ಸಾರಾಂಶ
ಬಹುತೇಕ ಎದೆ ನೋವು ಕಾಣಿಸಿಕೊಳ್ಳುವುದು ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ಒಂದು. ಈ ಸಮಯದಲ್ಲಿ ಕೆಲವರಿಗೆ ಎದೆಯಲ್ಲಿ ಭಾರ ಆದಂತೆ ಅನಿಸುತ್ತದೆ, ಇನ್ನು ಕೆಲವರಿಗೆ ಎದೆ ಮೇಲೆ ಯಾರೊ ಬಂದು ಕುಳಿತುಕೊಂಡು ಹಾಗೆ ಆಗುತ್ತದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಧು ಮೇಹಿಗಳಲ್ಲಿ ಕೆಲವರಿಗೆ ಹೃದಯಾಘಾತವಾದಾಗ ಎದೆ ನೋವು ಕಾಣಿಸುವುದಿಲ್ಲ. ಅಂತಹ ಸಮಯದಲ್ಲಿ ಮಧುಮೇಹಿಗಳು ಬಹಳ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಎಂ.ಎಸ್. ಕಾರ್ತಿಕ್ ತಿಳಿಸಿದರು ನಗರದ ಸರ್ಕಾರಿ ನೌಕರರ ಭವನದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘ ಶನಿವಾರ ಏರ್ಪಡಿಸಿದ್ದ ಹಿರಿಯ ನಾಗರಿಕರಿಗೆ ಮಾಹೆಗೊಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಡಯಾಬಿಟಿಕ್ ನಿಯಂತ್ರಣ ಹಾಗು ಆಹಾರ ಪದ್ದತಿ ಹಾಗು ಔಷದೋಪಚಾರದ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೃದಯಾಘಾತದ ಲಕ್ಷಣ
ಬಹುತೇಕ ಎದೆ ನೋವು ಕಾಣಿಸಿಕೊಳ್ಳುವುದು ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ಒಂದು. ಈ ಸಮಯದಲ್ಲಿ ಕೆಲವರಿಗೆ ಎದೆಯಲ್ಲಿ ಭಾರ ಆದಂತೆ ಅನಿಸುತ್ತದೆ, ಇನ್ನು ಕೆಲವರಿಗೆ ಎದೆ ಮೇಲೆ ಯಾರೊ ಬಂದು ಕುಳಿತುಕೊಂಡು ಹಾಗೆ ಆಗುತ್ತದೆ. ಹೃದಯಾಘಾತದ ಎದೆನೋವು ಸರಿಸುಮಾರು 15 ರಿಂದ 20 ನಿಮಿಷ, ಇಲ್ಲಾಂದ್ರೆ ಅರ್ಧ ಗಂಟೆವರೆಗೂ ಇರಬಹುದು, ದಿನ ಪೂರ್ತಿ ಇರುವುದಿಲ್ಲ ಎಂದರು.ಆದರೆ ದೀರ್ಘಕಾಲದ ಮಧು ಮೇಹಿಗಳಲ್ಲಿ ಅನಿಯಮಿತ ಸಕ್ಕರೆ ಅಂಶ ಹೆಚ್ಚಿರುವ ಕೆಲವರಿಗೆ ಹೀಗೆ ಹೃದಯಾಘಾತ ಸಂಭವಿಸುವ ಮುನ್ನ ಎದೆ ನೋವು ಕಾಣಿಸುವುದಿಲ್ಲಾ ಆದರೆ ವಿಪರೀತ ಬೆವರು, ದವಡೆಗಳ ಸ್ನಾಯು ಎಳೆತ ಮತ್ತು ಉಸಿರಾಟದ ತೊಂದರೆ ಕಾಣಿಸುತ್ತದೆ ಆಗ ಕೂಡಲೆ ಹತ್ತಿರದ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಮಾತ್ರ ತಿಳಿಯುತ್ತದೆ ಎಂದು ಹೇಳಿದರು. ಈ ವೇಳೆ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ವಿ. ಕೃಷ್ಣ,ಕಾರ್ಯದರ್ಶಿ ತಿರುಮಳಪ್ಪ, ಖಜಾಂಚಿ ಶ್ರೀನಿವಾಸರೆಡ್ಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಬಸವರಾಜ್,ಶ್ರೀನಿವಾಸ್,ಮತ್ತಿತರರು ಇದ್ದರು.