ಇಂದಿನಿಂದ ಹಜರತ್ ಸೈಯ್ಯದ್ ಬಾಷಾ ಉರೂಸ್‌

| Published : Feb 15 2025, 12:32 AM IST

ಸಾರಾಂಶ

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು

ಮುಂಡರಗಿ: ಫೆ.15 ರಿಂದ 17ರವರೆಗೆ ಮೂರು ದಿನಗಳ ಕಾಲ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹಜರತ್ ಸೈಯ್ಯದ್ ಬಾಷಾ ರಹಮತುಲ್ಲಾ ಅಲೈ ಅವರ ಉರೂಸ್‌ ಜರುಗಲಿದೆ ಎಂದು ದರ್ಗಾ ಕಮೀಟಿ ಅಧ್ಯಕ್ಷ ಎಂ.ಯು. ಮಕಾಂದಾರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.15ರ ರಾತ್ರಿ 10.30ಕ್ಕೆ ಗಂಧ ಕಾರ್ಯಕ್ರಮ ಜರುಗಲಿದ್ದು, ಸೈಯ್ಯದ್ ಅಲಿ ಮಕಾಂದಾರ ಮನೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಧದ ಮೆರವಣಿಗೆ ದರ್ಗಾ ತಲುಪಲಿದೆ. ಈ ಸಂದರ್ಭದಲ್ಲಿ ಬೆಳಗಾವಿ ಹಾಗೂ ಮುಂಡರಗಿ ಆರ್ಕೆಸ್ಟ್ರಾಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಫೆ.16 ರಂದು ಮಧ್ಯಾಹ್ನ 12 ಗಂಟೆಗೆ ಉರೂಸ್‌ ಷರೀಫ ಕಾರ್ಯಕ್ರಮದಲ್ಲಿ ಅಕ್ಕಿ ಬಂಡಿ ಮೆರವಣಿಗೆ ಪ್ರಾರಂಭವಾಗಿ ರಾತ್ರಿ 10 ಗಂಟೆಗೆ ದರ್ಗಾ ತಲುಪಲಿದೆ. ನಂತರ ಸರಿಗಮಪ ಖ್ಯಾತಿಯ ನಯನಾ ಅಳವಂಡಿ ಹಾಗೂ ಕರ್ನಾಟಕ ಮೆಲೋಡಿಸ್ ಮುಂಡರಗಿ ಇವರಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಹಾಸ್ಯ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಬೆಳಗಟ್ಟಿ ಹಜರತ್ ಮುಸ್ತಫಾ ಖಾದರಿ ಸಾಹೇಬರು ಸಾನ್ನಿಧ್ಯವಹಿಸುವರು. ಕಾರ್ಯಕ್ರಮವನ್ನು ಸಿಪಿಐ ಮುಂಜುನಾಥ ಕುಸುಗಲ್ ಉದ್ಘಾಟಿಸಲಿದ್ದಾರೆ. ಕಲಕೇರಿ ಅಂಜುಮನ್ ಕಮೀಟಿ ಮಾಜಿ ಅಧ್ಯಕ್ಷ ಆರ್.ಎಂ. ಖತೀಬ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪಿ.ಎಂ. ಪಾಟೀಲ, ಶಿವಲಿಂಗಯ್ಯ ಗುರುವಿನ, ಚನ್ನವೀರಯ್ಯ ಸಾಲಿಮಠ, ಕೊಟ್ರಪ್ಪ ದೇಸಾಯಿ, ಎಂ.ಎಂ. ಮುಲ್ಲಾ, ದೇವಪ್ಪ ತಾಂಬ್ರಗುಂಡಿ, ಧನಂಜಯ ದ್ರಾಕ್ಷಿ, ಬಸವರಾಜ ಕೊಪ್ಪಣ್ಣವರ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.

ಫೆ. 17ರಂದು ಬೆಳಗ್ಗೆ 11.30ಕ್ಕೆ ದರ್ಗಾ ಆವರಣದಲ್ಲಿ ಧರ್ಮಸಭೆ ಜರುಗಲಿದೆ. ಬೆಳಗಟ್ಟಿ ಹಜರತ್ ಮುಸ್ತಫಾಖಾದ್ರಿ ಸಾಹೇಬ್, ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನ ಶಿಗ್ಲಿಯ ಚನ್ನವೀರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ, ಹುನಗುಂದ ಶಾಸಕ ಡಾ. ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದರ್ಗಾ ಕಮೀಟಿ ಅಧ್ಯಕ್ಷ ಎಂ.ಯು. ಮಕಾಂದಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಹುಬ್ಬಳ್ಳಿ ಧಾರವಾಡ ಹೆಸ್ಕಾಂ ಅಧ್ಯಕ್ಷ ಅಜ್ಜಮಫೀರ್ ಖಾದ್ರಿ, ಕಲಕೇರಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿದೇವಿ ನಾಯ್ಕರ್, ಅಂದಪ್ಪ ಕಲಕೇರಿ, ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ರಾಜ್ಯ ಕೆಪಿಸಿಸಿ ಸದಸ್ಯ ಎಸ್.ಡಿ. ಮಕಾಂದಾರ್, ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಎಸ್.ಡಿ. ಮಕಾಂದಾರ, ವಿ.ಎಲ್. ನಾಡಗೌಡ್ರ, ರಾಜು ಡಾವಣಗೇರಿ, ಹಾಸಿಂಫೀರ್ ಲಕ್ಷ್ಮೇಶ್ವರ, ಎಂ.ಎ. ಮಾಳೇಕೊಪ್ಪ, ಮೆಹೆಬೂಬಸಾಬ್ ಮಕಾಂದಾರ್, ಬಾಬುಸಾಬ್ ಅಳವಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.