ್ವಹಿಸುತ್ತಿತ್ತು. ಹಾಸನ ಜಿಲ್ಲೆಗೆ ಮೂಡಲಪಾಯ ರಂಗಾಯಣ ಅಗತ್ಯವಿದೆ ಎಂದು ಜನಪದ ರಂಗ ಮಾಧ್ಯಮದ ಅಧ್ಯಕ್ಷ ಹಾಗೂ ಜಾನಪದ ವಿದ್ವಾಂಸ ಡಾ. ಚಂದ್ರು ಕಾಳೆನಹಳ್ಳಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪಟ್ಟಣದ ಅನಿಕೇತನ ಶಾಲೆಯ ಸಭಾಂಗಣದಲ್ಲಿ ಯಕ್ಷಗಾನ ಅಕಾಡೆಮಿ ಹಾಗೂ ಜನಪದ ರಂಗ ಮಾಧ್ಯಮ ಸಹಯೋಗದಲ್ಲಿ ನಡೆದ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಸನ ಜಿಲ್ಲೆಯಲ್ಲಿ ರಂಗಾಯಣ ರಚನೆಯಾದರೆ ಈ ಭಾಗದ ಕಲಾವಿದರಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ. ಮೂಡಲಪಾಯ ಯಕ್ಷಗಾನ ತರಬೇತಿ ಎರಡು ತಿಂಗಳ ಕಾಲ ನಡೆಯಲಿದ್ದು ೧೫ಕ್ಕೂ ಹೆಚ್ಚು ಪ್ರಕಾರಗಳು ಇಲ್ಲಿದೆ. ಅವುಗಳ ಪುನಶ್ವೇತನ ಆಗಬೇಕಾಗಿದೆ. ತಮ್ಮ ತಂಡ ೩೫ ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದು ಅನೇಕ ಯುವ ಕಲಾವಿದರನ್ನು ಬೆಳೆಸಲಾಗುತ್ತಿದೆ. ನಮ್ಮಲ್ಲಿ ಉತ್ಸಾಹವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದರು.
ತಾಳ ಮದ್ದಳೆಯನ್ನ ನುಡಿಸಿ ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್. ಲೋಕೇಶ್ ಹಡೇನಹಳ್ಳಿ ಮಾತನಾಡಿ, ಜನಪದ ಕಲೆ ಸಾಹಿತ್ಯ, ರಂಗ ಕಲೆ ಸಂಗೀತ ನೃತ್ಯ ಇವುಗಳು ನಶಿಸಿದರೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಯುವ ಜನಾಂಗ ದಿಕ್ಕು ತಪ್ಪುತ್ತದೆ. ಸಮಾಜದಲ್ಲಿ ಮನುಷ್ಯನ ಸುಂದರ ಬದುಕಿಗೆ ಸಾಂಸ್ಕೃತಿಕ, ಚಟುವಟಿಕೆಗಳು ಆಗತ್ಯವಿದೆ. ಸಮಾಜದಲ್ಲಿ ರಾಜಕೀಯ ಸೇರಿದಂತೆ ಎಲ್ಲವೂ ಕಲುಷಿತವಾಗುತ್ತಿದೆ. ವಿದ್ಯಾರ್ಥಿ ಜೀವನ ಅಂಕಗಳ ಕಡೆ ಓಡಿದರೆ, ಮತ್ತೊಂದು ಕಡೆ ಹಣದ ಕಡೆ ಓಡುವಂತಾಗಿದೆ. ಒಳ್ಳೆಯ ಸಿನಿಮಾ ತೆರೆ ಕಾಣಲು ಸಾಹಿತ್ಯ ಸಂಗೀತದ ಸಂಪರ್ಕ ಬೇಕು. ಈ ನಿಟ್ಟಿನಲ್ಲಿ ನಮ್ಮ ಹಿಂದಿನ ಕಲಾವಿದರು ರಂಗಭೂಮಿ ಕಲಾವಿದರಾಗಿ ಅತ್ಯುತ್ತಮ ಚಲನಚಿತ್ರಗಳನ್ನ ನೀಡಿದ್ದಾರೆ. ಇಂದು ಸತ್ವ ಇಲ್ಲದ ಸಂದೇಶ ಇಲ್ಲದ ಸಿನಿಮಾಗಳು ತೆರೆ ಕಾಣುತ್ತಿರುವುದು ವಿಷಾದನೀಯ, ಜನಪದ ಸಾಹಿತ್ಯ ಹಾಗೂ ಸಂಗೀತದ ಒತ್ತಾಸೆ ಇದ್ದ ಚಲನಚಿತ್ರಗಳು ಸಮಾಜದ ಮೇಲೆ ಪರಿಣಾಮ ಬೀರುತ್ತಿತ್ತು ಎಂದರು.ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯರಾದ ಪುಟ್ಟಸ್ವಾಮಿ ಅರಳಗುಪ್ಪೆ, ಜನಪದ ಕಲಾವಿದ ಹಾಗೂ ಶಿಕ್ಷಕ ಶಿವನಗೌಡ ಪಾಟೀಲ್, ರಾಜ್ಯದ ಪ್ರಸಿದ್ಧ ಕ್ಯಾನ್ಸರ್ ತಜ್ಞ ಡಾ. ಜಗದೀಶ್, ರಂಗ ಮಾಧ್ಯಮ ನಿರ್ದೇಶಕ ನಾರಾಯಣ್, ಹೊಳೆನರಸೀಪುರ ತಾಲೂಕು ಕಸಾಪ ಅಧ್ಯಕ್ಷ ಆರ್. ಬಿ ಪುಟ್ಟೇಗೌಡ ಇದ್ದರು.