ಆರೋಗ್ಯ ಮಾಹಿತಿ, ತಪಾಸಣಾ, ಕಾನೂನು ಅರಿವು ಕಾರ್ಯಕ್ರಮ

| Published : Feb 05 2025, 12:31 AM IST

ಸಾರಾಂಶ

ಆರೋಗ್ಯವೇ ನಮಗೆ ಒಂದು ಸಂಪತ್ತು. ಆರೋಗ್ಯವನ್ನು ಕಾಪಾಡಿಕೊಂಡರೆ ಅದಕ್ಕಿಂತ ಸಂಪತ್ತು ಬೇರೊಂದಿಲ್ಲ ಎಂದು ಹೊಸಮನಿ ಪುಂಡಲಿಕ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆರೋಗ್ಯವೇ ನಮಗೆ ಒಂದು ಸಂಪತ್ತು. ಆರೋಗ್ಯವನ್ನು ಕಾಪಾಡಿಕೊಂಡರೆ ಅದಕ್ಕಿಂತ ಸಂಪತ್ತು ಬೇರೊಂದಿಲ್ಲ. ಹಾಗಾಗಿ ನಾವು ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಉತ್ತಮ ಆರೋಗ್ಯ ಹೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲಿಕ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಮತ್ತು ಜಿಲ್ಲಾ ಆಯುಷ್ ಇಲಾಖೆ, ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನಡೆದ ‘ಆರೋಗ್ಯ ಮಾಹಿತಿ, ತಪಾಸಣಾ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ನಿರಂಜನ್ ಮಾತನಾಡಿ ಆಯುಷ್ ಇಲಾಖೆಯು ಸುಸಜ್ಜಿತ ಸವಲತ್ತು ಹೊಂದಿರುವ ಆಸ್ಪತ್ರೆಯಾಗಿದೆ. ಹಾಗೆಯೇ ನಮ್ಮ ವೈದ್ಯಕೀಯ ವ್ಯವಸ್ಥೆಯು ಬಹಳ ದೊಡ್ಡಮಟ್ಟದಲ್ಲಿ ಬೆಳೆದಿದೆ. ವಿದೇಶಿಜನರು ಹೆಚ್ಚಾಗಿ ಇದರ ಉಪಯೋಗ ಪಡೆದುಕೊಂಡು ಕಲಿತು ಇದರ ತರಬೇತಿಯನ್ನು ಪಡೆದು ಅವರ ದೇಶದಲ್ಲಿ ಮಾಹಿತಿ ನೀಡಿ ಅದರ ಆಸಕ್ತಿ ತೋರುತ್ತಿದ್ದಾರೆ. ವಿಪರ್ಯಾಸವೇನೆಂದರೆ ಭಾರತೀಯರಾದ ನಾವು ನಮ್ಮ ಪದ್ಧತಿಯನ್ನು ಪಡೆದುಕೊಳ್ಳದೆ ಇರುವುದು ಬೇಸರದ ವಿಷಯ ಎಂದು ಬೇಸರ ವ್ಯಕ್ತ ಪಡಿಸಿದರು.ಹಾಗೆಯೇ ಆಯುರ್ವೇದ ಪಿತಾಮಹರಾದ ಚರಕ ಅವರು ತಂತ್ರಜ್ಞಾನ ವಿಲ್ಲದೆ ಆಗಿನ ಸಮಯದಲ್ಲಿ ಎಲ್ಲಾ ಖಾಯಿಲೆಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು ಎಂದರೆ ನಮಗೆ ಬಹಳ ವಿಶೇಷ. ನಾವು ಹೆಚ್ಚಾಗಿ ಆಯುರ್ವೇದ ಚಿಕಿತ್ಸೆಯನ್ನು ಬಳಸಬೇಕು ಅದರ ಉಪಯೋಗಗಳನ್ನು ಪಡೆಯಬೇಕು. ನಾವು ಹೆಚ್ಚಾಗಿ ಆಯುರ್ವೇದ ಚಿಕಿತ್ಸೆಯನ್ನು ಬಳಸಬೇಕು ಅದರ ಉಪಯೋಗಗಳನ್ನು ಪಡೆಯಬೇಕು ಎಂದು ತಿಳಿಸಿದರು.ಹಾಗೆಯೇ ಆಯುಷ್ ಇಲಾಖೆಯ ವತಿಯಿಂದ ರಕ್ತದೊತ್ತಡ ಪರೀಕ್ಷೆ, ಸಕ್ಕರೆ ಖಾಯಿಲೆ ಪರೀಕ್ಷೆಗಳನ್ನು ನಡೆಸಲಾಯಿತು.1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಶಾಂತಿ, 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಕೆ.ಬಸವರಾಜ್, ಕೌಟುಂಬಿಕ ನ್ಯಾಯಾಲಯ ಪ್ರಧಾನ ನ್ಯಾಯಾಧೀಶರಾದ ಎನ್.ಸುಬ್ರಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಎನ್.ಬಿ.ಜಯಲಕ್ಷ್ಮಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಸಿ.ಎನ್.ಮುನಿರತ್ನಮ್ಮ, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಪ್‌ಸಿ ಎನ್.ಎ.ನಾಗೇಶ್, ಸರ್ಕಾರಿ ಅಭಿಯೋಜಕರಾದ ಕೆ.ಜಿ.ಅಶ್ವಿನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜ ಜಿ., ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ.ಅರುಣ್ ಪಿ.ಜಿ., ಜಿಲ್ಲಾ ಸರ್ಕಾರಿ ಆರ್ಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ.ಪಲ್ಲವಿ ನಾಯಕ್, ಇತರರು ಇದ್ದರು.