ಚನ್ನಪಟ್ಟಣ : ಕುಟುಂಬ ಕುಡಿ ಪಟ್ಟಾಭಿಷೇಕಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೋರಾಟ

| Published : Nov 10 2024, 01:53 AM IST / Updated: Nov 10 2024, 12:37 PM IST

ಚನ್ನಪಟ್ಟಣ : ಕುಟುಂಬ ಕುಡಿ ಪಟ್ಟಾಭಿಷೇಕಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

 ತಾಲೂಕಿನ ಅಭಿವೃದ್ಧಿ, ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ನಾನು ಹೋರಾಟ ಮಾಡುತ್ತಿದ್ದರೆ, ಜೆಡಿಎಸ್ ಕುಟುಂಬದ ಕುಡಿಯ ಪಟ್ಟಾಭಿಷೇಕ್ಕಕ್ಕಾಗಿ ಹೋರಾಟ ಮಾಡುತ್ತಿದೆ. ಇದರಲ್ಲಿ ಯಾರು ಹಿತವರು ಎಂದು ಯೋಚಿಸಿ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.

ಚನ್ನಪಟ್ಟಣ: ತಾಲೂಕಿನ ಅಭಿವೃದ್ಧಿ, ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ನಾನು ಹೋರಾಟ ಮಾಡುತ್ತಿದ್ದರೆ, ಜೆಡಿಎಸ್ ಕುಟುಂಬದ ಕುಡಿಯ ಪಟ್ಟಾಭಿಷೇಕ್ಕಕ್ಕಾಗಿ ಹೋರಾಟ ಮಾಡುತ್ತಿದೆ. ಇದರಲ್ಲಿ ಯಾರು ಹಿತವರು ಎಂದು ಯೋಚಿಸಿ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.

ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ತಿಗಳ ಸಮುದಾಯ ಸಭೆಯಲ್ಲಿ ಮಾತನಾಡಿದ ಅವರು, ಬಿಸಲಮ್ಮ ನಮ್ಮ ಮನೆದೇವರು, ರಾಜಕೀಯ ಪ್ರಾರಂಭದ ದಿನಗಳಿಂದಲೂ ಈ ಜನಾಂಗ ನನ್ನ ಕೈ ಹಿಡಿದಿದ್ದು, ಈ ಬಾರಿಯು ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ವಿನಂತಿಸಿದರು.

ಉಪ ಚುನಾವಣೆ ನನ್ನ ರಾಜಕೀಯ ಜೀವನದ ಪ್ರಮುಖ ಘಟ್ಟ. ಈ ರಾಜಕೀಯ ದೈತ್ಯರು ಎರಡು ಬಾರಿ ನನ್ನ ಮೇಲೆ ನುಗ್ಗಿ ಬಂದು ಸೋಲಿಸಿ ಇದೀಗ ಮೂರನೇ ಬಾರಿಗೆ ತಮ್ಮ ವಂಶದ ಕುಡಿಯನ್ನು ಕರೆ ತಂದಿದ್ದಾರೆ, ಇದೆಲ್ಲವನ್ನು ತಾಲೂಕಿನ ಸ್ವಾಭಿಮಾನಿ ಮತದಾರರು ಯೋಚಿಸಿ, ವಿವೇಚಿಸಿ ಮತ ಚಲಾಯಿಸಬೇಕು ಎಂದರು.

ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದ ಶಾಸಕರಾಗಿದ್ದರು. ಜೊತೆಗೆ ಸಿಎಂ ಹುದ್ದೆ ಸಹ ಅಲಂಕರಿಸಿದವರು, ಆದರೂ ಕ್ಷೇತ್ರ ಯಾಕೆ ಅಭಿವೃದ್ಧಿಯಾಗಿಲ್ಲ ಎಂದು ಮತದಾರರು ಕೇಳಬೇಕಿದೆ, ಕೇವಲ ಚುನಾವಣೆಗಳು ಬಂದಾಗ ಮಾತ್ರ ನಿಮ್ಮೂರುಗಳಿಗೆ ಬರುವ ಇವರನ್ನು ನಂಬದೆ ಸದಾ ನಿಮ್ಮ ಜೊತೆ ಇರುವ ನನಗೆ ಈ ಬಾರಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಶರತ್ ಬಚ್ಚೇಗೌಡ, ನಂಜೇಗೌಡ, ಮಾಜಿ ಶಾಸಕ ನರೇಂದ್ರಸ್ವಾಮಿ, ಮಾಜಿ ಮೇಯರ್ ರಮೇಶ್, ಪದ್ಮಾವತಿ ಗಂಗಾಧರ್, ಚಿತ್ರನಟ ಮಧನ್ ಪಟೇಲ್, ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಅನೇಕರು ಹಾಜರಿದ್ದರು.

ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ:

ಚನ್ನಪಟ್ಟಣ: ಕಾಂಗ್ರೆಸ್ ಸರ್ಕಾರ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ಕೊಟ್ಟಿದ್ದೆ. ಕಾಂಗ್ರೆಸ್ ಸರಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ, ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಮತದಾರರು ಅರಿಯಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಜ್ಯದಲ್ಲಿ ಇನ್ನೂ ಮೂರೂವರೆ ವರ್ಷ ಹಾಗೂ ಮುಂದಿನ ಐದು ವರ್ಷ ನಮ್ಮದೆ ಸರ್ಕಾರ ಇರುತ್ತದೆ. ತಿಗಳ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿದ್ದೆ ಕಾಂಗ್ರೆಸ್. ಹಾಗಾಗಿ ವದಂತಿಗಳಿಗೆ, ಆಸೆ ಅಮಿಷಗಳಿಗೆ ಬಳಿಯಾಗದೆ ಸಮುದಾಯ ಕಾಂಗ್ರೆಸ್ ಪಕ್ಷದ ಜೊತೆ ನಿಲ್ಲುವಂತೆ ಮನವಿ ಮಾಡಿದರು.

ತಾಲೂಕಿನಲ್ಲಿ ನೀರಾವರಿ ಮಾಡುವುದರ ಜೊತೆಗೆ ನಿಮ್ಮೆಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಯೋಗೇಶ್ವರ್ ಸರ್ವಜನಾಂಗದ ನಾಯಕನಾಗಿ ಗುರುತಿಸಿಕೊಂಡಿದ್ದು, ಇಂತಹ ವ್ಯಕ್ತಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸೌದದಲ್ಲಿ ಇದ್ದಾಗ ಮಾತ್ರ ತಾಲೂಕಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು