ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ''ನವೋನ್ಮೇಶ'' - ರಾಜ್ಯ ಮಟ್ಟದ ವಿಜ್ಞಾನ, ವಾಣಿಜ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವ ನಡೆಯಿತು.
ಕುಂದಾಪುರ : ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ''''ನವೋನ್ಮೇಶ'''' - ರಾಜ್ಯ ಮಟ್ಟದ ವಿಜ್ಞಾನ, ವಾಣಿಜ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವ ನಡೆಯಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಟ ವಜ್ರಂಗ್ ಶೆಟ್ಟಿ ಅವರು ಭಾಗವಹಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಕೋರಿದರು.''''ನವೋನ್ಮೇಶ'''' ಫೆಸ್ಟ್ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಂಗಳೂರಿನ ಕೆನರಾ ವಿಕಾಸ್ ಪಿಯು ಕಾಲೇಜಿನ ತಂಡವು ಸಮಗ್ರ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿತು. ಉಡುಪಿಯ ಎಂಜಿಎಂ ಪಿಯು ಕಾಲೇಜಿನ ತಂಡವು ಪ್ರಥಮ ರನ್ನರ್ ಅಪ್ ಹಾಗೂ ಕುಂದಾಪುರದ ಶ್ರೀ ವೆಂಕಟರಮಣ ಪಿಯು ಕಾಲೇಜ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾದವು.ಅಧ್ಯಕ್ಷತೆಯನ್ನು ಐಎಂಜೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಎಂಐಟಿಕೆ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗ್ಡೆ, ಎಂಸಿಎನ್ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ಉಪಸ್ಥಿತರಿದ್ದರು.
ಐಎಂಜೆಐಎಸ್ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ನವೋನ್ಮೇಶ್ 2026ರ ವರದಿ ವಾಚಿಸಿ ಧನ್ಯವಾದ ಸಮರ್ಪಿಸಿದರು ಹಾಗೂ ಐಎಂಜೆಸಿಎಹೆಚ್ಎಸ್ ಪ್ರಾಂಶುಪಾಲೆ ಪ್ರೊ. ಹೇಮಲತಾ ಸ್ವಾಗತಿಸಿದರು. ಎಮ್ ಸಿ ಎನ್ ಉಪಪ್ರಾಂಶುಪಾಲೆ ರೂಪಶ್ರೀ ಅತಿಥಿ ಪರಿಚಯ ನೀಡಿದರು. ವಿದ್ಯಾರ್ಥಿನಿ ಅಲಿಶಾ ಬಿಷಪ್ ಕಾರ್ಯಕ್ರಮ ನಿರೂಪಿಸಿದರು.