ನಗರದಲ್ಲಿ ವಿದ್ಯಾರ್ಥಿನಿಯರ ಆರೋಗ್ಯ, ಸ್ವಚ್ಛತಾ ಜಾಗೃತಿ

| Published : Jan 18 2024, 02:04 AM IST

ಸಾರಾಂಶ

ದಾವಣಗೆರೆಯ ಮಹಿಳಾ ಸೇವಾ ಸಮಾಜ ಮಹಿಳಾ ಪದವಿ ಕಾಲೇಜು ಮತ್ತು ಹೈಸ್ಕೂಲ್‌ನಲ್ಲಿ ಬಾಲಕಿಯರಿಗೆ 360 ಪ್ಯಾಡ್ / ನಾಪ್ಕಿನ್‌ಗಳನ್ನು ವಿತರಣೆ ಮಾಡಿ ಸ್ವಚ್ಛತೆಯ ಅರಿವು ಮೂಡಿಸಲಾಯಿತು.

- ಮಹಿಳಾ ಸಮಾಜ ಕಾಲೇಜು ಬಾಲಕಿಯರಿಗೆ ನ್ಯಾಪ್ಕಿನ್ ವಿತರಣೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಂದಿಗೂ ಬಾಲಕಿಯರು ಮತ್ತು ಮಹಿಳೆಯರು ಮುಟ್ಟಿನ ವಿಷಯದಲ್ಲಿ ಸಾಕಷ್ಟು ತಾರತಮ್ಯಗಳನ್ನು ಅನುಭವಿಸಿಕೊಂಡು ಬರುತ್ತಾರೆ. ಮುಖ್ಯವಾಗಿ ಮುಟ್ಟಿನ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದುದನ್ನು ನಿಷೇದಿಸಲಾಗಿದೆ ಹಾಗೂ ಮುಟ್ಟಿನ ಸಮಯದಲ್ಲಿ ಪ್ರತ್ಯೇಕವಾಗಿ ಇರಿಸುವುದು ಇಂದಿಗೂ ಮುಂದವರಿದಿದೆ ಇದೊಂದು ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿದೆ ಎಂದು ಅದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟಿನ ಜನರಲ್ ಮ್ಯಾನೇಜರ್ ಡಾ.ಮುಕೇಶ್ ಮಹೋಡೆ ತಿಳಿಸಿದರು.ನಗರದ ಮಹಿಳಾ ಸೇವಾ ಸಮಾಜ ಮಹಿಳಾ ಪದವಿ ಕಾಲೇಜು ಮತ್ತು ಹೈಸ್ಕೂಲ್‌ನಲ್ಲಿ ಮುಂಬೈನ ಅದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್, ಅಕ್ಷನ್ ಇನಿಷೇಟಿವ್ ಫಾರ್ ಡೆವೆಲಫ್ಮೆಂಟ್ (ಎಐಡಿ) ಸಂಸ್ಥೆಗಳ ಸಂಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಬಾಲಕಿಯರಿಗೆ 360 ಪ್ಯಾಡ್/ನಾಪ್ಕಿನ್‌ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಬಾಲಕಿಯರು ಮುಟ್ಟಿನ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸ್ವಚ್ಛತೆ ನಿರ್ವಹಿಸಬೇಕು ಮುಖ್ಯವಾಗಿ ಪ್ಯಾಡ್‌ಗಳನ್ನು ಬಳಕೆ ಮಾಡುವುದು ಮತ್ತು ಬಳಸಿ ಪ್ಯಾಡ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.

ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಹಾವೇರಿ ಈ ನಾಲ್ಕು ಜಿಲ್ಲೆಯ ಸಾವಿರ ಐದುನೂರು ಬಾಲಕಿಯರಿಗೆ 1500 ಪ್ಯಾಡಗಳನ್ನು ವಿತರಣೆ ಮಾಡುವುದರ ಮೂಲಕ ಮುಟ್ಟಿನ ಅರೋಗ್ಯ ಮತ್ತು ಸ್ವಚ್ಚತೆ ನಿರ್ವಹಣೆ ಬಗ್ಗೆ ಸಂಕ್ಷಿಪ್ತವಾದ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರು, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಬಾಲಕಿಯರು ಭಾಗವಹಿಸಿದ್ದರು.