ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ 74ನೇ ಹುಟ್ಟು ಹಬ್ಬದ ಅಂಗವಾಗಿ ಜುಲೈ 20 ರಂದು ನಗರಪಾಲಿಕೆ ಆವರಣದಲ್ಲಿ ಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿದೆ ಎಂದು ಕನ್ನಡ ಸೇನೆ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ಒಗ್ಗೂಡಿ, ರಕ್ತದಾನ ಮತ್ತು ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಇದರ ಜೊತೆಗೆ ಪ್ರೊ.ಸಿದ್ದಪ್ಪ ಅವರ ನೇತೃತ್ವದಲ್ಲಿ 74 ವಿವಿಧ ಜಾತಿಯ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಕೆಲವರು ಅವರು ಹೊರಗಿನವರು ಎಂದು ಅಪಪ್ರಚಾರ ಮಾಡಿದ್ದರು. ಅವೆಲ್ಲವನ್ನೂ ಧಿಕ್ಕರಿಸಿ ತುಮಕೂರು ಜಿಲ್ಲೆಯ ಜನತೆ 1.78 ಲಕ್ಷಕ್ಕು ಅಧಿಕ ಮತಗಳನ್ಬು ನೀಡಿ ಗೆಲ್ಲಿಸಿದ್ದು, ಕೇಂದ್ರದ ಮಂತ್ರಿಯಾಗಿ ಕೇವಲ ಮೂವತೈದು ದಿನಗಳಲ್ಲಿ ಸುಮಾರು 350 ಕೋಟಿ ಅನುದಾನವನ್ನು ಜಿಲ್ಲೆಯ ಐದು ರೈಲ್ವೆ ಮೇಲ್ಸೇತುವೆಗಳಿಗೆ ಬಿಡುಗಡೆ ಮಾಡಿಸಿದ್ದಾರೆ.
ಅಲ್ಲದೆ ತುಮಕೂರು ರಾಯದುರ್ಗ ರೈಲ್ವೆ ಹಳಿ ನಿರ್ಮಾಣಕ್ಕೆ 600 ಕೋಟಿ ರೂ ಅನುದಾನ ಕೊಡಿಸುವ ಮೂಲಕ ನಾನೊಬ್ಬ ಕೆಲಸಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗಾಗಿ ಅವರ ಹುಟ್ಟು ಹಬ್ಬವನ್ನು ಕನ್ನಡಪರ ಸಂಘಟನೆಗಳು ಬಡವರಿಗೆ ಅನುಕೂಲ ಕಲ್ಪಿಸುವ ರೀತಿಯಲ್ಲಿ ಆಚರಣೆ ಮಾಡಲು ಹೊರಟಿದೆ ಎಂದರು.ಆರೋಗ್ಯ ಶಿಬಿರದಲ್ಲಿ ಸಿದ್ದಗಂಗಾ ಆಸ್ಪತ್ರೆಯ ಮಧುಮೇಹ, ಇಎನ್.ಟಿ, ಕೀಲು ಮತ್ತು ಮೂಳೆ ತಜ್ಣರು, ಸ್ತ್ರೀ ರೋಗ ತಜ್ಞರು, ದಂತವೈದ್ಯರು, ಚರ್ಮರೋಗ, ಜನರಲ್ ಫಿಜಿಷೀಯನ್, ಆಯುರ್ವೇದ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಜುಲೈ 20 ರಂದು ತುಮಕೂರಿಗೆ ಆಗಮಿಸುವ ಕೇಂದ್ರ ಸಚಿವ ವಿ.ಸೋಮಣ್ಣ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದ ನಂತರ ಪಾಲಿಕೆ ಆವರಣಕ್ಕೆ ಬಂದು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು, ಕೇಕ್ ಕತ್ತಿರಿಸಿ, ತದ ನಂತರ ಚಿತ್ರದುರ್ಗಕ್ಕೆ ತೆರಳಲಿದ್ದಾರೆ ಎಂದರು.ಪ್ರೊಫೆಸರ್ ಸಿದ್ದಪ್ಪ ಮಾತನಾಡಿ, ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ತುಮಕೂರು ವಿವಿಯೊಂದಿಗೆ ಸೇರಿ ಬಿದರೆಕಟ್ಟೆಯ ಹೊಸ ಕ್ಯಾಂಪಸ್ ನಲ್ಲಿ 74 ವಿವಿಧ ಜಾತಿಯ ಹಣ್ಣಿನ ಗಿಡಗಳ ಜೊತೆಗೆ, 400 ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ಅಲ್ಲದೆ ವೃಕ್ಷ ಮಿತ್ರ ಯೋಜನೆಯಡಿ ನಗರದ ಕೋಡಿ ಬಸವೇಶ್ವರ ದೇವಾಲಯದಿಂದ ಶ್ರೀ ದೇವಿ ಕಾಲೇಜುವರೆಗೆ ರಸ್ತೆಯ ವಿಭಜಕದಲ್ಲಿ ಬೇವಿನ ಗಿಡಗಳನ್ಬು ನೆಟ್ಟು ಪೋಷಿಸಲಾಗುತ್ತಿದೆ. ಅಲ್ಲದೆ ಅಮಾನಿಕೆರೆಯಲ್ಲಿ ಗಿಡ ನೆಡಲಾಗಿದೆ. ಜಿಲ್ಲಾಧಿಕಾರಿ ಅವರಣದಲ್ಲಿರುವ 308 ವಿವಿಧ ಜಾತಿಯ ಮರಗಳನ್ಬು ಗುರುತಿಸಿ,ಅವುಗಳ ವಿವರಗಳನ್ನು ಒಳಗೊಂಡ ನಾಮಫಲಕ ಅಳವಡಿಸುವ ಕೆಲಸ ನಡೆದಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಕೀಲ ಪಾವಗಡ ಶ್ರೀರಾಮ, ಕನ್ನಡಸೇನೆ ಸಂತೋಷ, ಶಬ್ಬೀರ್ ಅಹಮದ್, ರಾಮಚಂದ್ರರಾವ್, ಕೊಪ್ಪಲ್ ನಾಗರಾಜು, ವೆಂಕಟಾಚಲ ಮತ್ತಿತರರು ಉಪಸ್ಥಿತರಿದ್ದರು