ಇಲ್ಲಿನ ಕೋತಲ್ಕಟ್ಟೆಯಲ್ಲಿರುವ ಡಾ.ಕೆ.ಎಸ್.ಭಟ್ಸ್ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ನಲ್ಲಿ ''''ಐ ನೀಡ್ಸ್'''' ಸಂಸ್ಥೆ ಹಾಗೂ ದೂತಪಾಪೆಶ್ವರ ಲಿಮಿಟೆಡ್ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ, ಉಚಿತ ನೇತ್ರ ತಪಾಸಣಾ, ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ ಜರಗಿತು. ಶಿಬಿರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.

ಕಾಪು : ಇಲ್ಲಿನ ಕೋತಲ್ಕಟ್ಟೆಯಲ್ಲಿರುವ ಡಾ.ಕೆ.ಎಸ್.ಭಟ್ಸ್ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ನಲ್ಲಿ ''''''''''''''''ಐ ನೀಡ್ಸ್'''''''''''''''' ಸಂಸ್ಥೆ ಹಾಗೂ ದೂತಪಾಪೆಶ್ವರ ಲಿಮಿಟೆಡ್ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ, ಉಚಿತ ನೇತ್ರ ತಪಾಸಣಾ, ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ ಜರಗಿತು. ಶಿಬಿರವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಡಾ. ನಾಗಾನಂದ ಭಟ್ ಕಾಪು ಹಾಗೂ ಸಮಾಜ ಸೇವಕ ಅರ್ಜುನ್ ಭಂಡಾರ್ಕರ್ ಬಂಟ್ವಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 100ಕ್ಕೂ ಅಧಿಕ ಸಾರ್ವಜನಿಕರು ಈ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಹಿರಿಯರಾದ ಗೋಪಾಲ್ ಕೃಷ್ಣ ನಾಯಕ್ ಹರಿಖಂಡಿಗೆ, ಲಕ್ಷ್ಮೀoದ್ರ ಭಟ್ ಕಾಪು, ಮಾಜಿ ಶಾಸಕರಾದ ಲಾಲಾಜಿ ಅರ್. ಮೆಂಡನ್, ದಂಡತೀರ್ಥ ಪ್ರತಿಷ್ಟಾನದ ಮುಖ್ಯಸ್ಥ ಸೀತಾರಾಂ ಭಟ್, ಕಾಪು ಲಕ್ಷ್ಮೀ ಜನಾರ್ಧನ ದೇವಳದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಕಾಪು ಶ್ರೀ ವೆಂಕಟರಮಣ ಹಾಗೂ ಹಳೆ ಮಾರಿಯಮ್ಮ ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್ ದಾಸ್ ಶೆಣೈ, ಕಾಪು ಹೊಸ ಮಾರಿಯಮ್ಮ ದೇವಳದ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ್ ಶೆಟ್ಟಿ, ಕೆಎಂಎಫ್‌ ನಿರ್ದೇಶಕ ದಿವಾಕರ್ ಶೆಟ್ಟಿ, ಕಾಪು ಪುರಸಭಾ ಕೋತಲ್ಕಟ್ಟೆ ವಾರ್ಡ್ ಸದಸ್ಯ ಸುರೇಶ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ್ ಪಾಲನ್, ಕೋತಾಲ್ಕಟ್ಟೆ ಬಬ್ಬುಸ್ವಾಮಿ ದೈವಸ್ಥಾನ ಮುಖ್ಯಸ್ಥ ಶೀನ, ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಸತೀಶ್ ಕುಂದರ್, ಐ ನೀಡ್ಸ್ ಆಪ್ಟಿಕಲ್ ಸಂಸ್ಥೆ ಮುಖ್ಯಸ್ಥ ಗಜಾನನ ನಾಯಕ್ ಮತ್ತು ಸಹೋದರರು, ದೂತ ಪಾಪೆಶ್ವರ ಸಂಸ್ಥೆಯ ನಾಗೇಶ್ ಶೆಣೈ, ಸುಧೀಂದ್ರ ಆಯುರ್ ಕ್ಲಿನಿಕಿನ ಮುಖ್ಯ ಚಿಕಿತ್ಸಕರಾದ ಡಾ.ಸದಾನಂದ ಎಲ್. ಭಟ್, ಡಾ.ಸುಷ್ಮಾ ಎಸ್. ಭಟ್ ಮತ್ತಿತರರಿದ್ದರು.