ಮೋದಿ ಸಂಪುಟಕ್ಕೆ ಎಚ್‌ಡಿಕೆ: ನಾಗಮಾರಪಳ್ಳಿ ಹರ್ಷ

| Published : Jun 12 2024, 12:34 AM IST

ಸಾರಾಂಶ

ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಬೀದರ್: ನರೇಂದ್ರ ಮೋದಿ‌ ನೇತೃತ್ವದ 3.0 ಎನ್‌ಡಿಎ ಸರ್ಕಾರದ ಸಚಿವ ಸಂಪುಟದಲ್ಲಿ ಮಿತ್ರಪಕ್ಷ ಜೆಡಿಎಸ್‌ನಿಂದ ಮಾಜಿ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ‌ಕಲ್ಪಿಸಿರುವುದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ ಮೋದಿ ಅವರು ಹಿಂದಿನ ಎರಡು ಅವಧಿ ದೇಶದ ವಿಕಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈಗ‌ 3ನೇ ಅವಧಿಯು ಭಾರತವನ್ನು ಸರ್ವ ರೀತಿಯಿಂದಲೂ ಸಶಕ್ತ, ಸದೃಢಗೊಳಿಸಲಿದೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ, ರೈತಪರ ಆಡಳಿತ ನೀಡಿರುವ ಕುಮಾರಸ್ವಾಮಿ ಅವರಂಥ ನಾಯಕರು ಈ‌ ಸಲದ ಸಂಪುಟಕ್ಕೆ ‌ಸೇರಿರುವುದು ಅಭಿವೃದ್ಧಿಗೆ ಮತ್ತಷ್ಟು ವೇಗ ಕೊಡಲಿದೆ ಎಂದು‌ ನಾಗಮಾರಪಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರ 3.0.ಪದಗ್ರಹಣ ಸಮಾರಂಭಕ್ಕೆ ನನಗೆ ಆಹ್ವಾನ ಬಂದಿದ್ದು, ಇದರಲ್ಲಿ ಪಾಲ್ಗೊಂಡಿದ್ದಕ್ಕೆ ಅತೀವ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಇದ್ದರು.