ಜೋಕರ್ ಪದಕ್ಕೆ ಎಚ್‌ಡಿಕೆ ಸೂಕ್ತ: ಚಲುವರಾಯಸ್ವಾಮಿ

| Published : Apr 09 2025, 12:32 AM IST

ಜೋಕರ್ ಪದಕ್ಕೆ ಎಚ್‌ಡಿಕೆ ಸೂಕ್ತ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿ ನನ್ನನ್ನು ಮಂತ್ರಿ ಮಾಡಿದ್ದೇನೆ ಎನ್ನುವುದಾದರೆ ನಾನು ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎನ್ನುವುದರಲ್ಲಿ ತಪ್ಪೇನಿದೆ. ಕುಮಾರಸ್ವಾಮಿ ಅವರನ್ನು ನಾಯಕರನ್ನಾಗಿ ಮಾಡಲು ನಾವು ಸಾಥ್ ಕೊಟ್ಟೆವೋ, ಇಲ್ಲವೋ ಎನ್ನುವುದನ್ನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜೋಕರ್ ಎಂಬ ಪದಕ್ಕೆ ನನಗಿಂತಲೂ ಎಚ್.ಡಿ.ಕುಮಾರಸ್ವಾಮಿಯವರೇ ಹೆಚ್ಚು ಸೂಕ್ತ. ಆಡಳಿತಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುವ ಅವರು ಜೋಕರ್ರಾ ಅಥವಾ ನಾನು ಜೋಕರ್ರಾ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.ರಮ್ಮಿ ಆಟದಲ್ಲಿ ಜೋಕರ್‌ನ್ನು ಯಾವುದಕ್ಕಾದರೂ ಸೇರಿಸಬಹುದು. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೇರಿಕೊಳ್ಳುವ ನಡೆಯನ್ನು ಕುಮಾರಸ್ವಾಮಿ ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಹಾಗಾಗಿ ಜೋಕರ್ ಪದ ನನಗಿಂತ ಅವರಿಗೆ ಹೆಚ್ಚು ಸೂಟ್ ಆಗುತ್ತದೆ ಎಂದು ಕುಟುಕಿದರು.ಕುಮಾರಸ್ವಾಮಿ ನನ್ನನ್ನು ಮಂತ್ರಿ ಮಾಡಿದ್ದೇನೆ ಎನ್ನುವುದಾದರೆ ನಾನು ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎನ್ನುವುದರಲ್ಲಿ ತಪ್ಪೇನಿದೆ. ಕುಮಾರಸ್ವಾಮಿ ಅವರನ್ನು ನಾಯಕರನ್ನಾಗಿ ಮಾಡಲು ನಾವು ಸಾಥ್ ಕೊಟ್ಟೆವೋ, ಇಲ್ಲವೋ ಎನ್ನುವುದನ್ನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲು ಹಾಕಿದರು.ಕುಮಾರಸ್ವಾಮಿಯವರ ಬಗ್ಗೆ ಮಾತನಾಡಿ ನಾಲಿಗೆ ಹೊಲಸು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಅವರಿಂದ ರಾಜಕಾರಣ ಕಲಿಯುವ ಅವಶ್ಯಕತೆಯೂ ನನಗಿಲ್ಲ. ಹಾಗಂತ ಕುಮಾರಸ್ವಾಮಿ ಕಂಡರೆ ನಾನು ಬೆಚ್ಚಿ ಓಡಿಹೋಗುವುದೂ ಇಲ್ಲ. ಮುಖಾಮುಖಿ ನಿಂತು ಮಾತನಾಡುವುದಕ್ಕೂ ಸಿದ್ಧನಿದ್ದೇನೆ ಎಂದು ನೇರವಾಗಿ ಹೇಳಿದರು.ಎಚ್‌ಡಿಕೆ ತಡರಾತ್ರಿಯವರೆಗೆ ನಿದ್ದೆ ಮಾಡದೆ ಎಲ್ಲಿಗೆ ಹೋಗುತ್ತಿದ್ದರು ಎನ್ನುವುದು ಅವರ ವೈಯಕ್ತಿಕ ಸಮಸ್ಯೆ. ಚಟಗಳ ಬಗ್ಗೆ ಅವರ ಆತ್ಮಸಾಕ್ಷಿಯನ್ನೇ ಕೇಳಿಕೊಳ್ಳಲಿ. ನನ್ನನ್ನು ಪದೇ ಪದೇ ಕೆಣಕಿದರೆ ಹೆದರಿ ಓಡಿಹೋಗುವವನಲ್ಲ. ಮುಖಾಮುಖಿ ಚರ್ಚೆಗೆ ತಯಾರಿದ್ದೇನೆ. ನನ್ನ ಚರಿತ್ರೆ ಅವರ ಚರಿತ್ರೆ ಸಾರ್ವಜನಿಕವಾಗಿ ಬಹಿರಂಗ ಚರ್ಚೆಯಾಗಲಿ ಎಂದು ಗುಡುಗಿದರು.ಈ ಸಮಯದಲ್ಲಿ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹಾಜರಿದ್ದರು.