ಚೆಸ್ಕಾಂ ನೌಕರರು ಹಾಗೂ ಕುಟುಂಬಸ್ಥರಿಗೆ ಹೆಲ್ತ್‌ ಕಾರ್ಡ್‌

| N/A | Published : May 02 2025, 12:17 AM IST / Updated: May 02 2025, 12:14 PM IST

ಚೆಸ್ಕಾಂ ನೌಕರರು ಹಾಗೂ ಕುಟುಂಬಸ್ಥರಿಗೆ ಹೆಲ್ತ್‌ ಕಾರ್ಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಚೆಸ್ಕಾಂನ  ಅಧಿಕಾರಿಗಳು, ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಕಾರ್ಡ್ 

  ಹೊಳೆನರಸೀಪುರ : ಚೆಸ್ಕಾಂನಲ್ಲಿ ಲೈನ್ ಕೆಲಸ ಮಾಡುವವರು, ಪವರ್ ಮೆನ್ಸ್‌ಗಳಿಗೆ ಮತ್ತು ಮೆಕ್ಯಾನಿಕ್ಸ್‌ಗಳ ಸುರಕ್ಷತೆಗಾಗಿ ಮುಂಜಾಗ್ರತೆ ಉಪಕರಣಗಳ ಕಿಟ್ ವಿತರಿಸಲಾಗುತ್ತಿದೆ. ಜತೆಗೆ ಇಲಾಖೆಯ ಅಧಿಕಾರಿಗಳು, ನೌಕರರು ಹಾಗೂ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಕಾರ್ಡ್ ನೀಡುವ ಮೂಲಕ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನ್ ಕುಮಾರ್‌ ತಿಳಿಸಿದರು.

ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಹೆಲ್ತ್ ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಸೆಸ್ಕಾಂ ವಿಭಾಗದಲ್ಲಿ ೨ ತಾಲೂಕುಗಳಿದ್ದು, ಹೊಳೆನರಸೀಪುರ ಹಾಗೂ ಅರಕಲಗೂಡು ತಾಲೂಕಿನಲ್ಲಿ ೪ ಉಪ ವಿಭಾಗಗಳು ಹಾಗೂ ೧೬ ಭಾಗಗಳಿದ್ದು(ಸೆಕ್ಷನ್‌ಗಳು), ಒಟ್ಟು ೪೧೩ ಅಧಿಕಾರಿಗಳು ಹಾಗೂ ನೌಕರರು ಇದ್ದು, ಕುಟುಂಬ ಸದಸ್ಯರು ಸೇರಿ ಸುಮಾರು ೧೩೦೦ ಜನರಿಗೆ ಹೆಲ್ತ್ ಕಾರ್ಡ್ ವಿತರಿಸಲಾಗುತ್ತಿದೆ. ೨ ಲಕ್ಷ ರು. ಚಿಕಿತ್ಸಾ ವೆಚ್ಚ ಪಡೆಯಬಹುದು, ೨ ಲಕ್ಷ ರು. ಮೀರಿದ ಸನ್ನಿವೇಶದಲ್ಲಿ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯ ಅಗತ್ಯ ದಾಖಲಾತಿಯನ್ನು ಸಲ್ಲಿಸಿ, ನಗದು ಪಡೆಯಬಹುದು ಎಂದರು. ಲೈನ್ ಕೆಲಸ ಹಾಗೂ ಪವರ್‌ ಮೆನ್ಸ್‌ಗಳಿಗೆ ಮತ್ತು ಮೆಕ್ಯಾನಿಕ್ಸ್‌ಗಳು ಸೇರಿ ಒಟ್ಟು ೨೯೦ ಜನರಿಗೆ ಮುಂಜಾಗ್ರತೆ ಉಪಕರಣಗಳನ್ನು ವಿತರಿಸಲಾಗುತ್ತದೆ ಎಂದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೇಂದ್ರ ಕಚೇರಿಯಲ್ಲಿ ನಡೆಸಿದ ಕಾರ್ಯಕ್ರಮದ ಸಂಸ್ಥೆಯ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಲರಾಜು ಅವರು ಮಾಡಿದ ಭಾಷಣದ ನೇರ ಪ್ರಸಾರವನ್ನು ಎಲ್‌ಇಡಿ ಪರದೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಹಂಗರಹಳ್ಳಿ ಎಇಇ ಇಂದೂಧರಗೌಡ, ಲೆಕ್ಕಾಧಿಕಾರಿ ಉಮಾಶಂಕರ್, ಎಇಇ ದೀಪಕ್, ಯೋಗೇಶ್, ಚಿದಂಬರಂ, ಚಿನ್ನಸ್ವಾಮಿ ಹಾಗೂ ಸಹೀದಾ ಕೌಸರ್ ಬೇಗ್, ಸಹಾಯಕ ಇಂಜಿನಿಯರ್‌ಗಳಾದ ಶ್ರೀಧರ್, ರಾಘವೇಂದ್ರ, ಹರೀಶ್, ಸಂತೋಷ್, ಸ್ವಾಮಿ, ರಜನೀಶ್, ಸುನೀಲ್, ಅಧಿಕಾರಿ ರಂಗಣ್ಣ, ವಿಜಯ್ ಕುಮಾರ್, ಶಿವಕುಮಾರ್, ಪ್ರವೀಣ್, ಇತರರು ಇದ್ದರು.