ಸಾರಾಂಶ
ಶ್ರೀನಿವಾಸಪುರ ತಾಲೂಕಿನ ಪುಲಗೂರಕೋಟೆ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ8 ನೇ ತರಗತಿ ವಿದ್ಯಾಗಳು ಇದ್ದು, ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಾಗ ಇದನ್ನು ವಿರೋಧಿಸಿದ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್ ಮಾಲಾಧಾರಿ ವಿದ್ಯಾರ್ಥಿಗಳನ್ನು ನಿದಿಸಿದ ಆರೋಪ.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆ ಶಿಕ್ಷಕ ಅವಾಚ್ಯ ಪದ ಬಳಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಪುಲಗೂರಕೋಟೆ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ತಾಲೂಕಿನ ಪುಲಗೂರಕೋಟೆ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ8 ನೇ ತರಗತಿ ವಿದ್ಯಾಗಳು ಇದ್ದು, ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಾಗ ಇದನ್ನು ವಿರೋಧಿಸಿದ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್ ಮಾಲಾಧಾರಿ ವಿದ್ಯಾರ್ಥಿಗಳನ್ನು ಕರೆದು ನನ್ನ ಅನುಮತಿ ಪಡೆಯದೇ ಅಯ್ಯಪ್ಪ ಮಾಲೆ ಧರಿಸಿದ್ದೀರಾ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.ಶಿಕ್ಷಕರು ನಿಂದಿಸಿದ್ದನ್ನು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೋಷಕರು ಹಾಗೂ ಗ್ರಾಮಸ್ಥರು ಶಾಲೆ ಬಳಿ ತೆರಳಿ ಮುಖ್ಯ ಶಿಕ್ಷಕ ರವಿಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಶಿಕ್ಷಕನ ವರ್ತನೆ ವಿರುದ್ಧ ದೂರುಪೋಷಕರು ಹೇಳುವಂತೆ ನಾವು ಪ್ರತಿ ವರ್ಷ ಅಯ್ಯಪ್ಪ ದರ್ಶನಕ್ಕೆ ಶಬರಿಮಲೆಗೆ ಹೋಗಲು ಅಯ್ಯಪ್ಪ ಮಾಲೆ ಧರಿಸುತ್ತೆವೆ ಮಕ್ಕಳಿಗೆ ಮಾಲೆ ಹಾಕಿಸುತ್ತೇವೆ ಮಕ್ಕಳು ಎಂದಿನಂತೆ ಶಾಲೆಗೆ ಹೋಗುತ್ತಾರೆ. ಆದರೂ ಸಹ ಶಾಲೆಯ ಮುಖ್ಯ ಶಿಕ್ಷಕ ನಮ್ಮ ಮಕ್ಕಳ ಮೇಲೆ ಧೌರ್ಜನ್ಯವಾಗಿ ವರ್ತಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಮುಖ್ಯ ಶಿಕ್ಷಕ ರವಿಕುಮಾರ್ ಅವರದು ಉದ್ಧಟತನದ ಧೋರಣೆ ಅವರ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶಿಕ್ಷಣ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಿಕ್ಷಣ ಇಲಾಖೆ ಸಿಆರ್‌ಪಿ ಶಿವರಾಘವರೆಡ್ಡಿ ಆಗಮಿಸಿ ಘಟನೆ ವಿವರ ಪಡೆದು ಮುಖ್ಯ ಶಿಕ್ಷಕ ರವಿಕುಮಾರ್ ನಡೆದ ಘಟನೆಗೆ ಕ್ಷಮಾಪಣೆ ಹೇಳುವಂತೆ ಸೂಚಿಸಿ ಘಟನೆಗೆ ಸುಖಾಂತ್ಯ ಹಾಡಿದರು.ಶಿಕ್ಷಕ ಹೇಳುವುದೇನು: ಅಯ್ಯಪ್ಪ ಮಾಲಧಾರಿ ವಿದ್ಯಾರ್ಥಿಗಳನ್ನು ನಾನು ಅವಾಚ್ಯ ಪದ ಬಳಿಸಿ ನಿಂದಿಸಿಲ್ಲ. ಇಬ್ಬರು ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಥಿಗಳಾಗಿದ್ದು ಚನ್ನಾಗಿ ಓದುತ್ತಿದ್ದಾರೆ, ಮಾಲೆ ಧರಿಸಿದಾಗ ಕೆಲವೊಂದು ನಿಯಮಾವಳಿಗಳನ್ನು ಪಾಲಿಸುವ ಅಗತ್ಯ ಇರುತ್ತದೆ. ಇದರಿಂದ ಓದಿನ ಮೇಲೆ ಒತ್ತಡ ಬಿಳುತ್ತದೆ ಈ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಬುದ್ದಿ ಹೇಳಿದ್ದೇನೆ ಹೊರತು ಬೇರೆ ಇನ್ಯಾವುದೆ ಉದ್ದೇಶ ಇಲ್ಲ ಎಂದು ಮುಖ್ಯ ಶಿಕ್ಷಕ ರವಿಕುಮಾರ್ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಯ್ಯ ಅವರು ಘಟನೆ ಕುರಿತು ಮುಖ್ಯ ಶಿಕ್ಷಕ ರವಿಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))