ಸಾರಾಂಶ
ಹಲವರು ಮಹನೀಯರ ಹೋರಾಟದ ಪರಿಣಾಮ ಹರಿದು ಹಂಚಿ ಹೋಗಿದ್ದ ಕರ್ನಾಟಕ ರಾಜ್ಯ ಒಗ್ಗೂಡುವಲ್ಲಿ ಸಾಧ್ಯವಾಯಿತು.
ಕನ್ನಡ ಕಸ್ತೂರಿ ಸಂಘದಿಂದ ರಾಜ್ಯೋತ್ಸವ
ಹೊಸಕೋಟೆ: ಕನ್ನಡಿಗರಿಗೆ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ಖಾಸಗಿ ಸುದ್ದಿ ವಾಹಿನಿ ನಿರೂಪಕಿ ಶಕುಂತಲಾ ತಿಳಿಸಿದರು.ನಗರದ ವರದಾಪುರದಲ್ಲಿ ಕನ್ನಡ ಕಸ್ತೂರಿ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತ್ಯ ಜೀವನದಲ್ಲಿ ಕನ್ನಡ ಭಾಷೆ ಬಳಸಿಕೊಂಡು ಇತರೆ ಭಾಷೆಗಳನ್ನು ಪ್ರೀತಿಸಬೇಕು. ಆಗ ಮಾತ್ರ ಮಾತೃಭಾಷೆ ಕನ್ನಡ ಉಳಿಯಲು ಸಾಧ್ಯ ಎಂದು ಹೇಳಿದರು.
ಜಾನಪದ ಕಲಾರತ್ನ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಪೂಜಾರಿ ಮಾತನಾಡಿ, ಹಲವರು ಮಹನೀಯರ ಹೋರಾಟದ ಪರಿಣಾಮ ಹರಿದು ಹಂಚಿ ಹೋಗಿದ್ದ ಕರ್ನಾಟಕ ರಾಜ್ಯ ಒಗ್ಗೂಡುವಲ್ಲಿ ಸಾಧ್ಯವಾಯಿತು ಎಂದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ, ಎಸ್‌ಎಸ್ ಎಲ್‌ಸಿ, ಪಿಯುಸಿ ಪರೀಕ್ಷಾ ಪ್ರತಿಭಾ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜ ಸೇವಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಖ್ಯಾತ ಚಲನಚಿತ್ರ ನಟ, ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಪ್ರದೀಪ್ ಚಂದ್ರ, ವಿಜಯ್ ಸಿಂಹ, ರಾಷ್ಟ್ರೀಯ ವೈಟ್‌ಲಿಫ್ಟಿಂಗ್ ಕ್ರೀಡಾಪಟು ಕುಮಾರಿ ಉಷಾಗೌಡ, ಕುಸ್ತಿಪಟು ತುಷಾರ, ಜಾನಪದ ಕಲಾರತ್ನ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಪೂಜಾರಿ, ಕನ್ನಡ ಕಸ್ತೂರಿ ಸಂಘದ ಅಧ್ಯಕ್ಷ ಶಿವಣ್ಣ, ಜನಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷ ಜೆಎಂ ಹುಸೇನ್, ನಗರಸಭೆ ಸದಸ್ಯೆ ಶಾಜಿಯಾ ಕಲೀಮ್, ಟೌನ್ ಬ್ಯಾಂಕ್ ನಿರ್ದೇಶಕ ಬಾಲಚಂದ್ರ, ಅಂಬರೀಶ್, ವೈಟ್‌ಫೀಲ್ಡ್ ವಕೀಲರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಬೆಂಗಳೂರು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಶಶಿಕುಮಾರ್, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಮಹಿಳಾ ಹಕ್ಕುಗಳ ಪರಿಷತ್ ರಾಜ್ಯಾಧ್ಯಕ್ಷ ಅನಿತಾ, ಎಎಂಎನ್ ಮೋಟಾರ್ಸ್ ಅಲ್ತಾಫ್, ಮುಖಂಡ ಮುನೀರ್ ಹಾಜರಿದ್ದರು.