ಸಾರಾಂಶ
230ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಂಡರು.
ಹೊಸಪೇಟೆ: ಆಯುರ್ವೇದದ ಧ್ಯೇಯದಂತೆ ‘ಸರ್ವೇ ಸಂತು ನಿರಾಮಯಾ’ ಅಂದರೆ ಎಲ್ಲರೂ ನಿರೋಗಿಗಳಾಗಿರಲು ಮನೆ ಆಹಾರ ಸೇವನೆಯಿಂದ ಮಹಾ ಆರೋಗ್ಯ ಸಾಧ್ಯವಾಗಲಿದೆ ಎಂದು ಇನ್ನರ್‌ವೀಲ್ ಅಧ್ಯಕ್ಷೆ ನೈಮಿಷಾ ಹೇಳಿದರು.
ನಗರದ ರೋಟರಿ ಕ್ಲಬ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕ, ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ಆಯುರ್ವೇದ ದಿನಾಚರಣೆ ಪೂರ್ವಭಾವಿಯಾಗಿ ತಜ್ಞ, ಪರಿಣಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಚಿಕಿತ್ಸೆ ಸಲಹೆ, ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎಚ್. ಗುರುಬಸವರಾಜ, ಆಯುಷ್ ಫೆಡೆರೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೇದಾರೇಶ್ವರ ದಂಡಿನ್ ಮಾತನಾಡಿದರು. 230ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಂಡರು.
ಮುನಿವಾಸುದೇವರೆಡ್ಡಿ, ಪ್ರಸಾದ್ ಬಾಬು, ಶೈಲೇಂದ್ರ ಪ್ರತಾಪ್ ಸಿಂಗ್, ರಾಧಾ ಗುರುಬಸವರಾಜ್, ಚೇತನ್, ಸಿಕಂದರ್, ಹಾಲಮ್ಮ, ಚಂದ್ರಶೇಖರ್ ಶೆಟ್ಟಿ, ಬಳಗಾನೂರು ಮಂಜುನಾಥ, ಸರಸ್ವತಿ ಕೋಟೆ, ಹೇಮಲತಾ, ರೂಪ್ ಸಿಂಗ್ ರಾಥೋಡ್, ಶಿವಶರಣಯ್ಯ, ಆರತಿ ಹಿರೇಮಠ್, ಅಶೋಕ್, ಮಂಜುನಾಥ್ ಹನಸಿ, ಯಶ್ವಂತ್, ಧೀರಜ್ ಇದ್ದರು.ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಚಿಕಿತ್ಸೆ ಸಲಹೆ, ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.