ಸಾರಾಂಶ
ಕಡೂರು: ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಜಿಗುಪ್ಸೆಕೊಂಡು ಆತ್ಮಹತ್ಯೆ ಮಾಡಿ ಕೂಂಡಿರುವ ಘಟನೆ ಕಡೂರು ಪಟ್ಟಣದಲ್ಲಿ ನಡೆದಿದೆ. ತ್ಯಾಗರಾಜನಗರದಲ್ಲಿ ವಾಸವಾಗಿದ್ದ ಕಡೂರು ತಾಲೂಕಿನ ಲಕ್ಷ್ಮೀ ಪುರದ ಸೌಮ್ಯ (35) ಎಂಬ ಮಹಿಳೆ ಆತ್ಮಹತ್ಯೆಮಾಡಿಕೊಂಡವರು. ಈ ಕುರಿತು ಸೌಮ್ಯ ಅರವರ ತಾಯಿ ತುಳಸೀದೇವಿ ದೂರು ನೀಡಿದ್ದಾರೆ. ನನ್ನ ಮಗಳು ಸೌಮ್ಯಳಿಗೂ ವಿವಾಹವಾಗಿದ್ದು ಅವರ ಗಂಡ ಲೊಕೇಶ್ ಮೃತಪಟ್ಟಿದ್ದಾರೆ. ಸೌಮ್ಯಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮತ್ತು ಅವಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಅಂದಿನಿಂದ ಗಾರೆ ಕೆಲಸ ಮಾಡಿಕೊಂಡಿದ್ದು ಕಡೂರಿನ ತ್ಯಾಗರಾಜ ನಗರದ ಎಂ ಎಸ್ ಆರ್ ಸ್ಕೂಲ್ ಹಿಂಬಾಗ ಬಾಡಿಗೆ ಮನೆಕೊಂಡು ವಾಸವಾಗಿದ್ದರು. ಆದರೆ ಕಳೆದ ಶನಿವಾರ (ನ.4) ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಭುವನಾನಂದ ಎಂಬುವರು ಫೋನ್ ಮಾಡಿ ನಮ್ಮ ಮಗಳು ಸೌಮ್ಯ ನೇಣು ಹಾಕಿಕೊಂಡಿರುವುದಾಗಿ ತಿಳಿಸಿದರು. ನಾವು ಹೋಗಿ ಕೂಡಲೆ ಮಗಳನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ನನ್ನ ಮಗಳು ತನ್ನ ಚಿಕಿತ್ಸೆಗೆ ಮತ್ತು ಮಕ್ಕಳನ್ನು ಓದಿಸಲು ಸಾಲ ಮಾಡಿಕೊಂಡಿದ್ದು ಇದರಿಂದ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ. ಬೇರೆ ಯಾವುದೇ ಕಾರಣ ಇಲ್ಲ ಎಂದು ತಿಳಿಸಿದ್ದು, ಕಡೂರು ಪೋಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
;Resize=(128,128))
;Resize=(128,128))
;Resize=(128,128))