ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಹಾಗೂ ಮೆಡಿಲ್ಯಾಬ್ ಇಂಡಿಯಾ ಫಾರ್ಮಾ ಬೆಂಗಳೂರು ಸಹಯೋಗದಲ್ಲಿ ನಗರದ ರಥಬೀದಿಯ ಹೂವಿನ ಮಾರುಕಟ್ಟೆ ರಸ್ತೆಯಲ್ಲಿರುವ ಲಕ್ಷ್ಮೀ ಕ್ಲಿನಿಕ್‌ನಲ್ಲಿ ಜ.22ರಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣೆ ಉಚಿತ ಶಿಬಿರ

ಕನ್ನಡಪ್ರಭ ವಾರ್ತೆ ಮಂಗಳೂರು

ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಹಾಗೂ ಮೆಡಿಲ್ಯಾಬ್ ಇಂಡಿಯಾ ಫಾರ್ಮಾ ಬೆಂಗಳೂರು ಸಹಯೋಗದಲ್ಲಿ ನಗರದ ರಥಬೀದಿಯ ಹೂವಿನ ಮಾರುಕಟ್ಟೆ ರಸ್ತೆಯಲ್ಲಿರುವ ಲಕ್ಷ್ಮೀ ಕ್ಲಿನಿಕ್‌ನಲ್ಲಿ ಜ.22ರಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣೆ ಉಚಿತ ಶಿಬಿರ ನಡೆಯಲಿದೆ.ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯುರ್ವೇದ ತಜ್ಞ ವೈದ್ಯೆ ಡಾ. ಜ್ಯೋತಿ ಕೆ. ನೇತೃತ್ವದ ತಂಡದಿಂದ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಾಸಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ಚಿಕಿತ್ಸಾ ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.

ವೈದ್ಯೆ ಡಾ. ಜ್ಯೋತಿ ಕೆ. ಮಾತನಾಡಿ, ಮೂಳೆ ಸವಕಳಿ ತಡೆಗಟ್ಟಿದರೆ ದೀರ್ಘ ಕಾಲದ ಮಂಡಿ ನೋವು, ಬೆನ್ನು ನೋವು ಸೇರಿದಂತೆ ಹಲವು ರೀತಿಯ ಮೂಳೆ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಮೂಳೆ ಸವಕಳಿ ಹಾಗೂ ಮೂಳೆ ಟೊಳ್ಳಾಗುವಿಕೆಯನ್ನು ಪತ್ತೆ ಹಚ್ಚಿ ದೀರ್ಘಕಾಲದ ಅಸ್ವಸ್ಥತೆಯನ್ನು ನಿವಾರಿಸುವುದು ಅಗತ್ಯ. ಇದಕ್ಕೆ ಸಂಬಂಧಿಸಿದ ತಪಾಸಣೆ ಮತ್ತು ಮಾಹಿತಿಯನ್ನು ಒದಗಿಸಲು ಶಿಬಿರ ಏರ್ಪಡಿಸಲಾಗಿದೆ ಎಂದರು.

ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಮಾಜಿ ಅಧ್ಯಕ್ಷ ಸಂತೋಷ್ ಶೇಟ್, ರಾಜೇಶ್ ಶೆಟ್ಟಿ ಇದ್ದರು.