ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಾನು ಹುಟ್ಟಿ ಬೆಳೆದು, ಆಡಿದ ಊರಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಜನ್ಮಭೂಮಿಗೆ ಸೇವೆ ಸಲ್ಲಿಸುತ್ತಿರುವ ಸಾರ್ಥಕತೆಯು ಪ್ರೀತಿ ಆರೈಕೆ ಟ್ರಸ್ಟ್ ಕುಟುಂಬಕ್ಕೆ ಒದಗಿದೆ ಎಂದು ಜಗಳೂರು ಮಾಜಿ ಶಾಸಕ ಟಿ.ಗುರುಸಿದ್ಧನಗೌಡ ಹೇಳಿದರು.ಜಗಳೂರು ತಾಲೂಕಿನ ಬಿದರಿಕೆರೆಯಲ್ಲಿ ಡಾ.ಟಿ.ಜಿ.ರವಿಕುಮಾರ್ ನೇತೃತ್ವದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಡೆದ ಆರೋಗ್ಯ ತಪಾಸಣೆ ಉಚಿತ 50ನೇ ಶಿಬಿರ ಉದ್ಘಾಟಿಸಿ ಮಾತನಾಡಿ, ದಾವಣಗೆರೆಯಂಥ ದೊಡ್ಡ ಪಟ್ಟಣಗಳಿಗೆ ಗ್ರಾಮೀಣ ಭಾಗದ ಬಡವರು, ಕೃಷಿಕರು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯ. ಅವರೆಲ್ಲರಿಗೂ ಮನೆಬಾಗಿಲಿಗೆ ಆರೋಗ್ಯ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದೊಂದಿಗೆ ಪ್ರೀತಿ ಆರೈಕೆ ಟ್ರಸ್ಟ್ ಹೆಜ್ಜೆ ಹಾಕುತ್ತಿದೆ ಎಂದರು.
ಪ್ರೀತಿ ಆರೈಕೆ ಟ್ರಸ್ಟ್ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ಮಾತನಾಡಿ, ಅತಿ ಕಡಿಮೆ ಅವಧಿಯಲ್ಲೇ 50ನೇ ಆರೋಗ್ಯ ಶಿಬಿರದ ಸಾರ್ಥಕತೆಗೆ ಬಂದು ತಲುಪಿದ್ದೇವೆ. ಕಳೆದ ಏಪ್ರಿಲ್ ಅಂತ್ಯದಲ್ಲಿ ದಿವಂಗತ ಪ್ರೀತಿ ಅವರ ಸ್ಮರಣೆಗಾಗಿ ಟ್ರಸ್ಟ್ ಪ್ರಾರಂಭ ಮಾಡಲಾಯಿತು. ಅಂದಿನಿಂದಲೂ ಹಲವು ಸಮಾಜ ಹಿತವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಬಾಬು ಮಾತನಾಡಿ, ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಏರ್ಪಡಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಸರಿ ಸುಮಾರು 28 ಸಾವಿರಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ಉಚಿತ ತಪಾಸಣೆ ಮಾಡಿರುವುದು ಸಣ್ಣ ಸಾಧನೆಯಲ್ಲ. ಜನರ ಮನೆಬಾಗಿಲಿಗೇ ಬಂದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವಂತಹ ಸಮಾಜ ಪರವಾದ, ಜೀವ ಪರವಾದ ಕರ್ತವ್ಯ ಮಾಡುತ್ತಿರುವ ಡಾ. ಟಿ.ಜಿ.ರವಿಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಹಂತೇಶ್, ಮಂಗಳಮ್ಮ, ಶಿವರುದ್ರಪ್ಪ, ಪ್ರಸನ್ನ ಕುಮಾರ, ಮುಖಂಡರಾದ ಕಬ್ಬೂರ್ ನಿಂಗಪ್ಪ, ಬೋರನಾಯಕ್, ಸದಾನಂದರೆಡ್ಡಿ, ಬಾರಿಕೆರೆ ತಿಪ್ಪಣ್ಣ, ರಸ್ತೆ ಮಾಚಿಕೆರೆ ತಿಪ್ಪೇಸ್ವಾಮಿ, ನಿಬಗೂರು ಮಲ್ಲಿಕಾರ್ಜುನ, ಆದಿಮನೆ ಶೇಖರಪ್ಪ, ಪ್ರವೀಣ್ ಪಾಟೀಲ್, ಅರವಿಂದ್, ನುಂಕೇಶ್ ಸೇರಿ ಹಲವು ಗ್ರಾಮಸ್ಥರಿದ್ದರು.ಆರೋಗ್ಯ ಶಿಬಿರಗಳಿಗೆ ಹೆಚ್ಚಿನ ಮನ್ನಣೆಆರೋಗ್ಯ ಉಚಿತ ತಪಾಸಣೆ ಶಿಬಿರಗಳಿಗೆ ದಾವಣಗೆರೆ ಜಿಲ್ಲೆಯಾದ್ಯಂತ ಹೆಚ್ಚಿನ ಮನ್ನಣೆ, ಮೆಚ್ಚುಗೆ ದೊರೆತಿದೆ, ಇದಕ್ಕೆ ನಾನು ಅಭಾರಿ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಇದ್ದಾಗಲೇ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಭಾರತವನ್ನು ವಿಶ್ವದ ಸರ್ವಶ್ರೇಷ್ಠ ದೇಶ ಮಾಡಲು ನಾವೆಲ್ಲರೂ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿದ್ದು ನಮ್ಮ ಯೋಗದಾನ ನೀಡೋಣ.
ಡಾ.ಟಿ.ಜಿ.ರವಿಕುಮಾರ, ಪ್ರೀತಿ ಆರೈಕೆ ಟ್ರಸ್ಟ್ ಮುಖ್ಯಸ್ಥ....