ನಮ್ಮ ಜೀವನಶೈಲಿ, ಆರೋಗ್ಯಕರ ಆಹಾರ ಸೇವನೆ, ಸ್ವಚ್ಛತೆ ಮತ್ತು ಗ್ರಾಮದ ನೈರ್ಮಲ್ಯೀಕರಣ ಉತ್ತಮವಾಗಿಟ್ಟುಕೊಳ್ಳಬೇಕು. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುವ ಮನಸ್ಥಿತಿ ದೂರಾಗಬೇಕು.
ನರಗುಂದ: ₹65 ಲಕ್ಷ ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡವು ನೆಲಮಹಡಿ ಹಾಗೂ 1ನೇ ಅಂತಸ್ತು ಒಳಗೊಂಡಿದೆ. ಐಶ್ವರ್ಯಕ್ಕಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಕಟ್ಟಡವು ಗುಣಮಟ್ಟದ ಕಟ್ಟಡವಾಗಿ ಶೀಘ್ರ ನಿರ್ಮಾಣವಾಗಲಿ ಎಂದು ಮಾಜಿ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಶನಿವಾರ ತಾಲೂಕಿನ ಹದಲಿ ಗ್ರಾಮದಲ್ಲಿ ₹65 ಲಕ್ಷ ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿನ ವೀರಭದ್ರೇಶ್ವರ, ಶಿವಯೋಗೇಶ್ವರ ಹಾಗೂ ಹನುಮಂತ ದೇವಸ್ಥಾನಕ್ಕೆ ತಲಾ ₹5 ಲಕ್ಷ ಶಾಸಕರ ಅನುದಾನವನ್ನು ನೀಡಲಾಗಿದೆ. ದೇವಸ್ಥಾನ ಕಟ್ಟಡವು ಶೀಘ್ರ ನಿರ್ಮಾಣಗೊಳ್ಳಲಿ. 40 ವಯಸ್ಸು ದಾಟಿದ ಮೇಲೆ ಜನತೆ ಆರೋಗ್ಯದ ಕಡೆ ಗಮನ ಹರಿಸಬೇಕು.ನಮ್ಮ ಜೀವನಶೈಲಿ, ಆರೋಗ್ಯಕರ ಆಹಾರ ಸೇವನೆ, ಸ್ವಚ್ಛತೆ ಮತ್ತು ಗ್ರಾಮದ ನೈರ್ಮಲ್ಯೀಕರಣ ಉತ್ತಮವಾಗಿಟ್ಟುಕೊಳ್ಳಬೇಕು. ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುವ ಮನಸ್ಥಿತಿ ದೂರಾಗಬೇಕು. ನಮ್ಮ ಕರ್ತವ್ಯವನ್ನು ನಾವು ಮಾಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ನಮ್ಮ ಆರೋಗ್ಯವು ಚೆನ್ನಾಗಿರಲಿದೆ. ಗ್ರಾಮದಲ್ಲಿನ ಸೊಸೈಯಿಟಿ ಗೋದಾಮು ಕಟ್ಟಡ ನಿರ್ಮಾಣಕ್ಕೆ ₹5 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಿಬಿ ಜಿ ರಾಮ್ ಬಿ ಯೋಜನೆ ಅಡಿಯಲ್ಲಿ ಗ್ರಾಮದ ಹೊಲಗಳಿಗೆ ಹೋಗುವ ರಸ್ತೆ ಮತ್ತು ಕಾಲುವೆಗಳಲ್ಲಿನ ಮುಳ್ಳುಕಂಟಿಗಳನ್ನು ಶೀಘ್ರ ತೆರವುಗೊಳಿಸಿ, ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ತಾಪಂ ಇಒ ಶ್ರೀಧರ ಚಿನಗುಂಡಿ, ಡಾ. ರೇಣುಕಾ ಕೊರವನವರ, ಡಾ. ಪಂಕಜಾ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಬಸವಂತಪ್ಪ ಸುಂಕದ, ಭೀಮಶಿ ಯಾವಗಲ್ಲ, ಸಿ.ಎಂ. ಬದ್ನಿಕಾಯಿ, ಅಜ್ಜನಗೌಡ ಅಲ್ಲನಗೌಡ್ರ, ಬಸವರಾಜ ಹುಡೇದ, ಗುತ್ತಿಗೆದಾರ ಬಸವರಾಜ ಗೊರಕನವರ ಇತರರು ಇದ್ದರು.