ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಹಾಗೂ ಅಮೆಚೂರ್ ನೆಟ್‌ ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ನಗರದಲ್ಲಿ ನಡೆದ 7ನೇ ಜೂನಿಯರ್ ರಾಜ್ಯಮಟ್ಟದ ನೆಟ್‌ಬಾಲ್ ಚಾಂಪಿಯನ್‌ ಶಿಪ್-2026ರ ಬಾಲಕಿಯರ ವಿಭಾಗದಲ್ಲಿ ಹಾಸನ ಹಾಗೂ ಬಾಲಕರ ವಿಭಾಗದಲ್ಲಿ ಬೆಂಗಳೂರು ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.

- 7ನೇ ಜೂನಿಯರ್ ರಾಜ್ಯಮಟ್ಟದ ನೆಟ್‌ ಬಾಲ್ ಚಾಂಪಿಯನ್‌ಶಿಪ್ - - -

ದಾವಣಗೆರೆ: ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಹಾಗೂ ಅಮೆಚೂರ್ ನೆಟ್‌ ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ನಗರದಲ್ಲಿ ನಡೆದ 7ನೇ ಜೂನಿಯರ್ ರಾಜ್ಯಮಟ್ಟದ ನೆಟ್‌ಬಾಲ್ ಚಾಂಪಿಯನ್‌ ಶಿಪ್-2026ರ ಬಾಲಕಿಯರ ವಿಭಾಗದಲ್ಲಿ ಹಾಸನ ಹಾಗೂ ಬಾಲಕರ ವಿಭಾಗದಲ್ಲಿ ಬೆಂಗಳೂರು ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.

ನಗರದಲ್ಲಿ ಸಂಸ್ಥೆ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ನೇತೃತ್ವದಲ್ಲಿ ನಡೆದ ಪಂದ್ಯಾವಳಿಯ ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಹಾಸನ- ದಾವಣಗೆರೆ ತಂಡಗಳ ನಡುವೆ ಜಿದ್ದಾಜಿದ್ದಿ ಹೋರಾಟದಲ್ಲಿ ಹಾಸನ ತಂಡ ತಂಡ 27-20 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ದಾವಣಗೆರೆ ತಂಡ ದ್ವಿತೀಯ ಸ್ಥಾನ ಪಡೆದರೆ, ಚಾಮರಾಜನಗರ- ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ಜಂಟಿಯಾಗಿ ತೃತೀಯ ಸ್ಥಾನ ಹಂಚಿಕೊಂಡವು.

ಬಾಲಕರ ವಿಭಾಗದಲ್ಲಿ ಬೆಂಗಳೂರು ನಗರ ಹಾಗೂ ಹಾಗೂ ಚಾಮರಾಜನಗರ ನಡುವೆ ನಡೆದ ಅತ್ಯಂತ ರೋಚಕ ಫೈನಲ್‌ನಲ್ಲಿ 31-30 ಅಂಕಗಳಿಂದ ಬೆಂಗಳೂರು ನಗರ ತಂಡ ಪ್ರಥಮ ಸ್ಥಾನ, ಚಾಮರಾಜ ನಗರ ದ್ವಿತೀಯ ಸ್ಥಾನ ಪಡೆದವು. ಮೈಸೂರು ಹಾಗೂ ದಕ್ಷಿಣ ಕನ್ನಡ ತಂಡಗಳು ತೃತೀಯ ಸ್ಥಾನವನ್ನು ಜಂಟಿಯಾಗಿ ತಮ್ಮದಾಗಿಸಿಕೊಂಡವು.

ಪಾಲಿಕೆ ಮಾಜಿ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಕಿರಣಕುಮಾರ, ಸಪ್ತಗಿರಿ ಶ್ರೀರಾಮಮೂರ್ತಿ, ಸಿದ್ದೇಶ, ಡಿ.ಎಸ್.ಮಲ್ಲಿಕಾರ್ಜುನ, ನಲ್ಕುದುರೆ ಗೌಡರ ವಿಜಯಕುಮಾರ, ಎಸ್.ಎಲ್.ಪ್ರಸನ್ನ ಭಟ್, ಜಿಲ್ಲಾ ನೆಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ವೀರೇಶ, ತರಬೇತುದಾರರಾದ ಆರ್.ದರ್ಶನ್ ಇತರರು ಇದ್ದರು.

- - -

-8ಕೆಡಿವಿಜಿ6, 7.ಜೆಪಿಜಿ:

ದಾವಣಗೆರೆಯಲ್ಲಿ 7ನೇ ಜೂನಿಯರ್ ರಾಜ್ಯಮಟ್ಟದ ನೆಟ್‌ಬಾಲ್ ಚಾಂಪಿಯನ್‌ ಶಿಪ್-2026 ಚಾಂಪಿಯನ್‌ಗಳಾದ ಹಾಸನದ ಬಾಲಕಿಯರು ಹಾಗೂ ಬಾಲಕರ ವಿಭಾಗದ ಚಾಂಪಿಯನ್ ಬೆಂಗಳೂರು ನಗರ ತಂಡದ ಹುಡುಗರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು.