ಸಾರಾಂಶ
ಮಳೆ ನೀರು ಸಂರಕ್ಷಣೆ ಕಾರ್ಯಾಗಾರಕನ್ನಡಪ್ರಭ ವಾರ್ತೆ ಆಲೂರು
ಮಳೆ ನೀರನ್ನು ಸಂಗ್ರಹಿಸಿ ಬಳಸುವುದರಿಂದ ಆರೋಗ್ಯವಂತರಾಗಿ ಬದುಕಲು ಸಹಕಾರಿಯಾಗುತ್ತದೆ. ಸಹಸ್ರಾರು ವರ್ಷಗಳಿಂದಲೂ ಆಯುರ್ವೇದ ವಿಜ್ಞಾನದಲ್ಲಿ ಮಳೆ ನೀರನ್ನು ಬಳಸಿರುವ ಉಲ್ಲೇಖವಿದೆ ಎಂದು ಹಾಸನ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಮತ್ತು ಆಸ್ಪತ್ರೆ ವೈದ್ಯರಾದ ಡಾ. ಗುರುಬಸವರಾಜ ಯಲಗಚ್ಚಿನ ತಿಳಿಸಿದರು.ಪಟ್ಟಣದ ಬಳಿ ಇರುವ ಪುಣ್ಯಭೂಮಿ ಸಂಸ್ಥೆಯಲ್ಲಿ ಹಾಸನದ ಹೌಸ್ ಆಫ್ ಭಾರತ್ ಸಂಸ್ಥೆಯೊಂದಿಗೆ ಏರ್ಪಡಿಸಲಾಗಿದ್ದ ಮಳೆ ನೀರು ಸಂರಕ್ಷಣೆ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಪೂರ್ವಜರ ಕಾರ್ಯವೈಖರಿ ಮರೆತು ಆದುನಿಕ ಹಾಗೂ ಪಾಶ್ಚಿಮಾತ್ಯ ಶೈಲಿ ಜೀವನದತ್ತ ಸಾಗುತ್ತಿರುವುದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.
ಮಳೆ ನೀರನ್ನು ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ದಾರಾ ಎಂದರೆ ಮಳೆನೀರು, ಕಾರ ಎಂದರೆ ಅನಿಕಲ್ಲು, ತುಷಾರ ಎಂದರೆ ಮಂಜಿನಹನಿ ಮತ್ತು ಹೇಮ ಎಂದರೆ ತಂಪಾದ ಪ್ರದೇಶಗಳಲ್ಲಿ ಅತಿಯಾದ ಮಂಜುಹನಿ ನೀರು. ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದಂತಹ ಮಳೆ ನೀರು ಸರೋವರ, ನದಿ, ಜರಿ ಇನ್ನಿತರ ಮೂಲಗಲಲ್ಲಿ ಹರಿವ ನೀರನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಲಸಲಾಗುವುದರಿಂದ ಆರೋಗ್ಯವಂತರಾಗಿದ್ದಾರೆ.ಕಾರ್ಖಾನೆಗಳು ಉಗುಳುವ ಹೊಗೆ ಭೂಮಿಯಿಂದ ಸುಮಾರು ೪-೫ ಕಿ.ಮೀ. ಎತ್ತರದವರೆಗೆ ವಿಷಕಾರಿಕ ಮಲಿನತೆ ಶೇಖರಣೆಯಾಗಿರುತ್ತದೆ. ಸುಮಾರು ಐದಾರು ವರ್ಷದ ಮಗು ಅಂತಹ ವಾತಾವರಣದಲ್ಲಿ ಬದುಕಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಸಂಗ್ರಹಿಸಿದ ಮಳೆ ನೀರನ್ನು ಕನಿಷ್ಠ ಒಂದು ತಿಂಗಳು ನಂತರ ಬಳಸಬೇಕು.
ದಿನದ ವಾತಾವರಣ, ಆರೋಗ್ಯ ಮತ್ತು ತಾವು ಮಾಡುವ ಕೆಲಸವನ್ನರಿತು, ಬೆಳಗಿನ ಏಳು ಗಂಟೆಯಿಂದ ಸಂಜೆ ಏಳು ಗಂಟೆಯೊಳಗೆ ಗಂಟೆಗೊಮ್ಮೆ ಸಾಧ್ಯವಾದಷ್ಟು ನೀರು ಕುಡಿಯಬೇಕು. ನೀರು ಕುಡಿಯುವುದು ಕಡಿಮೆಯಾದರೆ ತಲೆಯಲ್ಲಿ ಹೊಟ್ಟು, ಚರ್ಮದಲ್ಲಿ ಮೊಡವೆ, ಸ್ತ್ರೀಯರಲ್ಲಿ ಮಾಸಿಕ ತೊಂದರೆ, ಮಲಬದ್ಧತೆ ಉಂಟಾಗುತ್ತದೆ. ಕುಡಿಯುವ ನೀರಿನಲ್ಲಿ ಒಣಗಿದ ನುಗ್ಗೆ ಬೀಜಗಳನ್ನು ಮುಳುಗಿಸಿ ೧೦ ಗಂಟೆ ನಂತರ ಬಳಸಿದರೆ ಹೃದಯ ರೋಗವನ್ನು ತಡೆಯಬಹುದು.ಪುಣ್ಯಭೂಮಿ ಸಂಸ್ಥಾಪಕರು ಹಾಗೂ ನಿದೇಶಕರಾದ ಡಾ. ವಿಜಯ ಅಂಗಡಿಯವರು ಮಾತನಾಡಿ, ಶಿಬಿರದಲ್ಲಿ ಮಧ್ಯಾಹ್ನದ ಭೋಜನಕ್ಕೆ ಎಣ್ಣೆಯನ್ನು ಬಳಸದೆ ಮಳೆ ನೀರು ಬಳಸಿ ಹತ್ತಾರು ತರಹದ ಆಹಾರ ತಯಾರಿಸಲಾಗಿದೆ ಎಂದರು.ಹೌಸ್ ಆಫ್ ಭಾರತ್ ಮುಖ್ಯಸ್ಥರಾದ ಕಿರಣ್ ಕುಮಾರ್‌ರವರು, ತಮ್ಮ ದುಡಿಮೆಯಲ್ಲಿ ಶೇ.೧೦ರಷ್ಟು ಹಣವನ್ನು ಸಸ್ಯ ಸಂರಕ್ಷಣೆಗೆ ಬಳಸುತ್ತಿದ್ದೇವೆ. ಭೂಮಿಯನ್ನು ಬಂಜರು ಬಿಡದೆ ಸಸಿಗಳನ್ನು ಬೆಳೆಸಬೇಕು ಎಂದು, ರೈತರಿಗೆ ತೇಗದ ಸಸಿಗಳನ್ನು ಉಚಿತವಾಗಿ ವಿತರಿಸಿದರು.
ಪುಣ್ಯಭೂಮಿ ಸಂಸ್ಥೆ ಗೌರವಾಧ್ಯಕ್ಷ ಗಿಡ್ಡೇಗೌಡ, ಮಾಲ್ತೇಶ್ ಮಾತನಾಡಿದರು. ದಯಾನಂದ್, ಸಿದ್ದಲಿಂಗೇಶ್ವರ, ಕುಮಾರಸ್ವಾಮಿ ಧನಂಜಯ, ಮಮತ ಸೋಮಶೇಖರ್, ಚಕ್ರಪಾಣಿಗೌಡ, ಕವಿತ, ಗಂಗಮ್ಮ ಭಾಗವಹಿಸಿದ್ದರು.