ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸ್ಪರ್ಧೆಗಳು ನಮ್ಮಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಆತ್ಮಸ್ಥೈರ್ಯವನ್ನು ಅಧಿಕಗೊಳಿಸುತ್ತದೆ ಎಂದು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ ತಿಳಿಸಿದರು.ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ವಿಭಾಗವು ಸೋಮವಾರ ಆಯೋಜಿಸಿದ್ದ ಬಿ.ಎ ಹಾಗೂ ಬಿ.ಕಾಂ ವಿದ್ಯಾರ್ಥಿನಿಯರಿಗೆ ಜಾಹೀರಾತಿನಲ್ಲಿ ಮಹಿಳೆಗೆ ಇರುವ ವಸ್ತ್ರ ಸಂಹಿತೆಯ ಸವಾಲುಗಳು ಕುರಿತ ಪ್ರಬಂಧ ಮಂಡನೆಯ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿನಿಯಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಇಂತಹ ವೇದಿಕೆಗಳು ಬಹಳ ಮುಖ್ಯ. ನಾವು ಹೆಚ್ಚು ಜ್ಞಾನವನ್ನು ಪಡೆಯಬೇಕಾದರೆ ಪುಸ್ತಕಗಳ ಅಧ್ಯಯನದ ಅವಶ್ಯಕತೆ ಇದೆ. ಹೀಗಾಗಿ, ವಿದ್ಯಾರ್ಥಿಗಳು ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡಾಗ ಅವರ ಜ್ಞಾನಭಂಡಾರ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು. ಬಹುಮಾನನಂತರ ಬಿಎ ಹಾಗೂ ಬಿ.ಕಾಂ ವಿಭಾಗದಿಂದ ಒಟ್ಟು 16 ವಿದ್ಯಾರ್ಥಿನಿಯರು ಪ್ರಬಂಧ ಮಂಡನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದಿವ್ಯಾ (ಪ್ರಥಮ), ಎನ್. ನಿತ್ಯಾ (ದ್ವಿತೀಯ), ರೇವತಿ (ತೃತೀಯ), ಸರಸ್ವತಿ ಮತ್ತು ಕವನ (ಸಮಾಧಾನಕರ) ಬಹುಮಾನ ಪಡೆದರು. ಈ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ನಟರಾಜ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಕಾಂತ್ ಹಾಗೂ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಿ.ಎನ್. ಸಂತೋಷ್ ಪಟೇಲ್ ಅವರು ಕಾರ್ಯ ನಿರ್ವಹಿಸಿದರು.ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಗ್ರಂಥಪಾಲಕಿ ಶುಭಾ ಅರಸ್ ಇದ್ದರು.