ಭವಿಷ್ಯದ ಆಶಾಕಿರಣಗಳಾದ ಯುವಶಕ್ತಿ ನಕಾರಾತ್ಮಕ ವಿಚಾರಗಳು ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗದೇ ಸದೃಢ ದೇಹದೊಂದಿಗೆ ಆರೋಗ್ಯವಂತರಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ: ಭವಿಷ್ಯದ ಆಶಾಕಿರಣಗಳಾದ ಯುವಶಕ್ತಿ ನಕಾರಾತ್ಮಕ ವಿಚಾರಗಳು ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗದೇ ಸದೃಢ ದೇಹದೊಂದಿಗೆ ಆರೋಗ್ಯವಂತರಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತೀರ್ಥಹಳ್ಳಿ ಪಟ್ಟಣದ ಆರ್‍ಜಿ ಫಿಟ್ನೆಸ್ ಕ್ಲಬ್ಬಿನ ಆಶ್ರಯದಲ್ಲಿ ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ತುಂಗಾನದಿ ದಡದಲ್ಲಿ ಕರ್ನಾಟಕ ಬಾಡಿ ಬಿಲ್ಡ್‍ರ್ಸ್‌ ಅಸೋಸಿಯೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಪರಶುರಾಮ ಕ್ಲಾಸಿಕ್-2025 ರಾಜ್ಯಮಟ್ಟದ ಆಹ್ವಾನಿತ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಆರೋಗ್ಯವಂತ ಯುವಕರೇ ಈ ದೇಶದ ಆಸ್ತಿ. ದೇಹಧಾರ್ಡ್ಯ ಸ್ಪರ್ಧೆ ಕೇವಲ ಮನರಂಜನೆ ಮಾತ್ರ ಸೀಮಿತವಾದ ಕ್ರೀಡೆಯಾಗಿರದೇ ಯುವಕರಿಗೆ ಸ್ಫೂರ್ತಿ ನೀಡುವ ಮಾದರಿ ಕಾರ್ಯಕ್ರಮವಾಗಿದೆ. ಭವಿಷ್ಯದ ಆಶಾಕಿರಣಗಳಾದ ಯುವಶಕ್ತಿ ನಕಾರಾತ್ಮಕ ವಿಚಾರಗಳು, ಮಾದಕ ವಸ್ತುಗಳಿಗೆ ಬಲಿಯಾಗದೇ ಸದೃಢ ದೇಹ ಮತ್ತು ಧೀಃಶಕ್ತಿಯನ್ನು ಹೆಚ್ಚಿಸಕೊಳ್ಳುವ ಮೂಲಕ ಸಮಾಜದ ಶಕ್ತಿಯಾಗಿ ರೂಪುಗೊಳ್ಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸಮಯೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಪಪಂ ಅಧ್ಯಕ್ಷೆ ಗೀತಾ ರಮೇಶ್, ದಾನಿಗಳಾದ ಆರ್.ಮದನ್, ಡಿ.ಎಸ್.ಅಬ್ದುಲ್ ರಹಮಾನ್, ಕೆ.ನಾಗರಾಜ ಶೆಟ್ಟಿ, ನವೀನ್ ಹೆದ್ದೂರು, ಆರ್‍ಜಿ ಫಿಟ್ನೆಸ್‍ನ ರವಿಗೌಡ, ಜಾತ್ರೆ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಟಿ.ಎಲ್.ಸುಂದರೇಶ್ ಇತರರು ಇದ್ದರು.ಫಲಿತಾಂಶ:

55 ಕೆಜಿ ವಿಭಾಗ: 1.ರಾಜು ಮುಚುಂಡಿಕರ್ ಬೆಳಗಾವಿ, 2. ಗೋವಿಂದ ಯಾದವ್ ಉಡುಪಿ, 3.ಶುಭಂ ಚೌಗುಲೆ ಬೆಳಗಾವಿ, 4.ಗೌತಮ್ ಚಿಕ್ಕಮಗಳೂರು 5.ನಿತಿನ್‌ ಉಡುಪಿ.

60 ಕೆಜಿ ವಿಭಾಗ: 1.ಸೋಮಶೇಖರ್ ಖಾರ್ವಿ ಉಡುಪಿ, 2.ಅಫ್ತಾಬ್ ಬೆಳಗಾವಿ, 3.ಕೌಶಿಕ್ ಮಂಗಳೂರು, 4.ಸೂರಜ್ ಭಂಡಾರಿ ಬೆಳಗಾವಿ, 5.ವಿಶ್ವನಾಥ್ ದಂಡಿನ್ ಗದಗ.

65 ಕೆಜಿ ವಿಭಾಗ: 1.ಅಥೀಶನ್ ಬೆಳಗಾವಿ, 2.ವಿಶಾಲ್ ಬೆಳಗಾವಿ, 3.ಮಂಜುನಾಥ್ ಚಿತ್ರದುರ್ಗ, 4.ರಾಜು ಟಿ. ಚಿತ್ರದುರ್ಗ, 5.ಗಣೇಶ್ ಶಿವಮೊಗ್ಗ,

70 ಕೆಜಿ ವಿಭಾಗ: 1. ಪ್ರತಾಪ್ ಕಲ್ಕುಂಡೇಕರ್ ಬೆಳಗಾವಿ, 2.ನವೀನ್ ದಕ್ಷಿಣ ಕನ್ನಡ, 3.ಗೋಕುಲ್ ಗೌಡ ಶಿವಮೊಗ್ಗ, 4.ಬಸಪ್ಪ ಕೊಣಕರಿ ಬೆಳಗಾವಿ, 5.ಭಾವಿಶ್ ಉಡುಪಿ.

75 ಕೆಜಿ ವಿಭಾಗ: 1.ಪ್ರಥಮ್ ಪೂಜಾರಿ ದಕ್ಷಿಣ ಕನ್ನಡ, 2.ಸುನಿಲ್ ಭಟ್ಕಂಡೆ ಉಡುಪಿ, 3.ವಿನಾಯಕ್ ಶಿವಮೊಗ್ಗ, 4.ಶರತ್ ಶೇರ್ವೇಗಾರ್ ಉಡುಪಿ, 5.ವರುಣ್ ಕುಮಾರ್ ದಾವಣಗೆರೆ.

80 ಕೆಜಿ ವಿಭಾಗ: 1.ಪ್ರಶಾಂತ್ ಕುಮಾರ್ ಬೆಳಗಾವಿ, 2.ಅಮನ್‍ಷೇಕ್ ಉತ್ತರ ಕನ್ನಡ. 3.ವಿಶ್ವಕೀರ್ತಿ ಶಿವಮೊಗ್ಗ 4.ಸುಮಂತ್ ಉಡುಪಿ, 5.ಸಚಿನ್ ಶಿವಮೊಗ್ಗ.

85 ಕೆಜಿ ಮೇಲ್ಪ ವಿಭಾಗ: ವಿ.ಬಿ.ಕಿರಣ್ ಬೆಳಗಾವಿ, 2.ನವಾಜ್ ಉಡುಪಿ, 3.ಕಿಶನ್ ಶೆಟ್ಟಿ ಉಡುಪಿ, 4.ಚರಣ್‍ರಾಜ್ ಉಡುಪಿ, 5.ರೆಹಾನ್ ಷೇಕ್ ಶಿವಮೊಗ್ಗ.