ವಿಶ್ವಾಸಭರಿತ ಪ್ರಾರ್ಥನೆಯಿಂದ ರೋಗವಾಸಿ: ಡಾ. ಲಾರೆನ್ಸ್ ಮುಕ್ಕುಝಿ

| Published : Jan 27 2024, 01:21 AM IST

ವಿಶ್ವಾಸಭರಿತ ಪ್ರಾರ್ಥನೆಯಿಂದ ರೋಗವಾಸಿ: ಡಾ. ಲಾರೆನ್ಸ್ ಮುಕ್ಕುಝಿ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ತೂರು ‘ಸಾಂತ್‌ಮಾರಿ’ ಹೆಸರಾಂತ ಜಾತ್ರೆ ‘ಕಾರ್ಲದ ದೇವೆರ್’ ಎಂದೇ ಈ ಪುಣ್ಯಸ್ಥಳ ಸುಪ್ರಸಿದ್ಧವಾಗಿದೆ. ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಸಲುವಾಗಿ ‘ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ’ ಎಂಬ ಹಬ್ಬದ ಪ್ರಮುಖ ದಿನದ ವಿಷಯವನ್ನು ಹಾಗೂ ಮಹತ್ವವನ್ನು ಧ್ಯಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕದ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಆರನೆ ಹಾಗೂ ಅಂತಿಮ ದಿನದ ಹಬ್ಬದ ದೈವಾರಾಧನೆಯ ಭಕ್ತಿ ಕಾರ್ಯಗಳು ಮತ್ತು ವಿಧಿ-ಆಚರಣೆಗಳು ವಿಜೃಂಭಣೆಯಿಂದ ನೆರವೇರಿದವು.

ಅತ್ತೂರು ‘ಸಾಂತ್‌ಮಾರಿ’ ಹೆಸರಾಂತ ಜಾತ್ರೆ ‘ಕಾರ್ಲದ ದೇವೆರ್’ ಎಂದೇ ಈ ಪುಣ್ಯಸ್ಥಳ ಸುಪ್ರಸಿದ್ಧವಾಗಿದೆ. ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಸಲುವಾಗಿ ‘ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ’ ಎಂಬ ಹಬ್ಬದ ಪ್ರಮುಖ ದಿನದ ವಿಷಯವನ್ನು ಹಾಗೂ ಮಹತ್ವವನ್ನು ಧ್ಯಾನಿಸಲಾಯಿತು.

ಹಬ್ಬದ ಆರನೇ ದಿನದಂದು ಜನಸಾಗರ ಹರಿದು ಬಂತು. ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರು. ಸಂತರ ಪುಣ್ಯ ಪ್ರತಿಮೆಯ ಮೂರ್ತಿ, ಪವಾಡ ಜಲ ಪುಷ್ಕರಣಿ, ಸಂತರ ಭಾವೈಕ್ಯ ಪವಿತ್ರ ಅವಶೇಷವನ್ನು ಕಂಡರಿತು ಪಾವನಗೊಂಡರು ಹಾಗೂ ಪೂಜೆಯ ಹರಕೆಯನ್ನು ನೆರವೇರಿಸಿ ತಮ್ಮ ದೈವಕಾರ್ಯಗಳನ್ನು ನೆರವೇರಿಸಿದರು. ಪಾಲಕ ಸಂತ ಲಾರೆನ್ಸರ ಪ್ರತಿಷ್ಠಾಪಿಸಲಾದ ಪವಾಡ ಮೂರ್ತಿಯ ಬಳಿ ನಿರಂತರ ಜನಸಾಗರ ಭಕ್ತಿಯಿಂದ ಹರಿದು ಬಂದು, ಪ್ರಾರ್ಥಿಸಿ ದೈವಿಕ ಆಶೀರ್ವಾದವನ್ನು ಪಡೆದರು. ವಿವಿಧ ಜನರು ತಮ್ಮ ಹರಕೆ, ಪ್ರಾರ್ಥನೆ ಸಲ್ಲಿಸಿದರು. ಗಣರಾಜ್ಯೋವದ ದಿನದಂದು ಸಾವಿರಾರು ಭಕ್ತಜನರು, ಮಕ್ಕಳು ಹಾಗೂ ವ್ಯಾಧಿಷ್ಟರು ತಮ್ಮ ವಿವಿಧ ಕೋರಿಗಳನ್ನು ದಿನವಿಡೀ ಸಲ್ಲಿಸಿದರು.

ವ್ಯಾಧಿಷ್ಟರು ಹಾೂ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ತೈಲ ಅಭ್ಯಂಗನ ಹಾಗೂ ತೀರ್ಥಪ್ರೋಕ್ಷಣ ಮಾಡಲಾಯಿತು. ಪುಣ್ಯಕೇತ್ರದ ಪ್ರಮುಖ ಸ್ಥಳದಲ್ಲಿ ಪ್ರೋಕ್ಷ ತೀರ್ಥ ಹಾಗೂ ಪುಷ್ಪ ತೀರ್ಥವನ್ನು ಜನಸಾಗರಕ್ಕೆ ನೀಡಲಾಯಿತು.

ವಾರ್ಷಿಕ ಮಹೋತ್ಸವದದ ಪ್ರಮುಖ ಸಾಂಭ್ರಮಿಕ ಆಡಂಬರದ ಗಾಯನ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವಂ.ಲಾರೆನ್ಸ್ ಮುಕ್ಕುಝಿ ನೆರವೇರಿಸಿ ವಿಶ್ವಾಸದ ಪ್ರಾರ್ಥನೆಯ ಕುರಿತಾಗಿ ಬೋಧಿಸಿದರು. ವಿಶ್ವಾಸದ ಪ್ರಾರ್ಥನೆಯು ರೋಗಿಗಳನ್ನು ಸೌಖ್ಯಗ್ರಸ್ಥರನ್ನಾಗಿ ಮಾಡುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಅತ್ತೂರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ದೈವ ಅನುಗ್ರಹ ಪಡೆದರು. ದಿನದ ಇತರ ಬಲಿಪೂಜೆಗಳನ್ನು ವಂ. ಅಶ್ವಿನ್ ಕುಂದಾಪುರ, ಡಾ.ಲಾರೆನ್ಸ್ ಮುಕ್ಕುಝಿ, ಬೆಳ್ತಂಗಡಿ ಧರ್ಮಕ್ಷೇತ್ರ, ವಂ.

ಸುನಿಲ್ ಪಿಂಟೊ, ವಂ. ಪಿಯುಸ್ ಡಿಸೋಜ, ಶಿವಮೊಗ್ಗ, ವಂ. ಅರುಣ್ ಲೋಬೊ, ಮಂಗಳೂರು ಅರ್ಪಿಸಿದರು. ಹಲವಾರು ಯಾತ್ರಾರ್ಥಿಗಳು ಪುಣ್ಯಕ್ಷೇತ್ರದಲ್ಲಿ ತಾವು ಹಾಕಿದ ಬೇಡಿಕೆಗಳನ್ನು ಈಡೇರಿಸಲು ಪಾದಯಾತ್ರೆಯಲ್ಲಿ ಧಾವಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ಸಂಜೆ ೫ ಗಂಟೆಗೆ ನೆರವೇರಿಸಿ ಮಹೋತ್ಸವದ ಅಂತಿಮ ದಿನದ ಬಲಿಪೂಜೆಗಳನ್ನು, ಧಾರ್ಮಿಕ ಭಕ್ತಿ-ಆಚರಣೆಗಳನ್ನು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು. ರಾತ್ರಿ ೮ ಗಂಟೆಗೆ ಪುಣ್ಯಕ್ಷೇತ್ರದ ದ್ವಜವನ್ನು ಅತ್ಯಂತ ಗೌರವಯುತವಾಗಿ ಪುಣ್ಯಕ್ಷೇತ್ರದ ರೆಕ್ಟರ್ ಅ.ವಂ. ಆಲ್ಬನ್ ಡಿ’ಸೋಜರವರ ಅಧೀನತೆಯಲ್ಲಿ ಇಳಿಸಲಾಯಿತು.

ಪವಾಡ ಪುರುಷ ಸಂತ ಲೊರೆನ್ಸರ ಪ್ರತಿಮೆಯನ್ನು ಹಾಗೂ ಅವಶೇಷ ಸ್ಮಾರಕವನ್ನು ಭಕ್ತಿಯುತವಾಗಿ ಪ್ರಾರ್ಥನೆ ಗೀತೆ ಸ್ತುತಿಸ್ತೋತ್ರಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಹಾಗೂ ಅದರ ಮೂಲ ಸ್ಥಾನದಲ್ಲಿ ಮರಳಿ ಪ್ರತಿಷ್ಟಾಪಿಸಲಾಯಿತು. ಈ ಮೂಲಕ ಈ ಸಾಲಿನ ವಾರ್ಷಿಕ ಹಬ್ಬಕ್ಕೆ ತೆರೆಯೆಳೆಯಲಾಯಿತು.