ಆರೋಗ್ಯದರಿವು ಮೂಡಿಸುವ ಕಾರ್ಯ ಶ್ಲಾಘನೀಯ

| Published : Sep 23 2025, 01:06 AM IST

ಸಾರಾಂಶ

ಗಳಿಸಿದ್ದನು ಉಪಯೋಗಿಸಲು ಆರೋಗ್ಯ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಅರಿವು ಮೂಡಿಸುತ್ತಿರುವ ಕಾರ್ಯ ಮಹತ್ತರ ಸಾಧನೆ ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗಳಿಸಿದ್ದನು ಉಪಯೋಗಿಸಲು ಆರೋಗ್ಯ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಅರಿವು ಮೂಡಿಸುತ್ತಿರುವ ಕಾರ್ಯ ಮಹತ್ತರ ಸಾಧನೆ ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್.ಪಾಟೀಲ ಹೇಳಿದರು.

ಮನೋಲಯ ಆಸ್ಪತ್ರೆಯ ಮನೋತ್ಸವ 8ನೇ ವಾರ್ಷಿಕೋತ್ಸವ ನಿಮಿತ್ತ ಸ್ವಯಂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಆರೋಗ್ಯಕ್ಕೆ ಔಷಧಿ ಇಲ್ಲ ಎನ್ನುವ ಸಮಯದಲ್ಲಿ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಮನೋಲಯ ಆಸ್ಪತ್ರೆಯ ಕಾರ್ಯ ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬಿಎಲ್‌ಡಿಇ ಆಸ್ಪತ್ರೆಯ ರಕ್ತ ನಿಧಿ ಮುಖ್ಯಸ್ಥ ಡಾ.ಸತೀಶ ಅರಕೇರಿ ಮಾತನಾಡಿ, ಮಾನಸಿಕ ಒತ್ತಡ, ನಿದ್ರಾಹೀನತೆ, ಮಾನಸಿಕ ಅಸಮತೋಲನ ಸೇರಿದಂತೆ ಅನೇಕ ಮಾನಸಿಕ ಕಾಯಿಲೆಗಳು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಒಬ್ಬ ವ್ಯಕ್ತಿಯಿಂದ ಪಡೆದ ರಕ್ತವೂ 3 ಜನರ ಜೀವ ಉಳಿಸುತ್ತದೆ‌ ಎಂದು ವಿವರಿಸಿದರು.ಧಾರವಾಡದ ಹವಾಮಾನ ಇಲಾಖೆ ಕೃಷಿ ಕೇಂದ್ರ ಮುಖ್ಯಸ್ಥ ಸಿ.ಬಿ‌.ಕಬಾಡಗಿ ಮಾತನಾಡಿ, ರಕ್ತ ದಾನ ಮಾಡಬೇಕು. ಮಾಡುವಾಗ ವ್ಯಕ್ತಿ ಆರೋಗ್ಯಯುತವಾಗಿರುವುದು ಉತ್ತಮ. ಅದಕ್ಕೆ ಪೌಷ್ಟಿಕ ಆಹಾರದ ಅವಶ್ಯಕವಾಗಿದೆ. ಇತ್ತಿಚಿನ ದಿನಗಳಲ್ಲಿ ಪೌಷ್ಟಿಕ ಆಹಾರ, ಸರಿಯಾದ ನಿದ್ರೆ, ಚಟುವಟಿಕೆ ಜೀವನ ಎಲ್ಲವೂ ಕಡಿಮೆ ಆಗಿದ್ದು ಅನಾರೋಗ್ಯಗಳಿಗೆ ಕಾರಣವಾಗುತ್ತಿದೆ ಎಂದರು. ಡಾ.ಮಧುಕರ ನಾಯ್ಡು ಮಾತನಾಡಿ, ಮನೋಲಯ ಆಸ್ಪತ್ರೆ ನೀಡುವ ಮಾನಸಿಕ ಆರೋಗ್ಯ ಜಾಗೃತಿ, ಯುವ ಮನಸುಗಳಿಗೆ ಮಾರ್ಗದರ್ಶನ, ಹಿರಿಯರಿಗೆ ಚಿಕಿತ್ಸಾ ಸಲಹೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಮಾನಸಿಕ ರೋಗ ಎಂದರೇ ಹುಚ್ಚು ಎಂದಲ್ಲ, ಅದಕ್ಕೂ ಚಿಕಿತ್ಸೆ ಇದೆ. ಹಂತ ಹಂತವಾಗಿ ವ್ಯಕ್ತಿ ಗುಣಮುಖನಾಗುತ್ತಾನೆ ಎಂದು ತಿಳಿಸಿದರು.

ಯರನಾಳ ಅಮೋಘಸಿದ್ದೇಶ್ವರ ದೇವಸ್ಥಾನ ಧರ್ಮದರ್ಶಿಗಳಾದ ಶಂಕರಗೌಡ ಪಾಟೀಲ ಮಾತನಾಡಿ, ಆಶೀರ್ವಚನ, ಆಧ್ಯಾತ್ಮಿಕ ಶಕ್ತಿ ಎನ್ನುವುದು ಅಪಾರ. ನಮ್ಮಲ್ಲಿರುವ ನಂಬಿಕೆಗಳೇ ಜೀವನಕ್ಕೆ ಶಕ್ತಿ. ಮನೋಲಯ ಆಸ್ಪತ್ರೆ ಉತ್ತಮ ಕೆಲಸ ಮಾಡುತ್ತಿದ್ದು ಇದು ಇನ್ನುಳಿದವರಿಗೆ ಸ್ಫೂರ್ತಿ ಎಂದರು.

ಮನೋಲಯ ಮುಖ್ಯಸ್ಥ ಡಾ.ಮನೋವಿಜಯ ಕಳಸಗೊಂಡ ಮಾತನಾಡಿ, ಮಾನಸಿಕ ಆರೋಗ್ಯ ಮತ್ತು ರಕ್ತದಾನದ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡುವ ಉದ್ದೇಶ ಪ್ರತಿ ವರ್ಷ ಮಾಡುತ್ತ ಮುನ್ನಡೆಯುತ್ತಿದ್ದೇವೆ. ಕಳೆದ 3 ವರ್ಷಗಳಿಂದ 680 ಗ್ರಾಮಗಳಿಗೆ ಮನೋಲಯ ಎಕ್ಸಪ್ರೆಸ್‌ ವಾಹನ ಮೂಲಕ ಭೇಟಿ ನೀಡಿ ಮಾನಸಿಕ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಜೊತೆಗೆ ಇದು ನಿರಂತರ ಸೇವೆ ಎಂದು ತಿಳಿಸಿದರು.ಸುಮಾರು 50 ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಿ.ಬಿ.ಕಬಾಡಗಿ, ಬಿಎಲ್‌ಡಿಇ ಹಾಗೂ ಮನೋಲಯ ಸಿಬ್ಬಂದಿ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.8 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸುತ್ತಿರುವ ಮನೋಲಯ ಆಸ್ಪತ್ರೆಯು ಸಾಮಾಜಿಕ ಕಳಕಳಿ, ಸಾಮಾಜಿಕ ಪ್ರಜ್ಞೆಯಿಂದ ಕೆಲಸ ಮಾಡುವುದರೊಂದಿಗೆ ರೋಗ ಬರುವುದಕ್ಕಿಂತ ಮುಂಚೆಯೇ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನಿಯ.

-ಎಸ್.ಎಸ್.ಪಾಟೀಲ, ಜಂಟಿ ಕೃಷಿ ನಿರ್ದೇಶಕರು.

ಮನೋಲಯ ಆಸ್ಪತ್ರೆ ರಕ್ತದಾನ ಶಿಬಿರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅನೇಕ ಜನರು ಸ್ವಯಂ ಪ್ರೇರಿತವಾಗಿ ರಕ್ತ ನೀಡುತ್ತಿದ್ದು ಖುಷಿಯ ವಿಚಾರ. ಮನೋಲಯ ಆಸ್ಪತ್ರೆಯ ಸಿಬ್ಬಂದಿ ಸಮಾಜದ ಪ್ರತಿ ಕ್ಷೇತ್ರಕ್ಕೂ ತಲುಪಿ ಮಾಹಿತಿ ನೀಡುತ್ತಿದ್ದು. ಮಾನಸಿಕ ಆರೋಗ್ಯ ಜಾಗೃತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

-ಡಾ.ಸತೀಶ ಅರಕೇರಿ, ಬಿಎಲ್‌ಡಿಇ ಆಸ್ಪತ್ರೆಯ ರಕ್ತ ನಿಧಿ ಮುಖ್ಯಸ್ಥರು.