ಎಟಿಎಂನಲ್ಲಿ ಬಿಟ್ಟು ಹೋಗಿದ್ದ ಹಣ ಹಿಂದಿರುಗಿಸಿದ ತೌಸಿಫ್

| Published : Jul 12 2024, 01:31 AM IST

ಸಾರಾಂಶ

ಹನೂರು ಎಟಿಎಂನಲ್ಲಿ ಹಣ ಬಿಟ್ಟು ಹೋಗಿದ್ದ ಗ್ರಾಹಕರಿಗೆ ಪಟ್ಟಣದ ಪೊಲೀಸರು ಹಿಂದಿರುಗಿಸುವಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಕಾವೇರಿ ಬ್ಯಾಂಕ್ ಎಟಿಎಂನಲ್ಲಿ ಜು.7 ರಂದು ತಾಲೂಕಿನ ಅಲುಗು ಮೂಲೆ ಗ್ರಾಮದ ಮಮತಾ ಎಂಬುವರು ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದು ಹಣ ಆಗಿರುವ ಬಗ್ಗೆ ತಿಳಿಯದೆ ಅಲ್ಲೇ ಬಿಟ್ಟು ಹೋಗಿದ್ದರು.

ಚಿಗತಾಪುರ ಗ್ರಾಮದ ಯುವಕ ತೌಸಿಫ್ ಕಾವೇರಿ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದಾಗ 5500 ರು. ಎಟಿಎಂನಲ್ಲಿ ಇರುವುದನ್ನು ಕಂಡು ಪಟ್ಟಣದ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರಿಗೆ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವಂತೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಎಟಿಎಂನಲ್ಲಿ ಹಣ ಬಿಟ್ಟು ಹೋಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ನಂತರ ನಿವಾಸಿಗಳು ಪೊಲೀಸ್ ಠಾಣೆಗೆ ಬ್ಯಾಂಕಿನ ಸೂಕ್ತ ದಾಖಲಾತಿ ನೀಡುವ ಮೂಲಕ ಹಣವನ್ನು ಗ್ರಾಮದ ಮಮತಾ ಎಂಬುವರು ಕಳೆದುಕೊಂಡಿದ್ದರು ಎಂಬುದನ್ನು ಪೊಲೀಸರು ಖಾತರಿ ಪಡಿಸಿಕೊಂಡು ಇನ್ಸ್‌ಪೆಕ್ಟರ್ ಶಶಿಕುಮಾರ್ ಗ್ರಾಹಕರಿಗೆ ಹಣ ಹಿಂದಿರುಗಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ನ ಎಟಿಎಂಗಳಿಗೆ ಹಣ ಡ್ರಾ ಮಾಡಲು ಬಂದಾಗ ಇತರೆ ವ್ಯಕ್ತಿಗಳು ಹಣ ಡ್ರಾ ಮಾಡಿ ಕೊಡುವ ಬಗ್ಗೆ ವಂಚಿಸಿರುವ ಅನೇಕ ಪ್ರಕರಣಗಳು ನಡೆದಿರುವಾಗ ಎಟಿಎಂನಲ್ಲಿ ಸಿಕ್ಕಂತಹ ಹಣವನ್ನು ತಂದು ಗ್ರಾಹಕರಿಗೆ ನೀಡಿರುವ ಯುವಕನ ಕಾರ್ಯ ಮೆಚ್ಚುವಂತದ್ದು, ಗ್ರಾಹಕರು ಸಹ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸುವಾಗ ಮತ್ತು ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ಎಚ್ಚರಿಕೆ ವಹಿಸಬೇಕು ಎಂದು ತಿಳಿ ಹೇಳಿದರು. ಈ ಸಂದರ್ಭದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.