ಕಾರ್ಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ

| Published : Apr 21 2025, 12:55 AM IST

ಸಾರಾಂಶ

ಸಂಚಾರಿ ಆರೋಗ್ಯ ಘಟಕವನ್ನು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಒಂದು ಆಶದಾಯಕ ಯೋಜನೆಯನ್ನು ಘನ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಉದ್ಘಾಟನೆಯನ್ನ ರಾಜ್ಯಾದ್ಯಂತ ಮಾಡಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿಸಿ ಸತ್ಯಭಾಮ ಮತ್ತು ಕಾರ್ಮಿಕ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಯಮುನ ಸೇರಿ ಉದ್ಘಾಟನೆ ಮಾಡಿದ್ದೇವೆ. ಇದೊಂದು ಅದ್ಭುತವಾದಂತಹ ಯೋಜನೆಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಆರೋಗ್ಯ ಸೇವೆಗಾಗಿ ಬಿಡುಗಡೆ ಮಾಡಿರುವ ಮೂರು ಬಸ್ಸುಗಳಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಸಂಸದರು, ಸಂಚಾರಿ ಆರೋಗ್ಯ ಘಟಕವನ್ನು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಒಂದು ಆಶದಾಯಕ ಯೋಜನೆಯನ್ನು ಘನ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಉದ್ಘಾಟನೆಯನ್ನ ರಾಜ್ಯಾದ್ಯಂತ ಮಾಡಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿಸಿ ಸತ್ಯಭಾಮ ಮತ್ತು ಕಾರ್ಮಿಕ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಯಮುನ ಸೇರಿ ಉದ್ಘಾಟನೆ ಮಾಡಿದ್ದೇವೆ. ಇದೊಂದು ಅದ್ಭುತವಾದಂತಹ ಯೋಜನೆಯಾಗಿದೆ ಎಂದರು.

ಈ ಸಂಚಾರಿ ವಾಹನದಲ್ಲಿ ಬೇಸಿಕ್ಕಾಗಿ ಏನೇನು ಬೇಕು, ಒಳ್ಳೆಯ ಆರೋಗ್ಯ ಕಾರ್ಮಿಕನಿಗೆ ಏನು ಬೇಕು ಎಲ್ಲಾ ಸವಲತ್ತುಗಳು ಈ ಮೊಬೈಲ್ ಬಸ್ಸಿನಲ್ಲಿ ಇದೆ. ಕಾರ್ಮಿಕನು ಒತ್ತಡದಲ್ಲಿ ಕೆಲಸ ಮಾಡುವುದರಿಂದ ಮುಖ್ಯವಾಗಿ ಬೇಕಾಗಿರುವ ರಕ್ತ ಪರೀಕ್ಷೆ, ಬಿಪಿ, ಇಸಿಜಿ ವ್ಯವಸ್ಥೆಯಿದೆ. ಸ್ಥಳದಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಬಂದರೇ ಉಚಿತವಾಗಿ ಮೆಡಿಸಿನ್ ಕೊಡಲಾಗುತ್ತದೆ. ಇಂತಹ ಅದ್ಭುತ ಕಾರ್ಯಕ್ರಮ ನೀಡಿರುವ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆ ಹೇಳುತ್ತೇನೆ. ಕಾರ್ಮಿಕ ಇಲಾಖೆಯಲ್ಲಿ ಇಷ್ಟೆಲ್ಲಾ ಒಳ್ಳೆಯ ಬೆಳವಣಿಗೆ ಆಗಿರುವುದು ಹೆಮ್ಮೆಯ ವಿಷಯ. ಯಾರ ಬಳೀ ಕಾರ್ಮಿಕ ಕಾರ್ಡ್ ಇದೆ ಅವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ವರ್ಷದ ೩೬೫ ದಿನಗಳಲ್ಲಿ ಸರ್ಕಾರಿ ರಜೆ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲೂ ಪ್ರತಿ ಗ್ರಾಮಕ್ಕೂ ಬಂದು ಕಾರ್ಮಿಕ ಐಡಿ ಕಾರ್ಡ್ ಇದ್ದವರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು. ಏನಾದರೂ ಇದರಲ್ಲಿ ಸಮಸ್ಯೆ ಇದ್ದರೇ ಜಿಲ್ಲಾಧಿಕಾರಿಗಳು ಮತ್ತು ನಮಗೆ ಕೇಳಿ ಬಗೆಹರಿಸಿಕೊಳ್ಳಿ. ಮೂರು ಬಸ್ಸುಗಳು ಜಿಲ್ಲಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯದ ಕಿಟ್ ವಿತರಣೆ ಮಾಡಲಾಯಿತು. ಜಿಲ್ಲಾಧಿಕಾರಿಗಳು ತಾವೇ ಕೆಲ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ, ಇತರರು ಉಪಸ್ಥಿತರಿದ್ದರು.