ಸಾರಾಂಶ
Students should keep life beautiful by developing emotional world
ನರಗುಂದ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಸಾಧನೆಯತ್ತ ಗಮನ ಹರಿಸಬೇಕು ಎಂದು ಶ್ರೀಸಿದ್ದೇಶ್ವರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರೊ. ವೀರಣ್ಣ ಕಾರಿಕಾಯಿ ಹೇಳಿದರು.
ಅವರು ಗುರುವಾರ ಪಟ್ಟಣದ ಶ್ರೀಯಡಿಯೂರ ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸನ್ 2023 24ನೇ ಶೈಕ್ಷಣಿಕ ಸಾಲಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತ ಹರಿಸಬೇಕು ಎಂದು ಕಿವಿಮಾತು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಮಾತನಾಡಿ, ಪದವಿ ಮುಗಿದ ತಕ್ಷಣ ಕೆಲವರು ಉದ್ಯೋಗದತ್ತ ಮುಖ ಮಾಡಿದರೆ ಮತ್ತೆ ಕೆಲವರು ಉನ್ನತ ವಿದ್ಯಾಭ್ಯಾಸದ ಕಡೆ ಹೋಗುತ್ತಾರೆ ಇದರ ಜತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ ಭವಿಷ್ಯದಲ್ಲಿ ಬೇಕಾದ ಎಲ್ಲ ರೀತಿಯ ಸೌಲಭ್ಯ ನೀಡಲು ಸಂಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು.
ಪ್ರೊ.ಎಂ.ಪಿ. ಕ್ಯಾತನಗೌಡ್ರ ಮಾತನಾಡಿ, ಭಾವನಾತ್ಮಕ ಪ್ರಪಂಚ ಬೆಳೆಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬೇಕು ಎಂದರು.ಪ್ರಾಚಾರ್ಯ ಆರ್.ಬಿ.ಪಾಟೀಲ ಮಾತನಾಡಿ, ವಿದ್ಯಾರ್ಥಿ ಮತ್ತು ವಿದ್ಯಾಲಯದ ಸಂಬಂಧದ ಕೊಂಡಿ ಎಂದಿಗೂ ಕಳಚಬಾರದು ಅದು ಮುಂದುವರಿಯುತ್ತಾ ಸಾಗಬೇಕು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಆಧಾರ ಸ್ತಂಭವಾಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೊ. ಎಂ.ಈ.ವಿಶ್ವಕರ್ಮ ಗ್ರಂಥಪಾಲಕ ವಿ.ಎಸ್. ಪಾರ್ವತಿ, ಮಲ್ಲಿಕಾರ್ಜುನ ಹೂಗಾರ, ಸುಶ್ಮಿತಾ ಹೂಗಾರ, ರಕ್ಷಿತಾ ಚನ್ನಪ್ಪಗೌಡ್ರ, ಪ್ರೊ.ಶ್ರೀಕಾಂತ ಮೇಟಿ, ಎಸ್.ಎ.ಬಾರಕೇರ, ಸುಕನ್ಯಾ ಪಾಟೀಲ, ಪುಷ್ಪ ಕುರಹಟ್ಟಿ, ಡಿ.ಆರ್.ಕಲಬುರ್ಗಿ, ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.