ಸಾರಾಂಶ
ಲಿಂಗಸುಗೂರ ಸರ್ಕಾರಿ ಆಸ್ಪತ್ರೆಯ ಎನ್ಎಚ್ಎಂ ಒಳ ಗುತ್ತಿಗೆ ನೌಕರರು ಸೇವೆ ಖಾಯಂ ಗೊಳಸಿಬೇಕೆಂದು ಆಗ್ರಹಿಸಿ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರ
ಸೇವೆ ಖಾಯಂಗೊಳಿಸಬೇಕೆಂದು ಆಗ್ರಹಿಸಿ ಆರೋಗ್ಯ ಇಲಾಖೆಯ ಎನ್‌ಎಚ್ಎಂ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಖಾಯಮಾತಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎನ್‌ಎಚ್ಎಂ ಒಳಗುತ್ತಿಗೆ ನೌಕರರ ಸಂಘದಿಂದ ನೌಕರರು ಸರ್ಕಾರದ ಗಮನ ಸೆಳೆದರು.ತಾಲೂಕಿನಲ್ಲಿ ಲಿಂಗಸುಗೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಇತರೆಡೆ ಎನ್‌ಎಚ್ಎಂನಡಿ ಕಳೆದ 20 ವರ್ಷಗಳಿಂದ ಒಳಗುತ್ತಿಗೆ ನೌಕರರಾರಿ 28,258 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊರೋನಾ ವೇಳೆ ವಾರಿಯರ್ಸ್ ಆಗಿ ಮಹಾಮಾರಿ ತಡೆಗಟ್ಟಲು ಕೆಲಸ ಮಾಡಿದ್ದೇವೆ. ಇದರ ಜೊತೆಗೆ ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದ್ದೇವೆ. ಇದನ್ನು ಮನಗಂಡು ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಎನ್‌ಎಚ್ಎಂ ನೌಕರರ ಸೇವೆ ಖಾಯಂಗೊಳಿಸುವ ಕುರಿತು ವಿಧಾನಸಭಾ ಚುನಾವಣೆ ಪಕ್ಷದ ಪ್ರಣಾಳಿಕೆಯಲ್ಲಿ ಇತ್ತು. ಅದರಂತೆ ಆರೋಗ್ಯ ಸಚಿವರು ಇಲಾಖೆ ಸಭೆ ನಡೆಸಿ ಎನ್‌ಎಚ್ಎಂ ನೌಕರರ ಸೇವೆ ಖಾಯಂಗೊಳಿಸಲು ತಯಾರಿಸಿದ ಕಡತ ಅಲ್ಲೇ ಇದೆ. ಸರ್ಕಾರದ ಮೇಲೆ ಸೇವೆ ಖಾಯಂ ಮಾಡುವ ಕುರಿತು ಮತ್ತಷ್ಟು ಎತ್ತಡ ಹೇರಲು ಮುಂದಾಗಿ. ರಾಜ್ಯದಾದ್ಯಂತ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ಮಾಡುತ್ತಾ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ಈ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಭೀಸಾಬ ಆನಾಹೊಸೂರು, ತಾಲೂಕ ಅಧ್ಯಕ್ಷ ಗ್ಯಾನಪ್ಪ ರಾಠೋಡ, ಡಾ.ಸೂಗೂರೇಶ, ಡಾ.ಸೌಮ್ಯ, ಡಾ.ರಜನಿ, ಡಾ.ಇಕ್ಬಾಲ್, ಮಹಾಂತೇಶ ಬ್ಯಾಳಿ, ರವಿ ಹೂಗಾರ, ಪ್ರತಾಪ್, ಹನುಮೇಶ ಉಪ್ಪೇರಿ, ಭಾರತಿ, ಪ್ರೇಮಾ, ಶಾಂತ, ಚಂದ್ರಕಲಾ ಇದ್ದರು