ಒತ್ತಡದಿಂದ ಹೃದಯಾಘಾತ ಹೆಚ್ಚಳ: ರಾಜೇಶಗೌಡ

| Published : Oct 14 2025, 01:00 AM IST

ಒತ್ತಡದಿಂದ ಹೃದಯಾಘಾತ ಹೆಚ್ಚಳ: ರಾಜೇಶಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಜೀವನ ಕ್ರಮ ಅನುಸರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಆಧುನಿಕ ಯುಗದಲ್ಲಿ ನಾವು ಅನುಸರಿಸುತ್ತಿರುವ ಜೀವನ ಶೈಲಿಯಿಂದ ಹೃದಯರೋಗ, ಕರುಳು, ಶಾಶ್ವಕೋಶದ ಕ್ಯಾನ್ಸರ್ ರೋಗಗಳು ಬರುತ್ತಿವೆ. ಆದ್ದರಿಂದ ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಜೀವನ ಕ್ರಮ ಅನುಸರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ಕಾರೇಹಳ್ಳಿಯಲ್ಲಿ ನಡೆದ ಡಾ. ಮನೋಹರ್. ಬಿ. ಡಾ.ಆಕಾಂಕ್ಷ ಧೀಮಾನು ರವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಪೂರ್ವಜರು ಉತ್ತಮ ಆಹಾರ ಸೇವಿಸುತ್ತಿದ್ದರು. ದೇಹಕ್ಕೆ ವ್ಯಾಯಾಮ ಆಗುವ ಕೆಲಸ ಮಾಡುತ್ತಿದ್ದರು. ಉತ್ತಮ ಹವಾಮಾನ ಇತ್ತು. ಆದ್ದರಿಂದ ಅವರು ೧೦೦ ವರ್ಷ ಬದುಕುತ್ತಿದ್ದರು. ಆದರೆ ಇತ್ತೀಚೆಗೆ ಒತ್ತಡ ಹೆಚ್ಚಾಗಿ ಹೆಚ್ಚು ಹೃದಯಾಘಾತಗಳು ಸಂಭವಿಸುತ್ತಿವೆ. ಜಯದೇವ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶೇ. ೪೦ಕ್ಕಿಂತ ಕಡಿಮೆ ವಯಸ್ಸಿನ ಯುವಕರು ಬರುತ್ತಿದ್ದಾರೆ. ಯುವಕರಲ್ಲಿ ಹೃದಯಾಘಾತ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮಕ್ಕಳು ತಂದೆ ತಾಯಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಕಾಲವಿತ್ತು. ಈಗ ತಂದೆ ತಾಯಿಗಳು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ನಾವು ಮುನ್ನೆಚ್ಚರಿಕೆ ಕ್ರಮವಾಗಿ ೩೫ ವರ್ಷ ಆದಮೇಲೆ ಪ್ರತಿ ವರ್ಷ ೬ ಗಳಿಗೊಮ್ಮೆ ದೇಹದ ತಪಾಸಣೆ ಮಾಡಬೇಕು. ದೇಹಕ್ಕೆ ದಿನ ನಿತ್ಯ ವ್ಯಾಯಾಮ ಮಾಡಬೇಕು. ಧೂಮಪಾನ, ಮದ್ಯಪಾನಗಳಂತಹ ದುಶ್ಚಟಗಳಿಗೆ ದಾಸರಾಗಬಾರದು ಎಂದರು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಎಚ್.ಎಂ.ಟಿ. ಬಲರಾಮಪ್ಪ, ಶ್ರೀರಾಮ್, ದ್ವಾರಕೀಶ್, ಮೂಡಲಗಿರಿಯಪ್ಪ, ತಿಮ್ಮಯ್ಯ, ಹನುಮೇಗೌಡ, ನರಸಿಂಹ ಗೌಡ, ಕರಿಯಪ್ಪ, ನರಸಿಂಹಮೂರ್ತಿ, ರಂಗಸ್ವಾಮಿ ಗೌಡ ಸೇರಿದಂತೆ ಹಲವರು ಹಾಜರಿದ್ದರು.